ನೀವಿದನ್ನು ಹೇಗೆ ಬೇಕಿದ್ದರೂ ಕರೆಯ ಬಹುದು. ಅದು ತಾಯಿ ಹೃದಯ ಅನ್ನಿ, ಪ್ರಾಣಿ ಪ್ರೀತಿ ಅನ್ನಿ ಅಥವಾ ಈ ಪ್ರೀತಿಗೆ ಇನ್ಯಾವ ವ್ಯಾಖ್ಯಾನ ಬೇಕಿದ್ದರೂ ಕೊಡಿ. ಈ ಅಪರೂಪದ ದೃಶ್ಯ ಪಿಟಿಐ ಸೆರೆಗೆ ಸಿಕ್ಕಿದ್ದು ಬಿಕನೇರ್‌ನ ಹಳ್ಳಿಯೊಂದರಲ್ಲಿ. ಗಾಯಗೊಂಡ ಜಿಂಕೆ ಮರಿಗೆ ಈ ತಾಯಿಯ ಎದೆಹಾಲಿನ ಆಸರೆ. ಪ್ರಾಣಿಗಳು ಮತ್ತು ಮರಗಿಡಗಳನ್ನು ಕಾಪಾಡುವುದು 'ಧರ್ಮ' ಎಂಬುದಾಗಿ ಬಿಶ್ನೋಯಿಗಳು ಪರಿಗಣಿಸುತ್ತಾರಂತೆ. ಇದುವೇ ನೈಜ ಧರ್ಮವಲ್ಲವೇ? |