ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೇವಬಂದ್ ಕುರಿತ ಪಾಕ್‌ ಹೇಳಿಕೆಗೆ ಭಾರತ ವಿಷಾದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವಬಂದ್ ಕುರಿತ ಪಾಕ್‌ ಹೇಳಿಕೆಗೆ ಭಾರತ ವಿಷಾದ
ನವದೆಹಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿಯು ದಾರುಲ್ ಉಲೂಮ್ ದೇವಬಂದ್ ಕುರಿತು ಮಾಡಿರುವ ಹೇಳಿಕೆಗೆ ಭಾರತ ವಿಷಾದ ವ್ಯಕ್ತಪಡಿಸಿದೆ. ಅಲ್ಲದೆ, ದೇವಬಂದ್ ಭಾರತದಲ್ಲಿ ಗೌರವಯುತವಾದ ಇಸ್ಲಾಮಿಕ್ ಅಧ್ಯಯನ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಹೇಳಿದೆ.

ಪಾಕಿಸ್ತಾನದ ಈ ಆರೋಪಗಳನ್ನು ಬಲವಾಗಿ ಖಂಡಿಸಿರುವ ಜಮಾತೆ-ಉಲೇಮಾ-ಹಿಂದ್ ಸಹ ಇದನ್ನು "ಪಾಕಿಸ್ತಾನವು ನೈಜ ಆರೋಪಿಗಳಿಂದ ಗಮನವನ್ನು ಬೇರಡೆ ಕೇಂದ್ರೀಕರಿಸಲು ಮಾಡಿರುವ ನಾಚಿಕೆಗೇಡಿನ ಪ್ರಯತ್ನ ಇದಾಗಿದೆ" ಎಂದು ಹೇಳಿದೆ.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಸದಸ್ಯರಾಗಿರುವ ಅಬ್ದಲ್ಲಾ ಹುಸೇನ್ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಕುರಿತು ಚರ್ಚೆಯ ವೇಳೆಗೆ ದೇವಬಂದ್ ಸೆಮಿನರಿಗೂ ತಾಲಿಬಾನ್ ಉಗ್ರಗಾಮಿ ಸಂಘಟನೆಗೂ ಸಂಪರ್ಕ ಕಲ್ಪಿಸಿದ್ದರು.

ವಿದೇಶಾಂಗ ಸಚಿವಾಲಯಕ್ಕೆ ನೀಡಿರುವ ದೂರಿನಲ್ಲಿ ಜಮಾತೆಯು, ಪಾಕಿಸ್ತಾನದ ಖಾಯಂ ಪ್ರತಿನಿಧಿ ದಾರುಲ್ ಉಲೂಮ್ ದೇವಬಂದ್ ಕುರಿತು ಬಳಸಿರುವ ಭಾಷೆಯ ಕುರಿತು ಪ್ರತಿಭಟನೆ ಸಲ್ಲಿಸಿದ್ದಾರೆ.

ದೇವಬಂದ್ ಪ್ರತಿಭಟನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರರು, ಇಂತಹ ಹೇಳಿಕೆಯು ವಿಷಾದನೀಯ ಎಂದು ಹೇಳಿದ್ದಾರೆ. ಅಲ್ಲದೆ, ದಾರುಲ್ ಉಲೂಮ್ ದೇವಬಂದ್ ಇಸ್ಲಾಮಿಕ್ ಅಧ್ಯಯನದ ಅತ್ಯಂತ ಗೌರವಯುತ ಸಂಸ್ಥೆಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ನವದೆಹಲಿಯಲ್ಲಿರುವ ಪಾಕಿಸ್ತಾನ ಹೈ ಕಮಿಷನರ್ ಹಾಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರಿಗೆ ಜಮಾತ್ ಉಲೇಮಾ ಐ ಹಿಂದ್ ಸಂಘಟನೆಯು ಪ್ರತಿಭಟನೆ ಪತ್ರಗಳನ್ನು ಕಳುಹಿಸಿದೆ.

1866ರಲ್ಲಿ ಸ್ಥಾಪಿಸಲಾಗಿರುವ ದಾರುಲ್ ಉಲೂಮ್ ದೇವಬಂದ್ ಮೌಲ್ವಿಗಳನ್ನು ಬೆಳೆಸಿದ್ದು, ಇವರು ಭಾರತದಲ್ಲಿ ಬ್ರಿಟಿಷರ ಆಡಳಿತವನ್ನು ವಿರೋಧಿಸಿದ್ದರು. ದೇವಬಂದ್‌ನ ಹಲವು ಧರ್ಮಗುರುಗಳನ್ನು ಹೊಂದಿರುವ ಜಮಾತುಲ್ ಉಲೇಮಾ ಇ ಹಿಂದ್ ಸಂಘಟನೆಯು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದು, ದ್ವಿರಾಷ್ಟ್ರ ಸಿದ್ಧಾಂತವನ್ನು ವಿರೋಧಿಸಿತ್ತು. ರಾಷ್ಟ್ರಾದ್ಯಂತ ಇರುವ ಮದ್ರಸಾಗಳ ಜಾಲವನ್ನು ದೇವಬಂದ್ ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೋಟಿಗಾಗಿ ನೋಟು: ತನಿಖೆಗೆ ಚಟರ್ಜಿ ಶಿಫಾರಸ್ಸು
ಮಾತು ಸಾಕು, ಮಾಡಿ ತೋರಿಸಿ: ಪಾಕಿಗೆ ಪ್ರಣಬ್
ರಾಷ್ಟ್ರಪತಿ, ರಾಜ್ಯಪಾಲರ ವೇತನ 3 ಪಟ್ಟು ಏರಿಕೆ
ಪ.ಬಂಗಾಳಕ್ಕೆ ಮತ್ತೆ ವ್ಯಾಪಿಸಿದ ಹಕ್ಕಿಜ್ವರ
ಲೋಕಸಭೆಗೆ ರಾಜೀನಾಮೆ ನೀಡಿದ ಮಲ್ಹೋತ್ರಾ
ಪಾಕ್ ಮೇಲೆ ದಂಡೆತ್ತಿ ಹೋಗುವ ಇರಾದೆ ಭಾರತಕ್ಕಿಲ್ಲ