ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಿಹಾದ್‌ಗಾಗಿ ತೆರಳುತ್ತಿದ್ದೇನೆ ಎಂದಿದ್ದನಂತೆ ಉಗ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಹಾದ್‌ಗಾಗಿ ತೆರಳುತ್ತಿದ್ದೇನೆ ಎಂದಿದ್ದನಂತೆ ಉಗ್ರ
ಮುಂಬೈದಾಳಿ ನಡೆಸಿರುವ ಬಂಧಿತ ಉಗ್ರ ಫರೀದ್‌ಕೋಟಾದ ತನ್ನ ಗ್ರಾಮಕ್ಕೆ ಕೊನೆಯ ಬಾರಿ ಭೇಟಿ ನೀಡಿದ್ದಾಗ ತಾನು ಜಿಹಾದ್‌ಗಾಗಿ ತೆರಳುತ್ತಿರುವುದಾಗಿ ಹೇಳಿದ್ದನೆಂದು ಆತನ ಗ್ರಾಮಸ್ಥರು ಹೇಳಿದ್ದಾರೆ.

ಐದು ತಿಂಗಳ ಹಿಂದೆ ಒಕಾರ ಜಿಲ್ಲೆಯಲ್ಲಿರುವ ತನ್ನೂರಿಗೆ ತೆರಳಿದ್ದ, ವೇಳೆ ಅಜ್ಮಲ್ ಕಸಬ್ ಅಲಿಯಾಸ್ ಇಮ್ರಾನ್ ತಾನು ಜಿಹಾದ್ ತೆರಳುತ್ತಿರುವುದಾಗಿಯೂ ತನ್ನನ್ನು ಆಶೀರ್ವದಿಸು ಎಂದು ತನ್ನ ತಾಯಿಯನ್ನು ಕೋರಿರುವುದಾಗಿ ನೆರೆಹೊರೆಯವರು ಹೇಳಿರುವುದನ್ನು ಜಿಯೋ ಸುದ್ದಿವಾಹಿನಿ ಬಿತ್ತರಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ND

ಆರು ತಿಂಗಳ ಹಿಂದೆ ಊರಿಗೆ ಬಂದಿದ್ದ ಅಜ್ಮಲ್ ತಾನು ಜಿಹಾದ್‌ಗಾಗಿ ತೆರಳುತ್ತಿರುವುದಾಗಿಯೂ, ತನ್ನ ಹಣೆಬರಹವನ್ನು ಅಲ್ಲಾನ ಕೈಯಲ್ಲಿರಿಸುವುದಾಗಿ ಹೇಳಿದ್ದ ಎಂಬುದಾಗಿ ಜಿಯೋ ವಾಹಿನಿ ರಹಸ್ಯವಾಗಿ ಚಿತ್ರಿಸಿರುವ ದೃಶ್ಯದಲ್ಲಿ ಹೆಸರು ಹೇಳಲಿಚ್ಚಿಸದ ಅಜ್ಮಲ್‌ನ ನೆರೆಮನೆಯ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಅಜ್ಮಲ್ ಬಗ್ಗೆ ಮಾತನಾಡಲು ಹೆಚ್ಚಿನ ವ್ಯಕ್ತಿಗಳು ನಿರಾಕರಿಸುತ್ತಾರೆ ಎಂದು ಜಿಯೋ ಹೇಳಿದೆ. ಅದಾಗ್ಯೂ ವಾಹಿನಿಯು ರಹಸ್ಯವಾಗಿ ಮಾಡಿರುವ ಚಿತ್ರಣದಲ್ಲಿ, ಅಜ್ಮಲ್‌ನ ಕೊನೆಯ ಭೇಟಿಯ ವೇಳೆ ಆತನ ನೆರೆಹೊರೆಯವರು ಚರ್ಚಿಸಿದ್ದಾರೆ.

"ಅಜ್ಮಲ್ ತನ್ನ ಊರಿನ ಹುಡುಗರನ್ನು ಪಕ್ಕದ ಶಾಲೆಯ ಮೈದಾನದಲ್ಲಿ ಸೇರಿಸಿ, 'ನನ್ನನ್ನು ಹಿಡಿಯಿರಿ ನೋಡ್ವಾ' ಎಂದು ಸವಾಲು ಹಾಕಿ ಕುಸ್ತಿ ಪ್ರದರ್ಶನ ಮಾಡಿದ್ದ. ಬಳಿಕ ಆತ ಜಿಹಾದ್‌ಗೆ ಸೇರಿದ್ದ ಸುದ್ದಿ ಹೊರಬಂದಿತ್ತು ಎಂಬುದಾಗಿ ವ್ಯಕ್ತಿಯೊಬ್ಬ ಹೇಳಿದ" ಎಂಬುದಾಗಿ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಸತ್ ದಾಳಿ: ಶ್ರದ್ಧಾಂಜಲಿಗೆ ಬಂದದ್ದು 10 ಸಂಸದರು!
ಕಾಶ್ಮೀರ ಚುನಾವಣಾ ಹಿಂಸಾಚಾರಕ್ಕೆ ಓರ್ವ ಬಲಿ
ಉಗ್ರರ ದಾಳಿಯಿಂದ ಪ್ರಜಾಸತ್ತೆಗೆ ಭಂಗ
ಗೂಗಲ್ ಅರ್ಥ್‌ನಲ್ಲಿ ಪಾಕ್ ಮನೆ ತೋರಿಸಿದ ಅಜ್ಮಲ್
ಪಾಕ್ ಕಾರ್ಯಾಚರಣೆ ಕುರಿತು ಭಾರತ ಸಂಶಯ
ಆಸಿಡ್ ಆರೋಪಿಗಳು ಪೊಲೀಸರ ಗುಂಡಿಗೆ ಬಲಿ