ಭಾರತದ ವಾಯುದಳ ಪಾಕಿಸ್ತಾನದ ಗಡಿಯನ್ನು ಅನಧಿಕೃತವಾಗಿ ಪ್ರವೇಶಿಸಿವೆ ಎಂದು ಆರೋಪಿಸಿದ ಪಾಕ್, ಎಲ್ಲ ವಿಮಾನನಿಲ್ದಾಣಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿವೆ.ಆದರೆ ಭಾರತದ ವಾಯಪಡೆಗಳು ಪಾಕಿಸ್ತಾನದ ಆರೋಪವನ್ನು ತಳ್ಳಿಹಾಕಿವೆ.
ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭಾರತ ಎಚ್ಚರಿಕೆ ನೀಡಿದ ಎರಡು ವಾರಗಳ ನಂತರ ಪಾಕಿಸ್ತಾನ, ಭಾರತದ ವಾಯುಪಡೆಗಳು ವೈಮಾನಿಕ ಪ್ರದೇಶವನ್ನು ಉಲ್ಲಂಘಿಸಿವೆ ಎಂದು ಆರೋಪಿಸಿದೆ.
ಭಾರತದ ಎರಡು ಫೈಟರ್ ಜೆಟ್‌ಗಳು ಎರಡು ಬಾರಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿದ್ದರಿಂದ ವಿಮಾನ ನಿಲ್ದಾಣಗಳಲ್ಲಿ ತುರ್ತುಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಪಾಕಿಸ್ತಾನದ ವಾಯುದಳದ ಕಮಾಂಡರ್ ಹುಮಾಯೂನ್ ವಿಖಾರ್ ತಿಳಿಸಿದ್ದಾರೆ.
ಪಾಕಿಸ್ತಾನದ ಆರೋಪವನ್ನು ತಳ್ಳಿಹಾಕಿದ ಭಾರತದ ವಾಯುಸೇನೆ, ಭಾರತದ ಜೆಟ್ ಫೈಟರ್‌ಗಳು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿವೆ ಎನ್ನುವುದಕ್ಕೆ ಆಧಾರವಿಲ್ಲ ಎಂದು ಹೇಳಿಕೆ ನೀಡಿದೆ. |