ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾತು ತಪ್ಪಿದ ಪಾಕ್: ಭಾರತಕ್ಕೆ ಎಲ್ಲ ಅವಕಾಶ ಮುಕ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾತು ತಪ್ಪಿದ ಪಾಕ್: ಭಾರತಕ್ಕೆ ಎಲ್ಲ ಅವಕಾಶ ಮುಕ್ತ
ಭಯೋತ್ಪಾದನೆ ಚಟುವಟಿಕೆಗಳನ್ನು ಬೆಂಬಲಿಸದಿರುವ ಕುರಿತು ನೀಡಿದ ಭರವಸೆ ಈಡೇರಿಸಲು ಪಾಕಿಸ್ತಾನ ವಿಫಲವಾಗುವುದರೊಂದಿಗೆ, "ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು" ತಾನು ಮುಕ್ತವಾಗಿರುವುದಾಗಿ ಭಾರತ ಶುಕ್ರವಾರ ಎಚ್ಚರಿಕೆ ಸಂದೇಶ ನೀಡಿದೆ.

ಭಯೋತ್ಪಾದನೆ ಎಂಬುದು ನಮ್ಮ ವಲಯಕ್ಕೆ ಅತಿದೊಡ್ಡ ತಲೆನೋವು. ದೇಶವೊಂದು ತಾನು ನೀಡಿದ ವಾಗ್ದಾನವನ್ನು ಈಡೇರಿಸಲಿಲ್ಲವೆಂದಾದರೆ, ಈ ಪಿಡುಗಿನಿಂದ ನಮ್ಮ ಹಿತಾಸಕ್ತಿಗಳನ್ನು ಮತ್ತು ಜನರನ್ನು ರಕ್ಷಿಸಿಕೊಳ್ಳಲು ನಾವು ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕಾಗುತ್ತದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಪಾಕಿಸ್ತಾನವನ್ನು ಹೆಸರಿಸದೆಯೇ ಹೇಳಿದರು.

ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ ನವದೆಹಲಿಯ ಈ ಸಂದೇಶವನ್ನು ಸಿಕ್ಕಿಂ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಮಹೇಂದ್ರ ಪಿ.ಲಾಮಾ ಅವರು ಓದಿಹೇಳಿದರು.

ದೇಶದ ವಾಣಿಜ್ಯ ರಾಜಧಾನಿ ಮೇಲೆ ನಡೆದ ಭಯೋತ್ಪಾದನಾ ದಾಳಿಯು, ಉಗ್ರಗಾಮಿಗಳು ನೆರೆರಾಷ್ಟ್ರದಲ್ಲಿ ಎಷ್ಟರ ಮಟ್ಟಿಗೆ ಬಲವಾಗಿ ಬೇರೂರಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದ ಮುಖರ್ಜಿ, ತನ್ನ ನೆಲದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ಮಟ್ಟಹಾಕುವ ಕುರಿತು ನೀಡಿದ ವಾಗ್ದಾನವನ್ನು ಪಾಕಿಸ್ತಾನ ಉಳಿಸಿಕೊಳ್ಳದಿದ್ದರೆ ಭಾರತ ಕೈಗೊಳ್ಳುವ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲು ನಿರಾಕರಿಸಿದರು.

ಪಾಕಿಸ್ತಾನವು "ಸರಕಾರೇತರ ವ್ಯಕ್ತಿಗಳು" ಎಂದು ಕರೆಯುತ್ತಿರುವ ಸರಕಾರಿ ಏಜೆನ್ಸಿಗಳೇ ಭಯೋತ್ಪಾದಕರಿಗೆ ಬೆಂಬಲ ನೀಡಿರಬಹುದು ಎಂಬ ಬಗ್ಗೆ ಶಂಕೆ ವ್ಯಕ್ತಪಡಿಸಿದ ಮುಖರ್ಜಿ, ಭಯೋತ್ಪಾದನೆ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಭಾರತವು ತನ್ನ ಕಾರ್ಯತಂತ್ರವನ್ನು ಮತ್ತಷ್ಟು ಚುರುಕುಗೊಳಿಸುತ್ತದೆ ಎಂದರು.

ಪಾಕಿಸ್ತಾನದಲ್ಲಿರುವ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಾ ಅವರು, ಆ ದೇಶದ ಆಂತರಿಕ ಭದ್ರತೆಯು ಕುಸಿಯುತ್ತಲೇ ಇದ್ದು, ಹಲವಾರು ಶಕ್ತಿಕೇಂದ್ರಗಳು ಉದ್ಭವಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರ್ಕರೆ ಆಂತರಿಕ ಪೊಲೀಸ್ ಪಡೆಯ ಬಲಿಪಶು: ಯುಡಿಎಫ್
ದಾಳಿಗೆ ಮುಂಚಿತ ಗುಪ್ತಚರ ದಳಗಳು ಪ್ರಧಾನಿ ಭೇಟಿಗೆ ಅನುಮತಿ ನೀಡಿದ್ದವು
ಬಿಎಂಡಬ್ಲ್ಯೂ ಪ್ರಕರಣ: ನಂದಾಗೆ ಮಧ್ಯಂತರ ಜಾಮೀನು
82ರ ವೃದ್ಧನಿಗೆ 40 ವರ್ಷದ ಬಳಿಕ ವಿಚ್ಛೇದನೆ
ಅನ್ಸಾಲ್ ಸಹೋದರರ ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್
ಗಾಯಾಳು ಕಮಾಂಡೋಗೆ ಭಾವೀಪತ್ನಿಯ ಸಾಂತ್ವನ