ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಸಚಿವರಾಗಿದ್ದ ವೇದಪ್ರಕಾಶ್ ಗೋಯಲ್ ಅವರು ದೈವಾಧೀನರಾಗಿದ್ದಾರೆ.
82ರ ಹರೆಯದ ಗೋಯಲ್ ಅವರು ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದು ಇಲ್ಲಿನ ಹಿಂದೂಜಾ ಆಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
ಅವರು ಪತ್ನಿ ಚಂದ್ರಕಾಂತ ಗೋಯಲ್, ಇಬ್ಬರು ಪುತ್ರರು ಹಾಗೂ ಇಬ್ಬರು ಪತ್ರಿಯರನ್ನು ಅಗಲಿದ್ದಾರೆ. 1926ರಲ್ಲಿ ಹರ್ಯಾಣದ ಕರ್ನಾಲ್‌ನಲ್ಲಿ ಜನಿಸಿದ್ದ ಗೋಯಲ್ ಬಿಜೆಪಿಯ ಖಜಾಂಜಿಯೂ ಆಗಿದ್ದರು. |