ಗೋಲ್ಮಾ ದೇವಿ ರಾಜಸ್ಥಾನದ ನೂತನ ಸಚಿವೆ. ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು ಪ್ರಮಾಣ ವಚನವನ್ನು ಓದಲು ಪರದಾಡಬೇಕಾಯಿತು. ಅವರ ಸಹ ಸಚಿವರಾದ ರಾಮ್ ಕಿಶೋಕ್ ಸಾಯ್ನಿಯವರೊಂದಿಗೆ ಪ್ರಾಂಪ್ಟ್ ಮಾಡುವುದರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು.
ಅನಕ್ಷರಸ್ಥೆಯಾಗಿರುವ ಗೋಲ್ಮಾ ದೇವಿಗೆ ಸಹಿಹಾಕುವಂತೆ ಕಲಿಸಲು ಅವರ ಪತಿ ಕಿರೋರಿಲಾಲ್ ಮೀನಾಗೆ ಮೂರು ದಿನ ಹಿಡಿಯಿತಂತೆ. ಎಲ್ಲವೂ ಜಾತಿ ಮತ್ತು ಓಲೈಕೆ ರಾಜಕಾರಣದ ಫಲಶೃತಿ!
ಬಂಡೋಕೊರ ಬಿಜೆಪಿ ನಾಯಕನ ಪತ್ನಿ ಎಂಬ ಅರ್ಹತೆಯ ಮೇಲೆ ಗೋಲ್ಮಾ ದೇವಿ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಮಂತ್ರಿಮಂಡಲದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ರಾಜಸ್ಥಾನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ಮೀನಾ ಸಮುದಾಯಕ್ಕೆ ಸೇರಿದ ಈ ಮಹಿಳೆ ಮಹುವ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಪಕ್ಷೇತರರಾಗಿ ಆಯ್ಕೆಯಾಗಿರುವ ಇವರು 'ಡೈರೆಕ್ಟ್ ಫ್ರಂ ಕಿಚನ್ ಟು ಮಿನಿಸ್ಟ್ರಿ'
ಶುಕ್ರವಾರ ಪ್ರಮಾಣವಚನ ಸ್ವೀಕಾರದ ವೇಳೆ ರಾಜ್ಯಪಾಲ ಎಸ್.ಕೆ.ಸಿಂಗ್ ಅವರು 'ಮೈ' ಎಂದು ಹೇಳಿದಾಗ, 'ಮೈ ಗೋಲ್ಮಾ ಬೋಲ್ ರಹಿ ಹೂಂ', ಅಂದರೆ, 'ನಾನು ಗೋಲ್ಮಾ ಮಾತನಾಡುತ್ತಿದ್ದೇನೆ' ಎಂದುಚ್ಚರಿಸಿದರು. ಇದು ನೆರೆದಿದ್ದವರ ಮೊಗದಲ್ಲಿ ನಸುನಗು ಸೂಸುವಂತೆ ಮಾಡಿತು. ಸಾಹ್ನಿ ಅವರು ಓದಿದ್ದನ್ನೇ ಇವರ ಪ್ರಮಾಣವೂ ಎಂದು ಪರಿಗಣಿಸಲಾಯಿತು.
ಆದರೆ ಗೆಹ್ಲೋಟ್ ಅವರಿಗೆ ಮಂತ್ರಿಯಾಗಿ ಗೋಲ್ಮಾ ಆಯ್ಕೆಯಾಗಿರುವುದರಲ್ಲಿ ಯಾವ ತೊಂದರೆ ಇಲ್ಲ. ಗೋಲ್ಮಾ ಅವರು ಓರ್ವ ಮಹಿಳೆಯಾಗಿ ತನ್ನ ಸಾಮಾನ್ಯ ಜ್ಞಾನ ಮತ್ತು ಅನುಭವವನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದ್ದಾರಲ್ಲದೆ, ಅವಿದ್ಯಾವಂತ ಶಾಸಕರಿಗೂ ಅವರ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ(ಲಾಲೂ ಪ್ರಸಾದ್ ಯಾದವ್ ಅಂದು ಅಧಿಕಾರದಿಂದ ಕೆಳಗಿಳಿಯಬೇಕಾದ ತನ್ನ ಪತ್ನಿಯನ್ನು ಮುಖ್ಯಮಂತ್ರಿಯಾಗಿಸಿದ್ದರು)ಯವರನ್ನು ಉದಾಹರಿಸಿದ ಅವರು, ಸಾಮಾನ್ಯರಲ್ಲಿ ಸಾಮಾನ್ಯರಿಗೂ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶ ಲಭಿಸಿರುವುದು ಪ್ರಜಾಪ್ರಭುತ್ವದ ಶಕ್ತಿ ಎಂದು ನುಡಿದರು.
