ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತ್ಯಾನಂದ್ ಭೋಕ್ತಾ ಅವರ ನಿವಾಸವನ್ನು ನಕ್ಸಲೀಯರು ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೆಳಗಿನ ಜಾವ 5 ಗಂಟೆಗೆ ಸುಮಾರು 50 ಜನರಿದ್ದ ನಕ್ಸಲೀಯ ತಂಡ ಮನೆಯನ್ನು ಸುತ್ತುವರಿದು,ಮನೆಯೊಳಗಿದ್ದವರನ್ನು ಹೊರಗೆ ಬರುವಂತೆ ಒತ್ತಾಯಿಸಿ ನಂತರ ಸ್ಪೋಟಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ರಂಜನ್ ತಿಳಿಸಿದ್ದಾರೆ.
ಡೈನಮೈಟ್‌ಗಳಿಂದ ಮನೆಯನ್ನು ಸ್ಫೋಟಿಸಿದ ಉಗ್ರರು, ತಾವು ಪರಾರಿಯಾಗುವ ಮುನ್ನ ಸ್ಪೋಟದ ಜವಾಬ್ದಾರಿಯನ್ನು ಹೊರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಎನ್‌ಡಿಎ ನೇತೃತ್ವದ ಸರಕಾರದಲ್ಲಿ ಭೋಕ್ತಾ ಕೃಷಿಸಚಿವರಾಗಿ ಸೇವೆ ಸಲ್ಲಿಸಿದ್ದರು,ಘಟನೆಯ ಸಂದರ್ಭದಲ್ಲಿ ರಾಂಚಿಯಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. |