ಮುಂಬೈದಾಳಿಯ ವೇಳೆ ಉಗ್ರೊಂದಿಗೆ ಕಾದಾಡಿದ ವೇಳೆ ವೀರಮರಣವನ್ನಪ್ಪಿದ 18 ಮಂದಿ ಭದ್ರತಾ ಸಿಬ್ಬಂದಿಗಳ ಸಂಬಂಧಿಗಳಿಗೆ, ಯೋಗ ಗುರು ಬಾಬಾ ರಾಮ್‌ದೇವ್ ಅವರು ಸೋಮವಾರ ಇಲ್ಲಿನ ಪ್ರಗತಿ ಮೈದಾನದಲ್ಲಿ ಫಲಕ, ಶಾಲು ಮತ್ತು ಐದು ಲಕ್ಷ ರೂಪಾಯಿಗಳ ಚೆಕ್ ಅನ್ನು ನೀಡಲಿದ್ದಾರೆ.ಬಾಬಾ ಅವರು ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿ ವೇಳೆ ಸಾವನ್ನಪ್ಪಿರುವ ಚಂದ್ರ ಶರ್ಮಾ ಅವರ ಸಂಬಂಧಿಗಳಿಗೂ ಗೌರವ ಸಲ್ಲಿಸಲಿದ್ದಾರೆ. ಶರ್ಮಾ ಅವರ ಕುಟುಂಬಿಕರಿಗೂ ಫಲಕ ಮತ್ತು ಐದು ಲಕ್ಷ ರೂಪಾಯಿಗಳ ಚೆಕ್ ನೀಡಲಿದ್ದಾರೆ.ರಾಮ ದೇವ್ ಅವರು ಮೃತರಿಗಾಗಿ 19 ಯಜ್ಞಕುಂಡಗಳಲ್ಲಿ ಶಾಂತಿ ಯಜ್ಞಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. |