ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕರ್ಕರೆ ಆಂತರಿಕ ಪೊಲೀಸ್ ಪಡೆಯ ಬಲಿಪಶು: ಯುಡಿಎಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ಕರೆ ಆಂತರಿಕ ಪೊಲೀಸ್ ಪಡೆಯ ಬಲಿಪಶು: ಯುಡಿಎಫ್
ಮುಂಬೈ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾಗಿರುವ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಹೆಚ್ಚುವರಿ ಪೊಲೀಸ್ ಆಯುಕ್ತ ಅಶೋಕ್ ಕಾಮ್ಟೆ ಮತ್ತು ಎನ್‌ಕೌಂಟರ್ ತಜ್ಞ ವಿಜಯ್ ಸಾಲೆಸ್ಕರ್ ಅವರು ಪೊಲೀಸ್ ಪಡೆಯ ಆಂತರಿಕ ಪಡೆಗಳ ಬಲಿಪಶುಗಳು ಎಂಬಂತಹ ಗಂಭೀರ ಆರೋಪವನ್ನು ಹೊಸದಾಗಿ ರೂಪಿಸಿರುವ ಸಂಯುಕ್ತ ಪ್ರಜಾ ರಂಗ(ಯುಡಿಎಫ್) ಶುಕ್ರವಾರ ಮಾಡಿದೆ. ಅಲ್ಲದೆ ಈ ಮೂವರು ಪೊಲೀಸ್ ಅಧಿಕಾರಿಗಳ ಸಾವಿನ ನ್ಯಾಯಾಂಗ ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿದೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಕ್ಷದ ವಕ್ತಾರ, ಮಾಜಿ ಕರ್ನಲ್ ಸುಧೀರ್ ಸಾವಂತ್ ಅವರು ಈ ಮೂವರು ಅಧಿಕಾರಿಗಳನ್ನು ನವೆಂಬರ್ 26ರ ರಾತ್ರಿ 10 ಮಂದಿ ಶಂಕಿತ ಉಗ್ರರು ದಾಳಿ ನಡೆಸಿದ್ದ ವೇಳೆ .9ಎಂಎಂ ಪಿಸ್ತೂಲ್‌ನಲ್ಲಿ ಗುಂಡಿಕ್ಕಿ ಸಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಮತ್ತು ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೂ ಎಂದೂ ಆವರು ಒತ್ತಾಯಿಸಿದ್ದಾರೆ.

ಯಾವ ಆಧಾರಗಳಲ್ಲಿ ಈ ಆರೋಪಗಳನ್ನು ಮಾಡಲಾಗುತ್ತಿದೆ ಮತ್ತು ನಿಮ್ಮ ಬಳಿ ಯಾವುದಾದರೂ ಫಾರೆನ್ಸಿಕ್ ವರದಿ ಅಥವಾ ಮರಣೋತ್ತರ ಪರೀಕ್ಷೆಗಳ ವರದಿಗಳು ಇವೆಯೇ ಎಂದು ವರದಿಗಾರರೊಬ್ಬರು ಪ್ರಶ್ನಸಿದಾಗ, "ಸದ್ಯವೀಗ ನಮ್ಮ ಬಳಿ ಸಾಂದರ್ಭಿಕ ಪುರಾವೆ ಹೊರತುಪಡಿಸಿದರೆ ಇನ್ಯಾವುದೇ ಪುರಾವೆಗಳಿಲ್ಲ, ಅದಕ್ಕಾಗಿ ಸತ್ಯವನ್ನು ಹೊರತೆಗೆಯಲು ಸ್ವತಂತ್ರ ಸಂಸ್ಥೆಯ ತನಿಖೆಗಾಗಿ ಒತ್ತಾಯಿಸುತ್ತಿದ್ದೇವೆ" ಎಂದು ಅವರು ಉತ್ತರಿಸಿದರು.

"ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದ ಕರ್ಕರೆ ಅವರು ಹಿಂದುತ್ವ-ಮನುವಾದಿ ಭಯೋತ್ಪಾದನೆಯ ಮುಖವನ್ನು ಪ್ರಪಂಚಕ್ಕೆ ತೋರಿಸುತ್ತಿದ್ದರು. ಅವರು ಮುಸ್ಲಿಮರು ಭಯೋತ್ಪಾದಕರು ಎಂಬ ಅನಿಸಿಕೆಯಾಗಿರುವ ಇಸ್ಲಾಮೋಫೋಬಿಯಾ ವಿರುದ್ಧ ಹೋರಾಡುತ್ತಿದ್ದರು. ಹಾಗಾಗಿ ಅವರನ್ನು ಕಾಮಾ ಆಸ್ಪತ್ರೆಯ ಬಳಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಂತೆ ತೋರಿಸಲಾಗಿದೆ" ಎಂಬಂತಹ ಗಂಭೀರವಾದ ಹೇಳಿಕೆಯನ್ನು ಅವರು ನೀಡಿದ್ದಾರೆ.

ಪೊಲೀಸ್ ಜಂಟಿ ಆಯುಕ್ತ ರಾಕೇಶ್ ಮಾರಿಯಾ ಅವರನ್ನು ಕ್ರೈಬ್ರಾಂಚಿನಿಂದ ತೆಗೆದು ಹಾಕುವಂತೆಯೂ ಅವರು ಒತ್ತಾಯಿಸಿದ್ದಾರೆ ರಾಕೇಶ್ ವಿರುದ್ಧ, ಅವರು ಹಿಂಸಾಚಾರ ನೀಡಿರುವ ಕುರಿತು ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಹಿಂಸಿಸಿರುವ ಕುರಿತು ಹಲವಾರು ಪ್ರಮಾಣ ಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಅವರು ನುಡಿದರು.

ಸುಪ್ರೀಂಕೋರ್ಟ್ ಸ್ವಯಂ ವಿಚಾರಾಣಾಧಿಕಾರದ ಮೂಲಕ ಮಾಲೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಪ್ರಾಯೋಜಿತ ಭೋತ್ಪಾದನೆಯ ಮತ್ತು ಮಾಲೆಗಾಂವ್ ಆರೋಪಿ ಇಂದ್ರನೇಶ್ ಎಂಬಾತ ಪಾಕಿಸ್ತಾನ ಗುಪ್ತಚರದಳ ಐಎಸ್ಐನಿಂದ ಮೂರು ಕೋಟಿ ರೂಪಾಯಿ ಹೇಗೆ ಪಡೆದಿದ್ದಾನೆಂಬ ಕುರಿತು ಪುರಾವೆ ಇರುವ ಕಡತಗಳನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೆ, ಬಿಲ್ಡರ್ಸ್ ಲಾಬಿ ಮತ್ತು ಬಾಲಿವುಡ್ ಸಿನಿಮಾ ಉದ್ಯಮವೂ ದೊಡ್ಡಮಟ್ಟದಲ್ಲಿ ಭಯೋತ್ಪಾದಕರನ್ನು ಪ್ರಾಯೋಜಿಸುತ್ತದೆ ಎಂದು ಅವರು ದೂರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾಳಿಗೆ ಮುಂಚಿತ ಗುಪ್ತಚರ ದಳಗಳು ಪ್ರಧಾನಿ ಭೇಟಿಗೆ ಅನುಮತಿ ನೀಡಿದ್ದವು
ಬಿಎಂಡಬ್ಲ್ಯೂ ಪ್ರಕರಣ: ನಂದಾಗೆ ಮಧ್ಯಂತರ ಜಾಮೀನು
82ರ ವೃದ್ಧನಿಗೆ 40 ವರ್ಷದ ಬಳಿಕ ವಿಚ್ಛೇದನೆ
ಅನ್ಸಾಲ್ ಸಹೋದರರ ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್
ಗಾಯಾಳು ಕಮಾಂಡೋಗೆ ಭಾವೀಪತ್ನಿಯ ಸಾಂತ್ವನ
26/11ದಾಳಿ: 50 ವಿಐಪಿಗಳ ಭದ್ರತೆ ಕಡಿತ