ಉಗ್ರರು ಬಳಸುತ್ತಾರೆ ಎಂದು ಹೇಳಲಾಗಿರುವ 400 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಬೇಕೆಂಬ ಒತ್ತಾಯವು ಮಂಗಳವಾರ ಲೋಕಸಭೆಯಲ್ಲಿ ಧ್ವನಿಸಿದೆ.
ಶಿವಸೇನಾ ಸದಸ್ಯ ಚಂದ್ರಕಾಂತ್ ಖೈರೆ ಅವರು ಈ ವಿಚಾರವನ್ನು ಶೂನ್ಯವೇಳೆಯಲ್ಲಿ ಎತ್ತಿದ್ದು, ಈ ವಿಚಾರವು ಗಂಭೀರವಾಗಿದ್ದು, ಹಣಕಾಸು ಮತ್ತು ಗೃಹ ಸಚಿವಾಲಯವು ಕ್ಷಿಪ್ರವಾಗಿ ಕಾರ್ಯಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದಲ್ಲದೆ ಇನ್ನೂ ಅನೇಕ ವಿಚಾರಗಳು ಲೋಕಸಭೆಯಲ್ಲಿ ಪ್ರಸ್ತಾಪವಾಗಿದ್ದು, ಬಿಎಸ್ಪಿ ಸದಸ್ಯ ಇಲಿಯಾಸ್ ಅಜ್ಮಿ ಅವರು ಹಜ್ ಯಾತ್ರಿಕರಿಗೆ ಸೂಕ್ತ ಸೌಕರ್ಯವನ್ನು ನೀಡುವಲ್ಲಿ ಏರ್ ಇಂಡಿಯಾ ವಿಫಲವಾಗಿದೆ ಎಂದು ದೂರಿದರು.
ಕೆಲವರು ಪ್ರಯಾಣಿಕರು 24 ಗಂಟೆಗಳು ಕಾಯವಂತಾಯಿತು ಎಂದು ನುಡಿದ ಅವರು ಜೆಡ್ಡಾದ ಏರ್ ಇಂಡಿಯಾ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. |