" ಭಾರತದ ಶಾಂತಿ ಸ್ಥಾಪನೆಯ ಬಯಕೆಯನ್ನು ಪಾಕಿಸ್ತಾನ ನಮ್ಮ ಬಲಹೀನತೆ ಎಂದು ಪರಿಗಣಿಸಬಾರದು ಮತ್ತು ಭಾರತ ವಿರುದ್ದ ಆತಂಕವಾದಕ್ಕೆ ಬೆಂಬಲ ನೀಡುತ್ತಿರುವ ಹಾಗು ತಮ್ಮ ನೆಲವನ್ನು ಉಗ್ರವಾದಕ್ಕಾಗಿ ಬಳಸುತ್ತಿರುವವರಿಗೆ ನಾವು ದೃಢ ಉತ್ತರವನ್ನು ನೀಡಲು ಸಮರ್ಥರಾಗಿದ್ದೇವೆ" ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.ಭಾರತ-ಪಾಕಿಸ್ತಾನ ಗಡಿರೇಖೆಯ ಸಮೀಪದ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ, ಭಾರತದ ಶಾಂತಿ ಮತ್ತು ಸ್ನೇಹ ಸಂಬಂಧದ ಆಶಯವನ್ನು ನಮ್ಮ ಬಲಹೀನತೆ ಎಂದು ತಿಳಿದುಕೊಳ್ಳಬಾರದು ಎಂದು ಸೋನಿಯಾ ಗಾಂಧಿ ಪಾಕ್‌ಗೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಉತ್ತಮ ಸಂಬಂಧಕ್ಕಾಗಿ ಭಾರತದ ಪ್ರಯತ್ನಗಳಿಗೆ ಪಾಕಿಸ್ತಾನ ಸಮಾನವಾಗಿ ಸ್ಪಂದಿಸಲು ವಿಫಲವಾಗಿರುವ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದರು.ಭಾರತ ನೆರೆ ರಾಷ್ಟ್ರಗಳೊಂದಿಗೆ ಶಾಂತಿ ಮತ್ತು ಸ್ನೇಹಪೂರ್ಣ ಸಂಬಂಧಗಳನ್ನು ಬಯಸುತ್ತದೆ, ಅದೇ ಸಮಯ ದೇಶದೊಳಗೆ ಸಹ ಶಾಂತಿಯನ್ನು ನೆಲೆಗೊಳಿಸಲು ಇಚ್ಛಿಸುತ್ತದೆ ಎಂದು ಸೋನಿಯಾ ಹೇಳಿದ್ದಾರೆ. ನಾವು ಸ್ನೇಹಪೂರ್ಣ ಸಂಬಂಧವನ್ನು ಬೆಳೆಸಲು ಪ್ರಯತ್ನಿಸಿದೆವು ಆದರೆ ಅವರು ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂಬುದು ದುಃಖಕರ ಎಂದು ಸೋನಿಯಾ ಹೇಳಿದರು. ಸೋನಿಯಾ ಗಡಿರೇಖೆಯಿಂದ ಮೂರು ಕಿ.ಮಿ ದೂರದಲ್ಲಿರುವ ದಬಲೆಹರ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು. |