ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಕ್ ವಿರುದ್ಧ ಭಾರತ ಯುದ್ಧ ಸನ್ನದ್ಧ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ವಿರುದ್ಧ ಭಾರತ ಯುದ್ಧ ಸನ್ನದ್ಧ?
ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ದ್ವಂದ್ವನಾಲಿಗೆಯ ಹೇಳಿಕೆಯ ಹಿನ್ನೆಲೆಯಲ್ಲಿ ಸೇನಾಕಾರ್ಯಾಚರಣೆಯನ್ನು ಮುಕ್ತವಾಗಿಸಿಕೊಂಡಿರುವ ಭಾರತ ಸರ್ಕಾರ ಶನಿವಾರ ರಾತ್ರಿ ಉನ್ನತ ಮಟ್ಟದ ಸಭೆ ನಡೆಸಿ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಹಾಗೂ ಸೇನಾಪಡೆಗಳ ರಕ್ಷಣಾ ಸನ್ನದ್ಧತೆಯ ಪರಾಮರ್ಶೆ ನಡೆಸಿತು.

ತನ್ನ ನೆಲದಿಂದ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನ ಕೈಗೊಳ್ಳುತ್ತಿರುವ ಕ್ರಮವು ತೃಪ್ತಿಕರವಾಗಿಲ್ಲ. ದಾಳಿಯ ಬಳಿಕ ಪಾಶ್ಚಾತ್ಯ ರಾಷ್ಟ್ರಗಳ ಮನಒಲಿಕೆಯ ಹಿನ್ನೆಲೆಯಲ್ಲಿ ಭಾರತವು ಬಲಪ್ರಯೋಗ ಮಾಡುವುದಿಲ್ಲ ಎಂಬ ಸೂಚನೆ ನೀಡಿತ್ತು.

ಆದರೆ, ಪಾಕಿಸ್ತಾನವು ತಾನು ನೀಡಿರುವ ಭರವಸೆಗಳನ್ನು ಪೂರೈಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಭಾರತವು ತನ್ನೆಲ್ಲ ಪರ್ಯಾಯ ಕ್ರಮಗಳನ್ನು ಮುಕ್ತವಾಗಿರಿಸಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿರುವ ಮರುದಿನದಂದೇ, ಈ ಉನ್ನತ ಮಟ್ಟದ ಪರಾಮರ್ಷೆ ನಡೆಸಿರುವುದ ಭಾರತವು ಯುದ್ಧಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಈ ಮಧ್ಯೆ ಸರ್ಕಾರವು ಭಾರತೀಯ ರಾಯಭಾರಿಗಳು ಮತ್ತು ಹೈ ಕಮಿಷನರ್‌ಗಳ ಎರಡು ದಿನಗಳ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಸೋಮವಾರ ಆರಂಭವಾಗಲಿರುವ ಸಮ್ಮೇಳನದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ವಿರುದ್ಧ ಜಾಗತಿಕ ಒತ್ತಡ ಹೇರುವಂತೆ ಕಾರ್ಯವೆಸಗಲು ಪ್ರಧಾನಿ ಈ ಸಭೆಯಲ್ಲಿ ಸೂಚಿಸಲಿದ್ದಾರೆ ಎಂದು ಹೇಳಲಾಗಿದೆ.

ಶನಿವಾರದ ಸಭೆಯಲ್ಲಿ ಎ.ಕೆ.ಆಂಟನಿ, ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಮತ್ತು ಸಶಸ್ತ್ರಪಡೆಯ ಹಿರಿಯ ಅಧಿಕಾರಿಗಳು ಹಾಗೂ ಸೇನಾ, ನೌಕಾ ಹಾಗೂ ವಾಯು ಪಡೆಗಳ ಮುಖ್ಯಸ್ಥರಾದ ಜನರಲ್ ದೀಪಕ್ ಕಪೂರ್, ಅಡ್ಮಿರಲ್ ಸುರೇಶ್ ಮೇಹ್ತಾ ಮತ್ತು ಏರ್‌ಛೀಫ್ ಮರ್ಷಲ್ ಎಫ್.ಎಚ್ ಮೇಜರ್ ಅವರುಗಳು ಭಾಗವಹಿಸಿದ್ದ ಸಭೆಯ ವಿಚಾರವನ್ನು ಹೊರಗೆಡಹದಿದ್ದರೂ, ಸಭೆಯಲ್ಲಿ ಎಲ್ಲಾ ಪರ್ಯಾಯಗಳು ಮತ್ತು ಎಲ್ಲಾ ಸಾಧ್ಯತೆಗಳ ಒಳಿತು ಮತ್ತು ಕೆಡುಕುಗಳ ಕುರಿತು ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ಸಭೆಗೆ ಮುಂಚಿತವಾಗಿ ರಕ್ಷಣಾ ಸಚಿವರು ನಡೆಸಿದ್ದ ಇನ್ನೊಂದು ಪ್ರತ್ಯೇಖ ಸಭೆಯಲ್ಲಿ ಕರಾವಳಿ ಕಾವಲುಪಡೆ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಭಾರತೀಯ ಕರಾವಳಿ ಪಡೆಯ ಭದ್ರತಾ ಕಾರ್ಯವನ್ನು ಪರಿಶೀಲಿಸಿದ್ದಾರೆ.

ಡಿಸೆಂಬರ್ 18ರಂದು ಮೂರು ಪಡೆಗಳ ಮುಖ್ಯಸ್ಥರ ಸಭೆ ನಡೆಸಿದ್ದ ವೇಳೆ ಸಚಿವ ಆಂಟನಿ, ರಾಷ್ಟ್ರದ ಮೇಲಿನ ಭೀತಿಯನ್ನು ಎದುರಿಸುವಲ್ಲಿ ಸಶಸ್ತ್ರಪಡೆಗಳ ಸಿದ್ಧತೆಯ ಪರಿಶೀಲನೆ ನಡೆಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈದಾಳಿ ನಿಖರವಾಗಿ ಯೋಜಿತ: ಪ್ರಣಬ್
ಭಾರತ ಪಾಕ್‌ಮೇಲೆ ದಾಳಿ ನಡೆಸುವ ಸಂಭವವಿದೆ: ಅಮೆರಿಕ
ಹೊಸ ಕಾಯ್ದೆಗೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಖಂಡನೆ
ಅಮರ್ ಸಿಂಗ್ ದೇಣಿಗೆ ಹಿಂದೆ ಅಣುಒಪ್ಪಂದದ ವಾಸನೆ?
ಈಗಷ್ಟೆ ಸಹಿ ಹಾಕಲು ಕಲಿತ ರಾಜಸ್ಥಾನ ಸಚಿವೆ
ನಾಳೆಯಿಂದ ತಾಜ್, ಒಬೆರಾಯ್‌ ಪುನಾರಂಭ