ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉದ್ದೇಶಿತ ಮಸೂದೆ ನಿರೀಕ್ಷಿತ ಮಟ್ಟಕ್ಕಿಲ್ಲ: ಬಿಜೆಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ದೇಶಿತ ಮಸೂದೆ ನಿರೀಕ್ಷಿತ ಮಟ್ಟಕ್ಕಿಲ್ಲ: ಬಿಜೆಪಿ
ರಾಷ್ಟ್ರೀಯ ತನಿಖಾ ಮಂಡಳಿಯ ರಚನೆಯ ಕುರಿತು ಸರ್ಕಾರದ ನಡೆಗೆ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ತನ್ನ ಬೆಂಬಲ ಸೂಚಿಸಿದೆ.

"ಭಯೋತ್ಪಾದನೆಯ ವಿರುದ್ಧ ಇದೊಂದು ಹೆಜ್ಜೆಯಾಗಿರುವ ಕಾರಣ ಇದೊಂದು ಅಸಂಪೂರ್ಣ ಮತ್ತು ಒತ್ತಾಯದ ಕ್ರಮವಾಗಿದ್ದರೂ ಒಂದು ರಾಷ್ಟ್ರೀಯ ಪಕ್ಷವಾಗಿ ನಾವಿದನ್ನು ಬೆಂಬಲಿಸುತ್ತೇವೆ" ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.

ಉದ್ದೇಶಿತ ಕಾಯ್ದೆಯ ಕೆಲವು ನಿಬಂಧನೆಗಳು ತಮ್ಮ ಪಕ್ಷದ ನಿರೀಕ್ಷೆಯಂತಿಲ್ಲ ಮತ್ತು ಸರ್ಕಾರದ ಮಟ್ಟಿಗೆ ಇದೊಂದು ಒತ್ತಾಯದ ಕ್ರಮ ಎಂದು ಅವರು ದೂರಿದರು. ಭಯೋತ್ಪಾದನೆಯ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಒತ್ತಾಯಿಸುತ್ತಲೇ ಬಂದಿದ್ದರೂ, ರಾಷ್ಟ್ರೀಯ ತನಿಖಾ ಮಂಡಳಿ ರಚನೆಯ ಕುರಿತು ಯುಪಿಎ ಕ್ರಮ ಒಂದು ಒತ್ತಾಯಪೂರ್ವಕ ಕಾರ್ಯವಾಗಿದೆ ಎಂದು ಅವರು ದೂರಿದ್ದಾರೆ.

"ನಾವು ಮಸೂದೆಯನ್ನು ವಿಶದವಾಗಿ ಪರೀಕ್ಷಿಸಿದ ಬಳಿಕ ನಮ್ಮ ಅಭಿಪ್ರಾಯವನ್ನು ಸೂಚಿಸುತ್ತೇವೆ. ವಿಶೇಷ ತನಿಖಾ ಯಂತ್ರಗಳಿಗೆ ಹಲ್ಲಿರಬೇಕು ಎಂದು ನಾವು ಯಾವತ್ತೂ ಭಾವಿಸಿದ್ದೇವೆ" ಎಂದವರು ಹೇಳಿದ್ದಾರೆ.

"ಮಸೂದೆಯಲ್ಲಿ ಭಯೋತ್ಪಾದನಾ ಅಪರಾಧಗಳನ್ನು ಮರುವ್ಯಾಖ್ಯಾನಿಸಲಾಗಿದೆ ಮತ್ತು ಜಾಮೀನು ನಿಬಂಧನೆಗಳನ್ನು ಸ್ವಲ್ಪಮಟ್ಟಿಗೆ ಕಠಿಣವಾಗಿಸಲಾಗಿದೆ. ಆದರೆ, ತಪ್ಪೊಪ್ಪಿಗೆಯ ಸ್ವೀಕಾರಾರ್ಹತೆ ಕುರಿತ ಪಕ್ಷದ ನಿರೀಕ್ಷೆ ಈಡೇರಲಿಲ್ಲ. ಗೃಹಸಚಿವಾಲಯದ ಪ್ರಯತ್ನಗಳು ಸಂಪುಟ ಸಭೆಯಲ್ಲಿ ಯಶಸ್ಸಾಗಿಲ್ಲವೆಂದು ತೋರುತ್ತದೆ" ಎಂದು ಜೇಟ್ಲಿ ಹೇಳಿದ್ದಾರೆ.

ನಾವು ಮಸೂದೆಯನ್ನು ಬೆಂಬಲಿಸುತ್ತೇವೆ ಮತ್ತು ಅದೇ ವೇಳೆಗೆ ಬಾಕಿ ಉಳಿದಿರುವ ನಿಬಂಧನೆಗಳ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿ, ಅವುಗಳನ್ನು ಸೇರಿಸಿಕೊಳ್ಳಲು ಹೋರಾಡಲಿದ್ದೇವೆ ಎಂದವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಲೆಗಾಂವ್ ಆರೋಪಿ ಪುರೋಹಿತ್‌ ನ್ಯಾಯಾಂಗ ವಶಕ್ಕೆ
ಲೋಕಸಭೆಯೆಲ್ಲಿ ಎನ್ಐಎ ಮಸೂದೆ ಮಂಡನೆ
ದೇವಬಂದ್ ಕುರಿತ ಪಾಕ್‌ ಹೇಳಿಕೆಗೆ ಭಾರತ ವಿಷಾದ
ವೋಟಿಗಾಗಿ ನೋಟು: ತನಿಖೆಗೆ ಚಟರ್ಜಿ ಶಿಫಾರಸ್ಸು
ಮಾತು ಸಾಕು, ಮಾಡಿ ತೋರಿಸಿ: ಪಾಕಿಗೆ ಪ್ರಣಬ್
ರಾಷ್ಟ್ರಪತಿ, ರಾಜ್ಯಪಾಲರ ವೇತನ 3 ಪಟ್ಟು ಏರಿಕೆ