ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್ ಪತ್ರ ಪಾಕಿಸ್ತಾನ ಹೈಕಮಿಷನ್‌ಗೆ ಹಸ್ತಾಂತರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ಪತ್ರ ಪಾಕಿಸ್ತಾನ ಹೈಕಮಿಷನ್‌ಗೆ ಹಸ್ತಾಂತರ
ನವದೆಹಲಿ: ಬಲವಾದ ಪುರಾವೆ ಬೇಡುತ್ತಿದ್ದ ಪಾಕಿಸ್ತಾನದ ಮುಖಕ್ಕೆ ಹೊಡೆಯುವಂತೆ ಭಾರತವಿಂದು ಬಂಧಿತ ಉಗ್ರ ಅಜ್ಮಲ್ ಅಮೀರ್ ಕಸಬ್ ಬರೆದಿರುವ ಪತ್ರವನ್ನು ಪಾಕಿಸ್ತಾನದ ಉಸ್ತುವಾರಿ ಹೈಕಮಿಷನರ್ ಅಫ್ರಾಸಿಯಾಬ್ ಅವರಿಗೆ ಹಸ್ತಾಂತರಿಸಿದೆ. ಪತ್ರದಲ್ಲಿ ಉಗ್ರ ಕಸಬ್ ತಾನು ಪಾಕಿಸ್ತಾನಿ ಎಂದು ಹೇಳಿದ್ದಾನೆ. ಈತ ಮುಂಬೈ ದಾಳಿ ನಡೆಸಿರುವ ವೇಲೆ ಜೀವಂತ ಸೆರೆ ಸಿಕ್ಕಿದ್ದಾನೆ.

ತಾನು ಭಾರತಕ್ಕೆ ಎಲ್ಲಾ ರೀತಿಯಲ್ಲೂ ಸಂಪೂರ್ಣ ಸಹಕಾರ ನೀಡಲು ಸಿದ್ಧ, ಆದರೆ ಭಾರತ ದೃಢವಾದ ಪುರಾವೆ ನೀಡಬೇಕು ಎಂದು ಪಾಕಿಸ್ತಾನ ಹೇಳುತ್ತಲೇ ಬಂದಿತ್ತು. ತನ್ನ ನೆಲದಿಂದ ನಡೆಯುವ ಭಯೋತ್ಪಾದನಾ ಕೃತ್ಯವನ್ನು ಪಾಕಿಸ್ತಾನ ತೊಡೆದು ಹಾಕಬೇಕು ಎಂದು ಭಾರತ ಆಗ್ರಹಿಸಿದ್ದು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ತರಾವರಿ ಹೇಳಿಕೆಗಳನ್ನು ಹೇಳುತ್ತಾ ತಿಪ್ಪರ ಲಾಗ ಹಾಕಿತ್ತು.

ಮುಂಬೈ ದಾಳಿಯಲ್ಲಿ ತನ್ನ ಜನರು ಸಾವು ನೋವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಭಾರತವು ಸಾಧ್ಯ ಇರುವ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿಸಿದೆ ಎಂದು ಭಾರತ ಪದೇಪದೇ ಪುನರುಚ್ಚರಿಸಿದೆ. ಅಲ್ಲದೆ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡವನ್ನೂ ಹೇರುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕಿಸ್ತಾನ ಬದ್ಧತೆಯಿಂದ ಜಾರಿಕೊಳ್ಳುವಂತಿಲ್ಲ: ಪ್ರಣಬ್
ಜಿಂಕೆ ಮರೀನಾ. ಅದು ತಾಯಿ ಪ್ರೀತಿನಾ?
ಶೀಘ್ರ ಕಾರ್ಯವೆಸಗಿ, ಇಲ್ಲ ದಿಗ್ಬಂಧನ ಎದುರಿಸಿ
ಮುಂಬೈದಾಳಿಯಲ್ಲಿ ಪಾತ್ರವಿದೆ: ಲಷ್ಕರೆ ಕಾರ್ಯಕರ್ತ
ಉಭಯ ಸದನಗಳನ್ನು ಮುಂದೂಡಿದ 'ಅಂತುಳೆ'
'ನಿಮ್ಮ ಪ್ರಜೆಯಾಗಿದ್ದರೂ ದೇಶಭ್ರಷ್ಟರನ್ನು ಒಪ್ಪಿಸಿ'