ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲೋಕಸಭೆಯೆಲ್ಲಿ ಎನ್ಐಎ ಮಸೂದೆ ಮಂಡನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆಯೆಲ್ಲಿ ಎನ್ಐಎ ಮಸೂದೆ ಮಂಡನೆ
PTI
ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಮುಂದಾಗಿರುವ ಯುಪಿಎ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರೀಯ ತನಿಖಾ ಮಂಡಳಿ(ಎನ್ಐಎ)ದ ಸ್ಥಾಪನೆಯ ಮಸೂದೆಯನ್ನು ಮಂಡಿಸಿದೆ.

ಇದರೊಂದಿಗೆ ಕಾನೂನು ಬಾಹಿರ ಚಟುವಟಿಕೆಗಳ(ತಡೆ) ತಿದ್ದುಪಡಿ ಕಾಯ್ದೆಯ ಮಸೂದೆಯನ್ನೂ ಮಂಡಿಸಲಾಗಿದೆ. ವೇಗದ ತನಿಖೆ, ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳಲು ಅವಶ್ಯಕವಾಗುವಂತೆ, ಮತ್ತು ಇಂತಹ ಕಾಯ್ದೆಗಳ ದುರಪಯೋಗವನ್ನು ತಡೆಯುವ ಗುರಿಯನ್ನೂ ಈ ಉದ್ದೇಶಿತ ಕಾಯ್ದೆ ಹೊಂದಿದೆ.
ಈ ಎರಡೂ ಬಿಲ್‌ಗಳನ್ನು ಗೃಹಸಚಿವ ಪಿ.ಚಿದಂಬರಂ ಅವರು ಲೋಕಸಭೆಯಲ್ಲಿ ಮಂಡಿಸಿದರು.

ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಈ ಮಸೂದೆ ಕುರಿತು ಚರ್ಚಿಸಲಾಗಿದ್ದು, ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ರಚಿಸಲು ನಿರ್ಧರಿಸಿ, ಮಂಗಳವಾರವೇ ಈ ಪ್ರಸ್ತಾಪವನ್ನು ಸಂಸತ್ತಿನ ಮುಂದಿಡಲು ನಿರ್ಧರಿಸಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಗೆ ತಿದ್ದುಪಡಿ ತಂದು ಅದನ್ನು ಮತ್ತಷ್ಟು ಕಠಿಣಗೊಳಿಸುವ ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಮಂಡಳಿ (ಸಿಐಎಸ್ಎಫ್) ಕಾಯಿದೆಗೂ ತಿದ್ದುಪಡಿ ತರುವ ಕುರಿತು ಸೋಮವಾರದ ಸಭೆಯಲ್ಲಿ ಚರ್ಚಿಸಲಾಗಿತ್ತು.

ಸಾಕ್ಷ್ಯವಾಗಿ ವೈರ್‌ಲೆಸ್ ಧ್ವನಿಮುದ್ರಣಗಳ ಬಳಕೆ, ಕ್ಯಾಮರಾ ಎದುರು ವಿಚಾರಣೆ ಮತ್ತು ಭಯೋತ್ಪಾದನಾ ಪ್ರಕರಣಗಳ ಶೀಘ್ರ ವಿಚಾರಣೆಗೆ ತ್ವರಿತ ವಿಶೇಷ ನ್ಯಾಯಾಲಯಗಳ ಪ್ರಸ್ತಾಪಗಳು ಈ ಹೊಸ ತಿದ್ದುಪಡಿಯಲ್ಲಿ ಅಡಕವಾಗಿವೆ.

ಎನ್ಐಎ ದೇಶದೆಲ್ಲೆಡೆ ನಡೆಯುವ ಭಯೋತ್ಪಾದನಾ ಚಟುವಟಿಕೆಗಳ ಪ್ರಕರಣಗಳನ್ನು ರಾಜ್ಯಗಳ ವಿಶೇಷ ಅನುಮತಿಯ ಅಗತ್ಯವಿಲ್ಲದೆಯೇ ನೇರವಾಗಿ ಕೈಗೆತ್ತಿಕೊಳ್ಳಲಿದೆ. ಆದರೆ ಕಾನೂನು ಮತ್ತು ಸುವ್ಯವಸ್ಥೆಯ ಅಧಿಕಾರವು ರಾಜ್ಯಗಳ ಕೈಯಲ್ಲೇ ಇರುತ್ತವೆ. ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ನಕಲಿ ನೋಟು ಮುದ್ರಣಗಳನ್ನು ಕೂಡ ಭಯೋತ್ಪಾದನೆಯಡಿಗೆ ತರಲಾಗಿದ್ದು, ಇವುಗಳನ್ನೆಲ್ಲ ಎನ್ಐಎ ತನಿಖೆ ಮಾಡಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಿಯೋಬಂಡ್‌ ಕುರಿತ ಪಾಕ್‌ ಹೇಳಿಕೆಗೆ ಭಾರತ ವಿಷಾದ
ವೋಟಿಗಾಗಿ ನೋಟು: ತನಿಖೆಗೆ ಚಟರ್ಜಿ ಶಿಫಾರಸ್ಸು
ಮಾತು ಸಾಕು, ಮಾಡಿ ತೋರಿಸಿ: ಪಾಕಿಗೆ ಪ್ರಣಬ್
ರಾಷ್ಟ್ರಪತಿ, ರಾಜ್ಯಪಾಲರ ವೇತನ 3 ಪಟ್ಟು ಏರಿಕೆ
ಪ.ಬಂಗಾಳಕ್ಕೆ ಮತ್ತೆ ವ್ಯಾಪಿಸಿದ ಹಕ್ಕಿಜ್ವರ
ಲೋಕಸಭೆಗೆ ರಾಜೀನಾಮೆ ನೀಡಿದ ಮಲ್ಹೋತ್ರಾ