ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈದಾಳಿ ನಿಖರವಾಗಿ ಯೋಜಿತ: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈದಾಳಿ ನಿಖರವಾಗಿ ಯೋಜಿತ: ಪ್ರಣಬ್
PTI
ಕಳೆದ ತಿಂಗಳು ಮುಂಬೈಯಲ್ಲಿ ನಡೆಸಿರುವ ಭಯೋತ್ಪಾದನಾ ದಾಳಿಯು ಕರಾರುವಾಕ್ಕಾಗಿ ಯೋಜಿತವಾದದ್ದು ಮತ್ತು ಮತ್ತು ಭಾರತದ ಆಡಳಿತವನ್ನು ಕದಡುವ ಉದ್ದೇಶದಿಂದ ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

26/11ರ ದಾಳಿಯನ್ನು, ತಣ್ಣಗಿನ ಮತ್ತು ಭಾರತದ ರಾಜ್ಯಾಡಳಿತ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲಗೊಳಿಸಲು ನಡೆಸಲು ಲೆಕ್ಕಾಚಾರ ಹಾಕಿರುವ ದಾಳಿ ಎಂದು ಬಣ್ಣಿಸಿದ ಪ್ರಣಬ್, ಈ ದಾಳಿಗಳು ಅನಿರೀಕ್ಷಿತ ಇಲ್ಲವೇ ಯೋಜಿತವಲ್ಲದ ದಾಳಿಗಳಲ್ಲ ಎಂದು ಹೇಳಿದ್ದಾರೆ.

ಬಂಧಿತ ಉಗ್ರ ಅಜ್ಮಲ್ ಅಮೀರ್ ಕಸಬ್, ತನ್ನ ಬಾಹ್ಯ ನಿಭಾವಕರು ಮತ್ತು ತರಬೇತುದಾರರ ಕುರಿತು ಆತಂಕಕಾರಿ ವಿಷಯಗಳನ್ನು ಹೊರಗೆಡವಿದ್ದಾನೆ ಎಂದು ಪಾಕಿಸ್ತಾನದತ್ತ ಬೆಟ್ಟುಮಾಡದೆಯೇ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು, ಮಾಧ್ಯಮಗಳು ಹೇಳಿರುವಂತೆ ಕಸಬ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವನೆಂದು ಹೇಳಿರುವ ಒಂದು ದಿನದ ಬಳಿಕ ಪ್ರಣಬ್ ಹೇಳಿಕೆ ಹೊರಬಿದ್ದಿದೆ.

ಬಂಧಿತ ಉಗ್ರ ಪಾಕಿಸ್ತಾನಿಯಲ್ಲ ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ತಾನವು, ಆತ ಪಾಕಿಸ್ತಾನಿ ಎಂಬುದಕ್ಕೆ ದಾಖಲೆ ಕೇಳಿತ್ತು.
ಆದರೆ ಗಳಿಗೆಗೊಂದರಂತೆ ವ್ಯತ್ಯಸ್ಥ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದ ಪಾಕಿಸ್ತಾನದ ತಲೆಗೆ ಬಿಸಿನೀರು ಚೆಲ್ಲಿರುವ ಶರೀಫ್, "ಕಸಬ್ ಪಾಕಿಸ್ತಾನಿ. ನಾನು ವೈಯಕ್ತಿಕವಾಗಿ ಪರೀಕ್ಷಿಸಿದ್ದೇನೆ. ಆತನ ಮನೆಯನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. ಆತನ ಹೆತ್ತವರು ಯಾರನ್ನೂ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಹೀಗ್ಯಾಕೆ ಮಾಡಲಾಗಿದೆ ಎಂಬುದು ತನಗೆ ಅರ್ಥವಾಗುತ್ತಿಲ್ಲ" ಎಂಬ ಹೇಳಿಕೆಯನ್ನು ಶುಕ್ರವಾರ ನೀಡಿದ್ದರು.

ಭಾರತವು ಪಾಕ್ ಆಕ್ರಮಿತ ಪಾಕಿಸ್ತಾನ ಮತ್ತು ಪಾಕಿಸ್ತಾನದ ಇತರೆಡೆಗಳ ಮೇಲೆ ದಾಳಿ ನಡೆಸಬಹುದು ಎಂಬ ವಿದೇಶಿ ಗುಪ್ತಚರ ದಳಗಳ ವರದಿಗಳ ಬೆನ್ನಿಗೆ ಪ್ರಣಬ್ ಮುಖರ್ಜಿಯವರ ಹೇಳಿಗೆ ಹೊರಬಂದಿದೆ.

ಉಗ್ರವಾದ ಕೃತ್ಯಗಳಿಗೆ ಬೆಂಬಲ ನೀಡುವುದಿಲ್ಲ ಎಂಬ ತನ್ನ ಭರವಸೆಯ್ನು ಕಾಯ್ದುಕೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸಾಧ್ಯವಿರುವ ಎಲ್ಲಾ ಪರ್ಯಾಯಗಳಿಗೆ ಭಾರತವು ಬದ್ಧವಾಗಿದೆ ಎಂದು ಪ್ರಣಬ್ ಶುಕ್ರವಾರ ಹೇಳಿದ್ದರು.

ಪಾಕಿಸ್ತಾನದ ನೆಲೆಗಳ ಮೇಲೆ ಭಾರತೀಯ ಸೇನಾ ಕಾರ್ಯಾಚರಣೆಗೆ ಸನ್ನದ್ಧವಾಗಿದ್ದು, ಮುಂದುವರಿಯುವ ಸೂಚನೆಗಾಗಿ ಕಾಯುತ್ತಿದೆ ಎಂದು ಜಾಗತಿಕ ಬೇಹುಗಾರಿಕಾ ಸೇವಾ ಸಂಸ್ಥೆ ಸ್ಟ್ರಾಟ್‍ಫೋರ್ ಹೇಳಿದೆ.

ಮುಂಬೈಯಲ್ಲಿ ಕಳೆದ ತಿಂಗಳು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಕನಿಷ್ಟ 183 ಮಂದಿ ಸಾವನ್ನಪ್ಪಿದ್ದು, 300ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ ಪಾಕ್‌ಮೇಲೆ ದಾಳಿ ನಡೆಸುವ ಸಂಭವವಿದೆ: ಅಮೆರಿಕ
ಹೊಸ ಕಾಯ್ದೆಗೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಖಂಡನೆ
ಅಮರ್ ಸಿಂಗ್ ದೇಣಿಗೆ ಹಿಂದೆ ಅಣುಒಪ್ಪಂದದ ವಾಸನೆ?
ಈಗಷ್ಟೆ ಸಹಿ ಹಾಕಲು ಕಲಿತ ರಾಜಸ್ಥಾನ ಸಚಿವೆ
ನಾಳೆಯಿಂದ ತಾಜ್, ಒಬೆರಾಯ್‌ ಪುನಾರಂಭ
ಸಮಗ್ರ ಮಾತುಕತೆಯಿಂದ ಹಿಂತೆಗೆಯಿರಿ: ಬಿಜೆಪಿ