ಮುಂಬೈಯಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಉಗ್ರರಿಗೆ ಜನರನ್ನು ಒತ್ತಾಯಾಳಾಗಿರಿಸಿಕೊಂಡು ಮಾಧ್ಯಮಗಳ ಮೂಲಕ ಬೇಡಿಕೆ ಸಲ್ಲಿಸುವಂತೆ ಲಷ್ಕರ್ ಮುಖಂಡರು ಆದೇಶ ನೀಡಿದ್ದರು ಎಂದು ಬದುಕುಳಿದ ಏಕೈಕ ಉಗ್ರಗಾಮಿ ಅಜ್ಮಲ್ ಕಸಬ್ ಹೇಳಿದ್ದಾನೆ.
ನವೆಂಬರ್ 26 ರಂದು 183 ನಾಗರಿಕರನ್ನು ಹತ್ಯೆ ಮಾಡಿದ 10 ಉಗ್ರಗಾಮಿಗಳಿಗೆ ಲಷ್ಕರ್-ಎ-ತೊಯಿಬಾ ಸಂಘಟನೆ ತರಬೇತಿ ನೀಡಿ ಎರಡು ತಂಡಗಳನ್ನು ಸಮುದ್ರ ಮಾರ್ಗದ ಮೂಲಕ ಮುಂಬೈಗೆ ರವಾನಿಸಲಾಯಿತು ಎಂದು ಪಾಕ್ ರಾಯಭಾರಿಗೆ ಕಾನೂನುಬದ್ದ ಸಹಾಯ ಮಾಡುವಂತೆ ಪತ್ರ ಬರೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ ಕಸಬ್ ಮತ್ತು ಆತನ ತಂಡವನ್ನು ವಿಪರೀತ ಜನಸಂದಣಿಯ ಸಮಯವಾದ ಬೆಳಿಗ್ಗೆ 7 ರಿಂದ11 ಗಂಟೆಯವರೆಗೆ ಮತ್ತು ರಾತ್ರಿ 7 ರಿಂದ 11 ಗಂಟೆಯವರೆಗಿನ ಸಮಯದಲ್ಲಿ ಗುಂಡಿನ ದಾಳಿ ನಡೆಸುವಂತೆ ಲಷ್ಕರ್ ಮುಖಂಡರು ನಿರ್ದೇಶನ ನೀಡಿದ್ದರು ಎಂದು ತಿಳಿಸಿವೆ. |