ಗೋಲ್ಮಾ ಪತಿ ಕಿರೋರಿಲಾಲ್ ಅವರು ತನ್ನ ಪತ್ನಿಯನ್ನು ಮಂತ್ರಿ ಮಾಡುವ ಮೂಲಕ ರಾಜಸ್ಥಾನದ ಲಾಲೂ ಆಗಿದ್ದಾರೆ. "ತನ್ನ ವಿವಾಹದ ದಿನದಂದೂ ನನಗೆ ಇಂದಿನಷ್ಟು ಸಂತಸವಾಗಿರಲಿಲ್ಲ" ಎಂದು ಅವರು ಕಿರೋರಿಲಾಲ್ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಮಂತ್ರಿಯಾಗಿರುವ ಕಿರೋರಿಲಾಲ್ ಅವರು ರಾಜ್ಯದಲ್ಲಿ ಗುಜ್ಜಾರ್ ಚಳುವಳಿ ನಡೆದ ವೇಳೆ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ವೇಳೆಗೆ ಗೋಲ್ಮಾ ತನ್ನ ಪತಿಯ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಯವರ ಬಳಿ ಒಯ್ಯುವ ಮೂಲಕ ಬೆಳಕಿಗೆ ಬಂದಿದ್ದರು.
ತನ್ನ ಪತ್ನಿಯು ಉತ್ತಮ ಆಡಳಿತ ನೀಡುತ್ತಾರೆ ಎಂಬುದು ಕಿರೋರಿ ಭರವಸೆ. "ಅಧಿಕಾರಿಗಳ ಸಹಾಯದಿಂದ ಆಕೆ ಉತ್ತಮ ನೀಡಬಲ್ಲಳು. ಇದಲ್ಲದೆ ತಾನೂ ಆಕೆಗೆ ಸಹಾಯ ನೀಡುವುದಾಗಿ" ಕಿರೋರಿ ಹೇಳಿದ್ದಾರೆ. ಯಾವ ರೀತಿಯ ಸಹಾಯ ಎಂಬ ಪ್ರಶ್ನೆಗೆ ತಾನೀಗ ಎಂಪಿ(ಮಿನಿಸ್ಟರ್ ಪತಿ) ಪಾತ್ರ ವಹಿಸುತ್ತೇನೆ. ಗೋಲ್ಮಾ ಮಂತ್ರಿಯಾಗಿರುವ ಕಾರಣ ತಾನು ಗೃಹಕೃತ್ಯಗಳ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ತನ್ನ ಪತ್ನಿಗೆ ಟಿಕೆಟ್ ನಿರಾಕರಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮೇಲೆ ಗೋಲ್ಮಾಗೆ ಭಯಂಕರ ಸಿಟ್ಟಿದೆ. "ನನ್ನ ಪತಿಗೆ ಟಿಕೆಟ್ ನಿರಾಕರಿಸಲು ಅವರಿಗೆ ನಾಚಿಕೆಯಾಗಲಿಲ್ಲವಾ" ಎಂಬುದು ಗೋಲ್ಮಾ ಪ್ರಶ್ನೆ.
ತನ್ನೂರಿನಲ್ಲಿ ನೀರಿಗೆ ಬಹಳ ಸಮಸ್ಯೆ ಎಂದ ನೂತನ ಸಚಿವೆ, ತಾನು ಹಳ್ಳಿಗಳಲ್ಲಿ ಬಾವಿಗಳನ್ನು ತೋಡುವುದಾಗಿ ನುಡಿದರು. |