ಸಮಾಜವಾದಿ ಪಕ್ಷದ ಸದಸ್ಯೆ ಜಯಾಬಚ್ಚನ್ ಅವರಿಗೆ ರಾಜ್ಯಸಭೆಯಲ್ಲಿ ಛೀಮಾರಿ ಹಾಕಲಾಗಿದ್ದು, 'ಸರಿಯಾಗಿ ವರ್ತಿಸಲು' ತಾಕೀತು ಮಾಡಲಾಗಿದೆ.ರಾಜ್ಯ ಸಭೆಯ ಅಧ್ಯಕ್ಷ ಸ್ಥಾನದಲ್ಲಿ ಉಪಾಧ್ಯಕ್ಷ ಪಿ.ಜೆ.ಕುರಿಯನ್ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ. ಸಮಾಜವಾದಿ ಪಕ್ಷದ ಸದಸ್ಯ ವಿರೇಂದ್ರ ಭಾಟಿಯ ಅವರು ಅಪರಾಧಿ ಪಕ್ರಿಯಾ ಸಂಹಿತೆಗೆ ತಿದ್ದುಪಡಿ ಮಸೂದೆ ಕುರಿತು ಮಾತನಾಡುತ್ತಿದ್ದ ವೇಳೆ, ಕುರಿಯನ್ ಅವರು ಮಾತು ಮುಗಿಸುವಂತೆ ಭಾಟಿಯಾರಿಗೆ ನುಡಿದರು. ನೀಡಿರುವುದಕ್ಕಿಂತ ಹೆಚ್ಚು ಸಮಯ ಬಳಸಿದ್ದು ಮುಕ್ತಾಯ ಹಾಡುವಂತೆ ಕುರಿಯನ್ ಹೇಳಿದ್ದರು. ಆ ವೇಳೆಗೆ ಮಧ್ಯ ಪ್ರವೇಶಿಸಿದ ಜಯಾಬಚ್ಚನ್ ತನ್ನ ಸಹೋದ್ಯೋಗಿ ಮಾತನಾಡುವ ವೇಳೆಗೆ ತಡೆಯುಂಟಾಗಿದ್ದು ಹೆಚ್ಚು ಸಮಯ ನೀಡಬೇಕೆಂದು ನುಡಿದರು.ಅದಾಗ್ಯೂ, ಮಾತಿನ ಮಧ್ಯೆ ನಡೆದಿರುವುದು ಮಧ್ಯಪ್ರವೇಶ ಅಲ್ಲ, ಭಾಟಿಯ ಮತ್ತು ಗೃಹಸಚಿವ ಚಿದಂಬರಂ ನಡುವೆ ನಡೆದ ಸಂವಾದವು 'ಉಪಯುಕ್ತವಾದುದು' ಎಂದು ನುಡಿದರು.ಈ ಮಧ್ಯೆ, "ನೀವು ನನ್ನತ್ತ ಬೆಟ್ಟು ಮಾಡಬೇಡಿ" ಎಂಬುದಾಗಿ ಜಯಾ ಹೇಳಿದ್ದು, ಕುರಿಯನ್ ಅವರನ್ನು ಕೆರಳಿಸಿತು "ಬೆಟ್ಟು ನಾನಲ್ಲ ನೀವೆ" ಎಂದು ಕುರಿಯನ್ ಜಯಾರನ್ನುದ್ದೇಶಿಸಿ ಹೇಳಿದರಲ್ಲದೆ, ಸದಸ್ಯರು ಸದನದಲ್ಲಿ ಸರಿಯಾಗಿ ವರ್ತಿಸಬೇಕು ಎಂದು ಕಠಿಣವಾಗಿ ನುಡಿದರು.ಬಚ್ಚನ್ ಅವರು ಕುಳಿತ ಬಳಿಕ "ಉಲ್ಟಾ ಚೋರ್ ಕೋತ್ವಾಲ್ ಕೋ ದಾಂತೆ" ಎಂದು ಗೊಣಗಿದರು.ಭಾಟಿಯಾ ತನ್ನ ಭಾಷಣ ಮುಗಿಸಿದ ಬಳಿಕ ಮತ್ತೆ ಪುನಹ ಈ ವಿಚಾರವನ್ನು ಕೆದಕಿದ್ದು, ನೀವು ಒಬ್ಬ ಹಿರಿಯ ಸದಸ್ಯರನ್ನು ಅವಮಾನಿಸಿದಿರಿ ಎಂದು ಅಧ್ಯಕ್ಷರನ್ನುದ್ದೇಶಿಸಿ ನುಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಭಾಟಿಯಾ ಒಬ್ಬ ಸದಸ್ಯರು ರಾಜ್ಯಸಭಾ ಅಧ್ಯಕ್ಷ ಪೀಠದ ಮೇಲೆ ಅರೋಪಗಳನ್ನು ಮಾಡುವುದು ಸೂಕ್ತವಲ್ಲ ಎಂದು ನುಡಿದರು. ಏಳು ನಿಮಿಷ ನೀಡಲಾಗಿದ್ದು, ಎಸ್ಪಿ ಸದಸ್ಯರು 23 ನಿಮಿಷಗಳನ್ನು ಬಳಸಿಕೊಂಡರು ಎಂದು ಕುರಿಯನ್ ನುಡಿದರು." ಇಂತಹ ಆರೋಪಗಳನ್ನು ಮಾಡುವುದಕ್ಕಾಗಿ ಸದಸ್ಯರಾಗುವುದು ಅಲ್ಲ" ಎಂದು ಕುರಿಯನ್ ಕಾರವಾಗಿ ನುಡಿದರು. |