ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಿಜ್ವಾನ್ ಪ್ರಕರಣ: ತೋಡಿಗೆ ಜಾಮೀನು ನಿರಾಕರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಜ್ವಾನ್ ಪ್ರಕರಣ: ತೋಡಿಗೆ ಜಾಮೀನು ನಿರಾಕರಣೆ
ರಿಜ್ವಾನೂರು ರಹ್ಮಾನ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉದ್ಯಮಿ ಅಶೋಕ್ ತೋಡಿಗೆ ಬುಧವಾರ ಕೋಲ್ಕತಾ ಹೈಕೋರ್ಟ್ ಜಾಮೀನು ನಿರಾಕರಿಸಿದೆ.

ವಿಭಾಗೀಯ ಪೀಠವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಹೊಂದಿದ್ದ ಬಳಿಕ, ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಪಿ.ಸೇನ್‌ಗುಪ್ತಾ ಜಾಮೀನು ನಿರಾಕರಿಸಿದ್ದಾರೆ.

ನ್ಯಾಮೂರ್ತಿಗಳಾದ ಅಮಿತ್ ತಾಲೂಕ್ದಾರ್ ಮತ್ತು ಪಿ.ಎಸ್.ಬ್ಯಾನರ್ಜಿ ಅವರುಗಳನ್ನೊಳಗೊಂಡಿದ್ದ ನ್ಯಾಯಪೀಠವು ಜಾಮೀನು ನೀಡಬೇಕೆ ಅಥವಾ ಬೇಡವೇ ಎಂಬ ಕುರಿತು ಭಿನ್ನಾಭಿಪ್ರಾಯ ಹೊಂದಿತ್ತು. ತಾಲೂಕ್ದಾರ್ ಅವರು ಜಾಮೀನಿಗೆ ಒಲವು ತೋರಿಸಿದರೆ, ಬ್ಯಾನರ್ಜಿ ಜಾಮೀನು ವಿರೋಧಿಸಿದ್ದರು. ಬಳಿಕ ಈ ಪ್ರಕರಣವನ್ನು ಮುಖ್ಯನ್ಯಾಯಮೂರ್ತಿ ಎಸ್.ಎಸ್.ನಿಜ್ಜಾರ್ ಅವರು ಸೇನ್‌ಗುಪ್ತಾ ಅವರಿಗೆ ವಹಿಸಿದ್ದರು.

ಸೇನ್‌ಗುಪ್ತಾ ಅವರು ಬ್ಯಾನರ್ಜಿ ಅವರ ಅಭಿಪ್ರಾಯಕ್ಕೆ ಸಹಮತ ತೋರಿದ್ದು, ಪ್ರಮುಖ ಆರೋಪಿಯಾಗಿರುವ ತೋಡಿ ವಿರುದ್ಧ ಮೇಲ್ನೋಟಕ್ಕೆ ಕಾಣುವ ಪುರಾವೆಗಳಿರುವ ಕಾರಣ ಜಾಮೀನು ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ತೋಡಿ ಹಾಗೂ ಅವರ ಇಬ್ಬರು ಸಂಬಂಧಿಗಳು, ರಿಜ್ವಾನೂರ್‌ನ ಕುಟುಂಬ ಸ್ನೇಹಿತ ಪಪ್ಪು ಮತ್ತು ಮೂವರು ಪೊಲೀಸಧಿಕಾರಿಗಳ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊರಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ, ಅಪರಾಧಿ ಸಂಚು, ಬೆದರಿಕೆ ಆರೋಪಗಳನ್ನು ಇವರ ಮೇಲೆ ಸಿಬಿಐ ಹೊರಿಸಿದೆ. ರಿಜ್ವಾನ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.

ತೋಡಿಯ ಪುತ್ರಿ ಪ್ರಿಯಾಂಕಳನ್ನು ಆಗಸ್ಟ್ 2007ರಲ್ಲಿ ವಿವಾಹವಾಗಿದ್ದ ಕಂಪ್ಯೂಟರ್ ಗ್ರಾಫಿಕ್ಸ್ ವಿನ್ಯಾಸಗಾರನಾಗಿದ್ದ ರಿಜ್ವಾನ್ ಮೃತ ದೇಹವು ರೈಲ್ವೇ ಹಳಿಯ ಬಳಿಯಲ್ಲಿ ಪತ್ತೆಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ಬ್ಯಾಂಕ್ ಖಾತೆ ಮಟ್ಟಹಾಕಲು ಒತ್ತಾಯ
ಕಸಬ್ ಪರ ವಾದಿಸುವುದು ವಕೀಲರಿಗೆ ಬಿಟ್ಟ ವಿಚಾರ
ವರಾಹ ಪ್ರದಕ್ಷಿಣೆಗೆ ಮೆದುಳಿನ ಖಾಯಿಲೆ ಕಾರಣ: ಪಶುವೈದ್ಯ
ಉದ್ದೇಶಿತ ಮಸೂದೆ ನಿರೀಕ್ಷಿತ ಮಟ್ಟಕ್ಕಿಲ್ಲ: ಬಿಜೆಪಿ
ಮಾಲೆಗಾಂವ್ ಆರೋಪಿ ಪುರೋಹಿತ್‌ ನ್ಯಾಯಾಂಗ ವಶಕ್ಕೆ
ಲೋಕಸಭೆಯೆಲ್ಲಿ ಎನ್ಐಎ ಮಸೂದೆ ಮಂಡನೆ