ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶೀಘ್ರ ಕಾರ್ಯವೆಸಗಿ, ಇಲ್ಲ ದಿಗ್ಬಂಧನ ಎದುರಿಸಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರ ಕಾರ್ಯವೆಸಗಿ, ಇಲ್ಲ ದಿಗ್ಬಂಧನ ಎದುರಿಸಿ
ಪಾಕಿಸ್ತಾನದ ವಿರುದ್ಧ ತನ್ನ ರಾಜತಾಂತ್ರಿಕ ಕ್ರಮವನ್ನು ಇನ್ನಷ್ಟು ಹೆಚ್ಚಿಸಿರುವ ಭಾರತ, ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಶೀಘ್ರ ಕಾರ್ಯಾಚರಣೆ ನಡೆಸಬೇಕಾಗಿದೆ, ಇಲ್ಲವೇ ಸಂಭಾವ್ಯ ವ್ಯೂಹಾತ್ಮಕ ಮತ್ತು ಆರ್ಥಿಕ ದಿಗ್ಬಂಧನಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.

ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು, ತಾವು ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿಸಿದ್ದೇವೆ ಎಂಬ ಹೇಳಿಕೆಯನ್ನು ಪುನರುಚ್ಚರಿಸಿರುವ ಬಳಿಕ, ಪಾಕಿಸ್ತಾನಕ್ಕೆ ತನ್ನ ಭರವಸೆಗಳನ್ನು ಪೂರೈಸದೆ ಬೇರೆ ವಿಧಿಇಲ್ಲ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಈ ಹಿಂದೆಕೊಟ್ಟಿರುವ ಮಾತುಗಳನ್ನು ಪೂರೈಸಿದರೆ ಮಾತ್ರ ಭಾರತವು ಮುಂಬೈ ದಾಳಿಗೆ ಸಂಬಂಧಿಸಿದ ಹೊಸ ಪುರಾವೆಗಳನ್ನು ಪಾಕಿಸ್ತಾನಕ್ಕೆ ನೀಡಬಹುದಾಗಿದೆ, ಆದರೆಪಾಕಿಸ್ತಾನವು ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಸ್ ಮಾಡುತ್ತಿದೆ ಎಂದು ಮೂಲಗಳು ಹೇಳಿವೆ.

ಜೈಶೆ ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್‌ನನ್ನು ಗಡಿಪಾರು ಮಾಡಬೇಕು ಎಂದು ನವದೆಹಲಿ ಹೇಳಿದೆ. ಅಸ್ತಿತ್ವದಲ್ಲಿರುವ ಕಾನೂನಿನ ಮೂಲಕವೇ ಯಾವುದೇ ಕಾನೂನಿ ತೊಡಕಿಲ್ಲದೆ ಮಸೂದ್‌ನನ್ನು ಭಾರತಕ್ಕೆ ಹಸ್ತಾಂತರಿಸಬಹುದಾಗಿದೆ ಎಂದು ಅವುಗಳು ತಿಳಿಸಿವೆ.

ಪಾಕಿಸ್ತಾನದಲ್ಲಿ ಹಲವು ಅಧಿಕಾರ ಕೇಂದ್ರಗಳಿರುವುದು ಸಮಸ್ಯೆಗೆ ಪೆಟ್ರೋಲ್ ಸುರಿಯುತ್ತಿದೆ ಎಂದಿರುವ ಮೂಲಗಳು, ಭಾರತಕ್ಕೆ ಅಮೆರಿಕ ಮೇಲೆ ಸಂಪೂರ್ಣ ಭರವಸೆ ಇದೆ ಮತ್ತು ಕ್ರಮಕೈಗೊಳ್ಳುವಂತೆ ವಾಶಿಂಗ್ಟನ್ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ ಎಂದು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈದಾಳಿಯಲ್ಲಿ ಪಾತ್ರವಿದೆ: ಲಷ್ಕರೆ ಕಾರ್ಯಕರ್ತ
ಉಭಯ ಸದನಗಳನ್ನು ಮುಂದೂಡಿದ 'ಅಂತುಳೆ'
'ನಿಮ್ಮ ಪ್ರಜೆಯಾಗಿದ್ದರೂ ದೇಶಭ್ರಷ್ಟರನ್ನು ಒಪ್ಪಿಸಿ'
ಭಾರತದ ಗಡಿಯಡಿ ಕಳ್ಳಸಾಗಣಿಕಾ ಸುರಂಗ!
ಸೋನಿಯಾರಿಂದ ಪಾಕ್‌ಗೆ ಎಚ್ಚರಿಕೆ
ಅಸ್ಸಾಂನಲ್ಲಿ ಹಕ್ಕಿಜ್ವರ: 4.25 ಲಕ್ಷ ಪಕ್ಷಿಗಳ ವಧೆ