ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 82ರ ವೃದ್ಧನಿಗೆ 40 ವರ್ಷದ ಬಳಿಕ ವಿಚ್ಛೇದನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
82ರ ವೃದ್ಧನಿಗೆ 40 ವರ್ಷದ ಬಳಿಕ ವಿಚ್ಛೇದನೆ
ಪತ್ನಿಯಿಂದ ದೂರವಾಗಿ ಸುಮಾರು 40 ವರ್ಷಗಳ ಬಳಿಕ, ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರಿಗೆ ದೆಹಲಿ ಹೈಕೋರ್ಟು ವಿವಾಹ ವಿಚ್ಛೇದನಕ್ಕೆ ಅವಕಾಶ ನೀಡಿದೆ.

ಕಳೆದ ವರ್ಷ ಜೈಕಿಶನ್ ಬಲಾನಿ (82) ಅವರ ಪರವಾಗಿ ಕೌಟುಂಬಿಕ ನ್ಯಾಯಾಲಯವೊಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಅವರ ಪತ್ನಿ ವಿಮಲಾ ಬಲಾನಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಬಿ.ಗುಪ್ತಾ, ವಿವಾಹ ಸಂಬಂಧವು ಸರಿಪಡಿಸಲಾಗದಂತೆ ಮುರಿದುಬಿದ್ದಿದೆ ಎಂಬ ಕೆಳ ನ್ಯಾಯಾಲಯದ ಅಭಿಪ್ರಾಯವನ್ನು ಪುರಸ್ಕರಿಸಿದರು.

ಪರಿತ್ಯಾಗ ಮತ್ತು ಚಿತ್ರಹಿಂಸೆ ಆಧಾರದಲ್ಲಿ ಪತಿಯು ಬಲವಾಗಿ ವಾದ ಮಂಡಿಸುವಲ್ಲಿ ಪತಿ ಯಶಸ್ವಿಯಾಗಿರುವುದರಿಂದ, ಪತ್ನಿ ಸಲ್ಲಿಸಿರುವ ಮೇಲ್ಮನವಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಬುಧವಾರ ನೀಡಿದ ತೀರ್ಪಿನಲ್ಲಿ ಹೇಳಲಾಗಿದೆ.

ಪತಿ ಪತ್ನಿಯನ್ನು ಒಂದುಗೂಡಿಸಲು ಈ ನ್ಯಾಯಾಲಯವೂ ತನ್ನ ಕೈಲಾದ ಪ್ರಯತ್ನ ಮಾಡಿದೆ. ಆದರೆ ಯಶಸ್ಸು ದೊರೆಯಲಿಲ್ಲ. ಇಬ್ಬರ ನಡುವಿನ ವಿವಾಹ ಸಂಬಂಧ ಮುರಿದುಬಿದ್ದಿರುವುದರಿಂದ, ಇಂಥ ಸಂಬಂಧ ಮುಂದುವರಿಸುವುದೇ ಕ್ರೌರ್ಯ ಆಗಬಹುದು. ಈ ಕಾರಣಕ್ಕೆ ವಿಚ್ಛೇದನೆ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅನ್ಸಾಲ್ ಸಹೋದರರ ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್
ಗಾಯಾಳು ಕಮಾಂಡೋಗೆ ಭಾವಿಪತ್ನಿಯ ಸಾಂತ್ವಾನ
26/11ದಾಳಿ: 50 ವಿಐಪಿಗಳ ಭದ್ರತೆ ಕಡಿತ
ಗಣರಾಜ್ಯೋತ್ಸವ ವೇಳೆಗೆ 22 ಸಿಸಿಟಿವಿ ಅಳವಡಿಕೆ
ಸಡಿಲ ನಾಲಿಗೆಯ ಅಂತುಳೆ ರಾಜೀನಾಮೆ
ಜಯಾಬಚ್ಚನ್‌ಗೆ ರಾಜ್ಯಸಭೆಯಲ್ಲಿ ಛೀಮಾರಿ