ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 26/11ರ ಉಗ್ರರು ಎಲ್ಲಿಂದ ಬಂದರೆಂದು ವಿಶ್ವಕ್ಕೆ ಗೊತ್ತಿದೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
26/11ರ ಉಗ್ರರು ಎಲ್ಲಿಂದ ಬಂದರೆಂದು ವಿಶ್ವಕ್ಕೆ ಗೊತ್ತಿದೆ
WD
ಮುಂಬೈಯಲ್ಲಿ ನವೆಂಬರ್ 26ರಂದು ಉಗ್ರರು ಭಯೋತ್ಪಾದನಾ ದಾಳಿ ನಡೆಸಿರುವ ಬಳಿಕ ಮೊದಲ ಬಾರಿ ಭಾರತ ಮತ್ತು ಪಾಕಿಸ್ತಾನವು ಪ್ಯಾರಿಸ್‌ನಲ್ಲಿ ಮುಖಾಮುಖಿಯಾದ ವೇಳೆ ಮುಖ ತಿರುಗಿಸಿ ಕುಳಿತುಕೊಂಡ ಘಟನೆ ಸಂಭವಿಸಿದೆ.

ಫ್ರಾನ್ಸಿನ ವಿದೇಶಾಂಗ ಸಚಿವ ಬರ್ನಾರ್ಡ್ ಕೌಚ್ನರ್ ಅವರು ಪ್ರಾದೇಶಿಕ ಸಹಕಾರ ಮತ್ತು ಭದ್ರತಾ ವಿಚಾರಗಳನ್ನು ಅನೌಪಚಾರಿಕ ಮಟ್ಟದಲ್ಲಿ ಚರ್ಚಿಸಲು ಅಫ್ಘಾನಿಸ್ತಾನ ಮತ್ತು ಅದರ ನೆರೆಹೊರೆಯವರನ್ನು ಕರೆದಿರುವ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ಅಕ್ಕಪಕ್ಕದಲ್ಲೇ ಕುಳಿತಿದ್ದರೂ ಮುಖಬಿಗಿದುಕೊಂಡು ಮುಗುಮ್ಮಾಗಿದ್ದರು.

ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ಸಭೆಯಲ್ಲಿ ಪಾಲ್ಗೊಂಡಿದ್ದು ಉಭಯ ನಾಯಕರ ಮುಖದಲ್ಲಿ ಉದ್ವಿಗ್ನತೆ ಕಾಣಿಸಿಕೊಂಡಿತ್ತು.

"ಮುಂಬೈಯಲ್ಲಿ ಏನು ಸಂಭವಿಸಿತೊ ಅದು ಭಾರತದ ಘನತೆಯ ಮೇಲೆ ನಡೆಸಿದ ಹಲ್ಲೆ ಮತ್ತು ನಮ್ಮ ಜನತೆಗೆ ಮಾಡಿರುವ ಅವಮಾನ. ದಾಳಿಯ ತಯಾರಕರನ್ನು ಕಾನೂನಿನ ಕಟಕಟೆಗೆ ಎಳೆದು ತರಬೇಕು ಮತ್ತು ಜಾಗತಿಕ ಸಮುದಾಯವು ಒಟ್ಟಾಗಿ ದೃಢವಾದ ಕಾರ್ಯಾಚರಣೆ ನಡೆಸಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.

ಭಾರತವು ತನಗೆ ಲಭಿಸಿರುವ ಪುರಾವೆಯನ್ನು ಭಾರತದೊಂದಿಗೆ ಹಂಚಿಕೊಳ್ಳುವುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, "ಭಾರತವು ಈ ಹಿಂದೆ ತನ್ನಲ್ಲಿದ್ದ ಪುರಾವೆಯನ್ನು ಹಂಚಿಕೊಂಡಿದೆ ಮತ್ತು ವಿಶ್ವಕ್ಕೀಗ ಅವರು(ಉಗ್ರರು) ಎಲ್ಲಿಂದ ಬಂದರವರೆಂದು ತಿಳಿದಿದೆ. ಅಂತಾರಾಷ್ಟ್ರೀಯ ಸಮುದಾಯವು 'ಏನೂಇಲ್ಲದೆ' ಒಂದೇ ಧ್ವನಿಯಲ್ಲಿ ಮಾತನಾಡಿಲ್ಲ" ಎಂದು ಶರ್ಮಾ ನುಡಿದರು.

ಏತನ್ಮಧ್ಯೆ, ಪಾಕಿಸ್ತಾನವು ತಾನು ರಚನಾತ್ಮಕ ಸಲಹೆಗಳನ್ನು ಭಾರತದ ಮುಂದೆ ಇಟ್ಟಿರುವುದಾಗಿ ಹೇಳಿದೆ.

ಮುಂಬೈ ದಾಳಿಕೋರರನ್ನು ಕಾನೂನಿನ ಕಟಕಟೆಗೆ ತರಲು ಜಂಟಿ ತನಿಖೆ, ಹಾಗೂ ಸಹಕಾರದ ಮಾದರಿಗಾಗಿ ಪಾಕ್ ವಿದೇಶಾಂಗ ಸಚಿವರ ನೇತೃತ್ವದಲ್ಲಿ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗ ಒಯ್ಯುವ ಸಲಹೆಗಳನ್ನು ನೀಡಲಾಗಿದೆ ಎಂದು ಪಾಕಿಸ್ತಾನ ಸಚಿವ ಖುರೇಶಿ ಹೇಳಿದ್ದಾರೆ.

ಸಭೆಯಲ್ಲಿ ಪಾಕಿಸ್ತಾನವು ತಾವು ಸಹಕಾರ ನೀಡಲು ಸಿದ್ಧ ಎಂದು ಪದೇಪದೇ ಪುನರುಚ್ಚರಿಸಿದಾಗ ಭಾರತವು ಹೆಚ್ಚಿನ ರಚನಾತ್ಮಕ ಕ್ರಮಕ್ಕೆ ಆಗ್ರಹಿಸಿತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂಜನೀಯರಿಂಗ್ ವಿಧ್ಯಾರ್ಥಿ ಮೇಲೆ ಆಸಿಡ್ ದಾಳಿ
ನಕ್ಸಲೀಯರಿಂದ ಮಾಜಿ ಸಚಿವರ ನಿವಾಸ ಸ್ಫೋಟ
ಪಾಕ್ ಉಗ್ರಗಾಮಿಗಳ ತಾಣವಾಗಬಾರದು: ಪ್ರಧಾನಿ
ಒತ್ತೆಯಾಳಾಗಿಸಿ ಬೇಡಿಕೆ ಸಲ್ಲಿಸಲು ನಿರ್ದೇಶನ:ಕಸಬ್
ಭಾರತೀಯ ವಾಯುಪಡೆಯಿಂದ ಅನಧಿಕೃತ ಹಾರಾಟ : ಪಾಕ್
ಜಿಹಾದ್‌ಗಾಗಿ ತೆರಳುತ್ತಿದ್ದೇನೆ ಎಂದಿದ್ದನಂತೆ ಉಗ್ರ