ಉಗ್ರವಾದಿಗಳ ಬಾಹುಳ್ಯದ ಪುಲ್ವಾಮ ಮತ್ತು ಶೋಪಿಯನ್ ಜಿಲ್ಲೆಗಳಲ್ಲಿ ಚುನಾವಣಾ ವಿರೋಧಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ.
ರಾಜ್ಯದಲ್ಲಿ ಐದನೆ ಹಂತದ ಮತದಾನ ನಡೆಯುತ್ತಿದ್ದು 11 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಪ್ರತಿಭಟನಾಕಾರರ ಗುಂಪು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿ ಅಶ್ರುವಾಯು ಸಿಡಿಸಿದರು. ಪುಲ್ವಾಮದ ಕ್ವಿಲ್ ಗ್ರಾಮದಲ್ಲಿ ಮತಗಟ್ಟೆಯತ್ತ ಪ್ರತಿಭಟನಾಕಾರರು ತೆರಳುತ್ತಿದ್ದ ವೇಳೆ ಭದ್ರತಾ ಪಡೆಗಳು ತಡೆಯಲು ಯತ್ನಿಸಿದ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಉಂಟಾಯಿತು.
ತೀವ್ರ ಗಾಯಗೊಂಡಿದ್ದ ಮುಜಾಮಿಲ್ ಅಹ್ಮದ್ ಗನಾಯ್ ಎಂಬಾತ ಶ್ರೀನಗರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ. ನವೆಂಬರ್ 17ರಿಂದ ಆರಂಭಗೊಂಡಿದ್ದ ಏಳು ಹಂತದ ಮತದಾನದಲ್ಲಿ ಇಷ್ಟು ದೊಡ್ಡ ಹಿಂಸಾಚಾರ ನಡೆದಿರುವುದು ಇದೇ ಮೊದಲ ಬಾರಿಯಾಗಿದೆ.
|