ವಿಐಪಿಗಳಿಗೆ ಸರಕಾರಿ ಖರ್ಚಿನಲ್ಲಿ ನೀಡಲಾಗುವ ಅತಿಯಾದ ಭದ್ರತೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವಾಲಯವು ಸಂಪುಟ ಸಚಿವರು ಸೇರಿದಂತೆ ಕನಿಷ್ಠ ಪಕ್ಷ 50 ವಿಐಪಿಗಳ ಭದ್ರತೆಯನ್ನು ಕಡಿಮೆಗೊಳಿಸಲಾಗಿದೆ.
ಭದ್ರತಾ ವ್ಯವಸ್ಥೆಯನ್ನು ಅನುಭವಿಸುತ್ತಿರುವ ಎಲ್ಲಾ ವಿಐಪಿಗಳ ರಕ್ಷಣೆಯನ್ನು ಪರಿಶೀಲಿಸುತ್ತಿದ್ದು, ಕೆಲವರು ಅಗತ್ಯಕ್ಕಿಂತ ಹೆಚ್ಚಿನ ಭದ್ರತೆ ಅನುಭವಿಸುತ್ತಿರುವುದು ಕಂಡು ಬಂದಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಕನಿಷ್ಠ ಇಬ್ಬರು ಸಂಪುಟ ಸಚಿವರು, ಮೂವರು ಕೇಂದ್ರ ಸಚಿವಾಲಯದ ರಾಜ್ಯ ಸಚಿವರು, ಹೈ ಕೋರ್ಟ್ ನ್ಯಾಯಾಧೀಶರು, ಸಂಸತ್ ಸದಸ್ಯರು, ಪತ್ರಕರ್ತರು, ಮಾಜಿ ಅಧಿಕಾರಿಗಳು ಮುತ್ತು ನಿವೃತ್ತ ಐಪಿಎಸ್ ಅಧಿಕಾರಿಗಳ ಭದ್ರತೆಯಲ್ಲಿ ಕಡಿತ ಉಂಟಾಗಲಿದೆ ಎಂದು ಮೂಲಗಳು ಹೇಳಿವೆ.
ವೈ ದರ್ಜೆಯ ಭದ್ರತೆ ಹೊಂದಿರುವ ಇಬ್ಬರು ಕೇಂದ್ರ ಸಚಿವರ ಭದ್ರತಾ ತಂಡದಿಂದ ಆರು ಸಿಬ್ಬಂದಿಗಳನ್ನು ಹಿಂತೆಗೆಯಲಾಗಿದೆ. ಝಡ್ ಪ್ಲಸ್ ಭದ್ರತೆ ಹೊಂದಿದ್ದ ಮಾಜಿ ಐಪಿಎಸ್ ಅಧಿಕಾರಿಯ ಸುತ್ತಮುತ್ತು ಓಡಾಡುತ್ತಿದ್ದ ಸುಮಾರು ಎರಡು ಡಜನ್‌ಗಿಂತಲೂ ಅಧಿಕ ಸಿಬ್ಬಂದಿಗಳನ್ನು ಕಡಿತಗೊಳಿಸಲಾಗುವುದು.
ಒಂದು ಭಾಷಾ ಪತ್ರಿಕೆಯೂ ಸೇರಿದಂತೆ ಕೆಲವು ಪತ್ರಕರ್ತರಿಗೂ ನೀಡಲಾಗಿದ್ದ ಭದ್ರತಾ ಸಿಬ್ಬಂದಿಗಳನ್ನು 169ರಿಂದ 84ಕ್ಕೆ ಇಳಿಸಲಾಗಿದೆ.
ಗೃಹಸಚಿವಾಲಯವು ಎಲ್ಲಾ ವಿಐಪಿಗಳಿಗೆ ಒದಗಿಸಲಾಗಿರುವ ಭದ್ರತೆಯನ್ನು ಪರಿಶೀಲಿಸುತ್ತಿದ್ದು, ಅವಶ್ಯಕತೆ ಇಲ್ಲ ಎಂದೆನಿಸಿದರೆ ಭದ್ರತೆ ಕಡಿತಗೊಳಿಸಲಿದೆ ಎಂದು ಮೂಲಗಳು ಹೇಳಿವೆ. |