ಪಾಕಿಸ್ತಾನದ ವಿರುದ್ಧ ಕಠಿಣ ಹೆಜ್ಜೆ ಇಡುವ ಸೂಚನೆ ನೀಡಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ನಾವು ಪಾಕಿಸ್ತಾನಕ್ಕೆ ಈಗಾಗಲೇ ಸಾಕಷ್ಟು ಪುರಾವೆಗಳನ್ನು ನೀಡಿದ್ದೇವೆ ಎಂದು ಹೇಳಿರುವ ಪ್ರಣಬ್, ಈ ಪುರಾವೆಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನಿಜ ವಿಚಾರಗಳನ್ನು ಅಲ್ಲಗಳೆಯುತ್ತಾ ಕಾಲಕಳೆಯುವುದನ್ನು ನಿಲ್ಲಿಸಿ ಕ್ರಮಕೈಗೊಳ್ಳಲು ಮುಂದಾಗಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಿರುವ ಪ್ರಣಬ್, "ನಿಮ್ಮ ಆ ಎಲ್ಲ ನಿರಾಕರಣೆಗಳಿಗೆ ಸಿಕ್ಕಿಬೀಳಲಿದ್ದೀರಿ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದೀಗಾಗಲೇ ನೀಡಿರುವ ಪುರಾವೆಗಳ ಕುರಿತು ಕಾರ್ಯ ಕೈಗೊಂಡು ಮತ್ತೆ ಪಾಕಿಸ್ತಾನ ಮಾತನಾಡಲಿ ಎಂದವರು ಹೇಳಿದ್ದಾರೆ. ಭಾರತವು ಸಾಧ್ಯವಿರುವ ಎಲ್ಲಾ ಪರ್ಯಾಯಗಳನ್ನು ಪರಿಗಣಿಸಲಿದೆ ಎಂದು ಹೇಳಿರುವ ಪ್ರಣಬ್, ಪಾಕಿಸ್ತಾನದ ಮೇಲೆ ಏರಿ ಹೋಗುವ ಎಲ್ಲಾ ಸೂಚನೆಗಳನ್ನು ನೀಡಿದ್ದಾರೆ. |