ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕರ್ಕರೆ ಉಗ್ರರಿಂದ ಕೊಲ್ಲಲ್ಪಟ್ಟಿದ್ದಾರೆ, ತನಿಖೆ ಬೇಕಿಲ್ಲ: ಮಹಾ ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ಕರೆ ಉಗ್ರರಿಂದ ಕೊಲ್ಲಲ್ಪಟ್ಟಿದ್ದಾರೆ, ತನಿಖೆ ಬೇಕಿಲ್ಲ: ಮಹಾ ಸಿಎಂ
ಹೇಮಂತ್ ಕರ್ಕರೆ ಸಾವಿನ ಕುರಿತು ತನಿಖೆಯನ್ನು ನಿರಾಕರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌವ್ಹಾಣ್ ಅವರು, ಕರ್ಕರೆ ಅವರು ಕಾಮಾ ಆಸ್ಪತ್ರೆಯ ಹೊರಗಡೆ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.

"ಹೇಮಂತ್ ಕರ್ಕರೆ ಸಾವಿನ ಕುರಿತು ವಿಶೇಷ ತನಿಖೆ ಬೇಕಿಲ್ಲ. ನಾವು ಪೊಲೀಸರ ವರದಿಯನ್ನು ನಂಬುತ್ತೇವೆ" ಎಂದು ಚೌವ್ಹಾಣ್ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಶಾಸಕರು ತೀವ್ರ ಹುಯಿಲೆಬ್ಬಿಸಿದಾಗ ಮುಖ್ಯಮಂತ್ರಿಯವರು ಸ್ಪಷ್ಟೀಕರಣ ನೀಡಿದರು.

ಲೋಕಸಭೆಯಲ್ಲೂ ಗದ್ದಲ
ಕಾಂಗ್ರೆಸ್ ಸಚಿವ ಅಂತುಳೆ ಅವರು ಹೇಮಂತ್ ಕರ್ಕರೆ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಲೋಕಸಭೆಯಲ್ಲೂ ಭಾರೀ ಗದ್ದಲ ಉಂಟಾಗಿದ್ದು, ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಅಂತುಳೆ ಅವರ ಈ ಹೇಳಿಕೆಯು ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನಕ್ಕೆ ಅವಕಾಶ ನೀಡಿದಂತಾಗಿದೆ ಎಂದು ದೂರಿರುವ ಬಿಜೆಪಿ, ಅಂತುಳೆ ಪಾಕಿಸ್ತಾನದ ಪರವಾದ ನಿಲುವು ಹೊಂದಿದ್ದಾರೆ ಎಂದೂ ಆಪಾದಿಸಿದೆ.

ಅತ್ಯಂತ ಸೂಕ್ಷ್ಮ ವಿಚಾರದ ಕುರಿತು ಅಂತುಳೆಯ ಇಂತಹ ವಿಭಜಕ ಹೇಳಿಕೆಯು ರಾಷ್ಟ್ರಾದ್ಯಂತ ಸಂಚಲನೆ ಮೂಡಿಸಿತ್ತು. ಅಲ್ಲದೆ ಪ್ರಮುಖ ವಿರೋಧ ಪಕ್ಷ ಬಿಜೆಪಿಯು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಈ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿತ್ತು.

"ಕರ್ಕರೆ ಅವರು ಮುಸ್ಲಿಮೇತರರು ಒಳಗೊಂಡಿರುವ ಪ್ರಕರಣವನ್ನೂ ತನಿಖೆ ಮಾಡುತ್ತಿದ್ದರು. ಕರ್ಕರೆ ಸಾವಿನಲ್ಲಿ ಕಣ್ಣಿಗೆ ಕಾರಣದಂತಹುದು ಇನ್ನೇನೋ ಇದೆ" ಎಂಬ ಅತ್ಯಂತ ಬೇಜವಾಬ್ದಾರಿಯ ಹೇಳಿಕೆಯನ್ನು ಅಂತುಳೆ ಬುಧವಾರ ನೀಡಿದ್ದರು.

ಭಯೋತ್ಪಾದಕರಿಗೆ ಕರ್ಕರೆ ಅವರನ್ನು ಕೊಲ್ಲಲು ಯಾವ ಕಾರಣಗಳೂ ಇರಲಿಲ್ಲ. ಕರ್ಕರೆ ಅವರು ನಿಜವಾಗಿಯೂ ಭಯೋತ್ಪಾದನೆಯ ಬಲಿಪಶುವೇ ಇಲ್ಲ ಭಯೋತ್ಪಾದನೆ ಮತ್ತು ಇನ್ನೇನಾದರೂ ಇದೆಯಾ ಎಂಬುದಾಗಿ ಪ್ರಶ್ನಿಸಿದ್ದರು.

ಅಂತುಳೆ ಹೇಳಿಕೆಗೆ ಬುಧವಾರವೇ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ವಕ್ತಾರ ಅಭಿಶೇಕ್ ಮಾನು ಸಿಂಘ್ವಿ ಅವರು, ಪಕ್ಷಕ್ಕೂ ಈ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ, ಅದು ಅಂತುಳೆಯವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದು, ಇಂತಹ ಸೂತ್ರಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಜ್‌ಮಹಲ್‌ಗೆ ಹೆಚ್ಚಿನ ಭದ್ರತೆ ಬೇಡಿಕೆ
ಮಾಜಿ ಸಚಿವ ವೇದ್ ಪ್ರಕಾಶ್ ಗೋಯಲ್ ನಿಧನ
ಅಂತುಳೆ ವಿರುದ್ಧ ಶಿಸ್ತು ಕ್ರಮಕ್ಕೆ ಸೋನಿಯಾ ಒಲವು
ಉಳಿದ 7 ಮಂದಿ ಕಸಬ್‌ನ ಸಹಚರರು ಎಲ್ಲಿ?
ಪೋಟಾದಂತಹ ಕಠಿಣ ಕಾನೂನಿಗೆ ಲೋಕಸಭೆ ಅಸ್ತು
ಜನರಿಲ್ಲಿ ಅಭದ್ರರು, ಜನನಾಯಕರು ಸುಭದ್ರರು!