ಇಲ್ಲಿನ ಗ್ರೇಟರ್ ಕೈಲಾಸ್ ವಿಧಾನಸಭಾ ಸ್ಥಾನದಲ್ಲಿ ಗೆದ್ದು ಬಂದಿರುವ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ವಿ.ಕೆ.ಮಲ್ಹೋತ್ರಾ ತನ್ನ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ಸಂಸದೀಯ ಪಕ್ಷದ ಉಪನಾಯಕರಾಗಿರುವ ಮಲ್ಹೋತ್ರಾ ಅವರು ತಮ್ಮ ಈ ನಿರ್ಧಾರವನ್ನು ಸ್ಪೀಕರ್ ಸೋಮನಾಥ ಚಟರ್ಟಿಯವರಿಗೆ ಒಂದು ಗೆರೆಯ ಪತ್ರದ ಮೂಲಕ ತಿಳಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ವೇಳೆಗೆ ಇವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಾಗಿತ್ತು. ಆದರೆ ಬಿಜೆಪಿಯು ಚುನಾವಣೆಯಲ್ಲಿ ಅಧಿಕಾರ ವಹಿಸಲು ಸೋತಿಯಾದರೂ, ವೈಯಕ್ತಿಕವಾಗಿ ಮಲ್ಹೋತ್ರಾ ಚುನಾವಣೆಯಲ್ಲಿ ಗೆದ್ದಿದ್ದಾರೆ.
ತನ್ನ ವಿಧಾನಸಭಾ ಸ್ಥಾನವನ್ನು ಉಳಿಸಿಕೊಳ್ಳಲು ಅವರು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
"ದಕ್ಷಿಣ ದೆಹಲಿಯ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ನಿರ್ಧರಿಸಿದ್ದೇನೆ. ನಾನು ಗ್ರೇಟರ್ ಕೈಲಾಸ್ ಕ್ಷೇತ್ರದ ತನ್ನ ಜನತೆಗಾಗಿ ಕಾರ್ಯನಿರ್ವಹಿಸುತ್ತೇನೆ. ಅವರು ತನ್ನ ಶಾಸಕನಾಗಿ ಆರಿಸುವ ಮೂಲಕ ನನ್ನ ಮೇಲೆ ವಿಶ್ವಾಸ ತೋರಿದ್ದಾರೆ" ಎಂದು ಮಲ್ಹೋತ್ರಾ ಹೇಳಿದ್ದಾರೆ. |