ಇತ್ತೀಚೆಗೆ ಮುಂಬೈ ಭಯೋತ್ಪಾದನೆಯಲ್ಲಿ ತಾಜ್ ಹೋಟೆಲ್ ಮೇಲೆ ನಡೆದ ದಾಳಿಯಿಂದ ತೀವ್ರ ನಷ್ಟಕ್ಕೀಡಾಗಿರುವ ಉದ್ಯಮಿ ರತನ್ ಟಾಟಾ ಸ್ವಂತ ಖರ್ಚಿನಲ್ಲಿ ಭಯೋತ್ಪಾದನಾ ನಿಗ್ರಹ ಪಡೆಯೊಂದನ್ನು ರಚಿಸಲು ಚಿಂತನೆ ನಡೆಸಿದ್ದಾರೆ.ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರತನ್ ಟಾಟಾ ಅವರು ಸ್ವಂತ ಖರ್ಚಿನಲ್ಲಿ ಭಯೋತ್ಪಾದನಾ ನಿಗ್ರಹ ಪಡೆ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಸಂಸ್ಥೆಯ ಬೆಲೆ ಬಾಳುವ ಆಸ್ತಿ ಮತ್ತು ಉದ್ಯೋಗಿಗಳ ರಕ್ಷಣೆಗಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ." ಮುಂಬೈ ಭಯೋತ್ಪಾದನೆಯ ಕಾರ್ಯಾಚರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಟಾಟಾ, ಪೊಲೀಸರಿಗೆ ಹೆಚ್ಚಿನ ತರಬೇತಿ ನೀಡಬೇಕು. ಪೊಲೀಸ್ ಇಲಾಖೆಯನ್ನೇ ಇನ್ನಷ್ಚು ಬಲಪಡಿಸುವ ಬಗ್ಗೆ ಸರ್ಕಾರಗಳು ಚಿಂತನೆ ನಡೆಸಬೇಕು" ಎಂದು ಸಲಹೆ ನೀಡಿದ್ದಾರೆ.ನ. 26 ರಂದು ನಡೆದ ಮುಂಬೈ ಭಯೋತ್ಪಾದನೆಯಲ್ಲಿ ತಾಜ್ ಹೋಟೆಲ್‌ನಲ್ಲಿ ಅಡಗಿದ್ದ ಉಗ್ರರು ನಡೆಸಿದ್ದ ದಾಳಿಯಿಂದಾಗಿ ಹೋಟೆಲ್‌ನ ಆಸ್ತಿಗಳಿಗೆ ಹಾನಿಯಾಗಿತ್ತಲ್ಲದೆ, ಅನೇಕ ಜವರು ಪ್ರಾಣ ಕಳಕೊಂಡಿದ್ದರು. ವೈಭವೋಪೇತ ತಾಜ್ ಹೋಟೇಲಿಗೆ ಉಗ್ರರು ನಡೆಸಿದ ದಾಳಿಯಿಂದಾಗಿ ಅಗಾಧ ಪ್ರಮಾಣದ ಹಾನಿಯಾಗಿದ್ದು, ಅದನ್ನು ಮುಂಚಿನ ಸ್ಥಿತಿಗೆ ತರಲು 500 ಕೋಟಿ ರೂಪಾಯಿ ಬೇಕಾಗಿದೆ ಎಂದು ಹೇಳಲಾಗಿದೆ. |