ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿ ಕಾಂಗ್ರೆಸ್‌ಗೆ ಮತ್ತೊಂದು ಸ್ಥಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿ ಕಾಂಗ್ರೆಸ್‌ಗೆ ಮತ್ತೊಂದು ಸ್ಥಾನ
ದೆಹಲಿ ವಿಧಾನ ಸಭೆಯಲ್ಲಿ ಮತ್ತೊಂದು ಸ್ಥಾನ ಕಾಂಗ್ರೆಸ್ ವಶವಾಗಿದೆ. ರಾಜೀಂದರ್ ನಗರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಭಗವಾನ್ ದಾಸ್ ಅವರು ಗೆದ್ದಿದ್ದಾರೆ.

ಬಿಜೆಪಿ ಅಭ್ಯರ್ಥಿ ಪುರಾನ್ ಚಂದ್ ಯೋಗಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬಿಜೆಪಿಯು ಅವರ ಪತ್ನಿಯನ್ನು ಕಣಕ್ಕಿಳಿಸಿತ್ತು. ಪುರಾನ್ ಚಂದ್ ಅವರ ಪತ್ನಿ ಆಶಾ ಯೋಗಿಯವರನ್ನು ಭಗವಾನ್ ದಾಸ್ 5,406 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಭಗವಾನ್ ದಾಸ್ ಅವರು 29,394 ಮತಗಳನ್ನು ಗೆದ್ದಿದ್ದರೆ, ಆಶಾ 23,988 ಮತಗಳನ್ನು ಪಡೆದಿದ್ದಾರೆ. ಬಿಎಸ್ಪಿಯ ತ್ರಿಲೋಕ್ ಚಂದ್ ಅವರು 15,871 ಮತಗಳನ್ನು ಪಡೆದು ಕೊಂಡಿದ್ದಾರೆ.

ಈ ಸ್ಥಾನವನ್ನು ಬಿಜೆಪಿ ವಶದಿಂದ ಕಾಂಗ್ರೆಸ್ ಕಿತ್ತುಕೊಂಡಿದೆ. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಇದೀಗ ಕಾಂಗ್ರೆಸ್ 43 ಸ್ಥಾನಗಳನ್ನು ಪಡೆದಂತಾಗಿದೆ. ಬಿಜೆಪಿ 23 ಸ್ಥಾನಗಳನ್ನ ಪಡೆದರೆ, ನಾಲ್ಕು ಸ್ಥಾನಗಳನ್ನು ಇತರರು ಪಡೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ ಸೆನೆಟರ್ ಜಾನ್ ಕೆರ್ರಿ ಪ್ರಧಾನಿ ಭೇಟಿ
ವೋಟಿಗಾಗಿ ನೋಟು: ಅಮರ್ ಸಿಂಗ್‌ಗೆ ಕ್ಲೀನ್‌ಚಿಟ್
2012ರ ವೇಳೆಗೆ ಎಲ್ಲರಿಗೂ ವಿದ್ಯುತ್: ಶಿಂಧೆ
26/11ರ ಉಗ್ರರು ಎಲ್ಲಿಂದ ಬಂದರೆಂದು ವಿಶ್ವಕ್ಕೆ ಗೊತ್ತಿದೆ
ಇಂಜನೀಯರಿಂಗ್ ವಿಧ್ಯಾರ್ಥಿ ಮೇಲೆ ಆಸಿಡ್ ದಾಳಿ
ನಕ್ಸಲೀಯರಿಂದ ಮಾಜಿ ಸಚಿವರ ನಿವಾಸ ಸ್ಫೋಟ