ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒಬಿಸಿ ಆದಾಯ ಮಿತಿ ಏರಿಕೆ: ಕೇಂದ್ರಕ್ಕೆ ಸು.ಕೋ ನೋಟೀಸು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಿಸಿ ಆದಾಯ ಮಿತಿ ಏರಿಕೆ: ಕೇಂದ್ರಕ್ಕೆ ಸು.ಕೋ ನೋಟೀಸು
ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಬಯಸುವ ಇತರ ಹಿಂದುಳಿದ ಜಾತಿಗಳ(ಒಬಿಸಿ) ಕೆನೆಪದರ ಅಭ್ಯರ್ಥಿಗಳ ಆದಾಯ ಮಿತಿಯನ್ನು ಎರಡೂವರೆ ಲಕ್ಷದಿಂದ ನಾಲ್ಕುವರೆ ಲಕ್ಷಕ್ಕೆ ಏರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳಿಗೆ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಮತ್ತು ಪಿ. ಸದಾಶಿವಮ್ ಅವರನ್ನೊಳಗೊಂಡ ನ್ಯಾಯಪೀಠವು ನೋಟೀಸು ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ ಮೂರನೆ ವಾರಕ್ಕೆ ನಿಗದಿಪಡಿಸಿದೆ.

ಖಾಲಿ ಉಳಿದಿರುವ ಒಬಿಸಿ ಸ್ಥಾನಗಳಿಗೆ ಸಾಮಾನ್ಯ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಬೇಕು ಎಂಬ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ಒಬಿಸಿ ಅಭ್ಯರ್ಥಿಗಳ ಆದಾಯಮಿತಿಯನ್ನು ವಿಸ್ತರಿಸಿ ಸ್ಥಾನ ಭರ್ತಿ ಮಾಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

ನಾಯರ್ ಎಜುಕೇಶನ್ ಸೊಸೈಟಿ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯ ಈ ಆದೇಶ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಷ್ಣುವಿಗೆ ಪ್ರದಕ್ಷಿಣೆ ಹಾಕುತ್ತಿರುವ ವರಾಹ
ವೀರ ಯೋಧರ ಕುಟುಂಬಕ್ಕೆ ರಾಮ್‌ದೇವ್‌ರಿಂದ 5 ಲಕ್ಷ
ವಸುಂಧರಾ ವಿರುದ್ಧ ತನಿಖೆಗೆ ಗೆಹ್ಲೋಟ್ ಆದೇಶ
ದೆಹಲಿ ಕಾಂಗ್ರೆಸ್‌ಗೆ ಮತ್ತೊಂದು ಸ್ಥಾನ
ಅಮೆರಿಕ ಸೆನೆಟರ್ ಜಾನ್ ಕೆರ್ರಿ ಪ್ರಧಾನಿ ಭೇಟಿ
ವೋಟಿಗಾಗಿ ನೋಟು: ಅಮರ್ ಸಿಂಗ್‌ಗೆ ಕ್ಲೀನ್‌ಚಿಟ್