ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಮಗ್ರ ಮಾತುಕತೆಯಿಂದ ಹಿಂತೆಗೆಯಿರಿ: ಬಿಜೆಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಮಗ್ರ ಮಾತುಕತೆಯಿಂದ ಹಿಂತೆಗೆಯಿರಿ: ಬಿಜೆಪಿ
ಮುಂಬೈದಾಳಿಯ ನಂತರದ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಯುಪಿಎ ಸರ್ಕಾರ ತನ್ನ ಬಿಗಿ ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿರುವ ವಿರೋಧ ಪಕ್ಷ ಬಿಜೆಪಿಯು, ಭಾರತದ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸದ ಪಾಕಿಸ್ತಾನದೊಂದಿಗಿನ ಸಮಗ್ರ ಮಾತುಕತೆಯಿಂದ ಹಿಂತೆಗೆಯಬೇಕು ಎಂದು ಒತ್ತಾಯಿಸಿದೆ.

ಪಾಕಿಸ್ತಾನದೊಂದಿಗಿನ ವ್ಯವಹಾರದ ಕುರಿತು ಹಿರಿಯ ಸಚಿವರುಗಳು ವಿವಿಧ ಧ್ವನಿಗಳಲ್ಲಿ ಮಾತನಾಡುತ್ತಿದ್ದು, ಸರ್ಕಾಕ್ಕೆ ಚಿಂತನೆಯ ಬದ್ಧತೆಯ ಕೊರತೆ ಇರುವಂತೆ ತೋರುತ್ತಿದೆ ಎಂದು ಬಿಜೆಪಿ ನಾಯಕ ಯಶವಂತ ಸಿನ್ಹಾ ಹೇಳಿದ್ದಾರೆ.

ಪಾಕಿಸ್ತಾನಿ ಶಕ್ತಿಗಳು ಮುಂಬೈ ದಾಳಿಯಲ್ಲಿ ಪಾಲ್ಗೊಂಡಿರುವ 'ನಿರ್ವಿವಾದ'ದ ಪುರಾವೆಗಳೊಂದಿಗೆ ಅಮೆರಿಕ, ಬ್ರಿಟನ್‌ನೊಂದಿಗೆ ವಿವಿಧ ರಾಷ್ಟ್ರಗಳಿಗೆ ಸರ್ಕಾರವು ರಾಜಕೀಯ ರಾಯಭಾರಿಗಳನ್ನು ಕಳುಹಿಸುವ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕು ಎಂದು ಅವರು ನುಡಿದರು.

ಕಳೆದ ಕೆಲವು ದಿನಗಳಿಂದ ಈ ವಿಚಾರದಲ್ಲಿ ಸರ್ಕಾರ ಬಿಗಿ ಕಳೆದುಕೊಳ್ಳುವಂತೆ ತೋರುತ್ತಿದೆ. ನಮ್ಮ ಸರ್ಕಾರವು ವಿವಿಧ ಧ್ವನಿಗಳಲ್ಲಿ ಮಾತನಾಡುತ್ತಿದೆ ಎಂದು ಅವರು ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರ್ಕರೆ ಹತ್ಯೆ: ಇ-ಮೇಲ್‌ನಲ್ಲಿ ಮೊದಲೇ ಎಚ್ಚರಿಸಿದ್ದ ಐಎಂ
ಮಾತು ತಪ್ಪಿದ ಪಾಕ್: ಭಾರತಕ್ಕೆ ಎಲ್ಲ ಅವಕಾಶ ಮುಕ್ತ
ಕರ್ಕರೆ ಆಂತರಿಕ ಪೊಲೀಸ್ ಪಡೆಯ ಬಲಿಪಶು: ಯುಡಿಎಫ್
ದಾಳಿಗೆ ಮುಂಚಿತ ಗುಪ್ತಚರ ದಳಗಳು ಪ್ರಧಾನಿ ಭೇಟಿಗೆ ಅನುಮತಿ ನೀಡಿದ್ದವು
ಬಿಎಂಡಬ್ಲ್ಯೂ ಪ್ರಕರಣ: ನಂದಾಗೆ ಮಧ್ಯಂತರ ಜಾಮೀನು
82ರ ವೃದ್ಧನಿಗೆ 40 ವರ್ಷದ ಬಳಿಕ ವಿಚ್ಛೇದನೆ