ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್ ಪತ್ರದ ಪುರಾವೆ ಸಾಲದು: ಪಾಕಿಸ್ತಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ಪತ್ರದ ಪುರಾವೆ ಸಾಲದು: ಪಾಕಿಸ್ತಾನ
ND
ಮುಂಬೈ ದಾಳಿನಡೆಸಿರುವ ವೇಳೆಗೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಸಹಾಯ ಕೋರಿ ಪಾಕಿಸ್ತಾನಕ್ಕೆ ಬರೆದಿರುವ ಪತ್ರ ಒದಗಿಸುವ ನಿರ್ವಿವಾದವಾದ ಪುರಾವೆ ಪಾಕಿಸ್ತಾನಕ್ಕೆ ಸಾಕಾಗುತ್ತಿಲ್ಲವಂತೆ!

ಸೋಮವಾರ ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯವು ಅಜ್ಮಲ್ ಬರೆದಿರುವ ಪತ್ರವನ್ನು ಪಾಕಿಸ್ತಾನದ ಉಸ್ತುವಾರಿ ಹೈಕಮಿಷನರ್ ಅಫ್ರಾಸಿಯಾಬ್ ಅವರಿಗೆ ಭಯೋತ್ಪಾದನಾ ಕೃತ್ಯದಲ್ಲಿ ಪಾಕಿಸ್ತಾನ ಭಾಗಿಯಾಗಿರುವ ಕುರಿತು ಪುರಾವೆ ಎಂಬಂತೆ ಹಸ್ತಾಂತರಿಸಿತ್ತು. ಈ ಪತ್ರದಲ್ಲಿ ತಾನು ಪಾಕಿಸ್ತಾನಿ ಪ್ರಜೆ ಎಂದು ಹೇಳಿರುವ ಅಜ್ಮಲ್, ಪಾಕಿಸ್ತಾನದ ಸಹಾಯ ಯಾಚಿಸಿದ್ದಾನೆ.

ಆದರೆ ಈ ಪತ್ರವು ಸಾಕಷ್ಟು ಪುರಾವೆ ಒದಗಿಸುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿರುವುದಾಗಿ ಪಾಕಿಸ್ತಾನದ ದೈನಿಕ ಡಾನ್ ವರದಿ ಮಾಡಿದೆ.

ಡಾನ್ ಅಂಕಣಕಾರ ಅಯಾಝ್ ಅಮೀರ್ ಪ್ರಕಾರ, ಕಸಬ್ ಭಾರತೀಯ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾನೆ. ಅದನ್ನು ಪಾಕಿಸ್ತಾನ ಹೈಕಮಿಷನ್‌ಗೆ ಹಸ್ತಾಂತರಿಸಲಾಗಿದೆ. ಆದರೆ ಇದು ವಿಶ್ವದ ಎಲ್ಲಿಯೇ ಆದರೂ, ಯಾವುದೇ ದಂಡಸಂಹಿತೆಯಡಿ ಒಪ್ಪಿಕೊಳ್ಳತಕ್ಕ ಪುರಾವೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಮುಂಬೈ ಪೊಲೀಸರೊಂದಿಗೆ ಅಜ್ಮಲ್‌ನ ಪುನರಪಿ ತಪ್ಪೊಪ್ಪಿಗೆ, ಅಂತಾರಾಷ್ಟ್ರೀಯ ಮತ್ತು ಪಾಕಿಸ್ತಾನದ ದೇಶಿಯ ಮಾಧ್ಯಮಗಳು ಪ್ರಕಟಿಸಿರುವ ಅಜ್ಮಲ್‌ನ ಗುರುತು- ಇವೆಲ್ಲವುಗಳನ್ನು ಅಲ್ಲಗಳೆದಿರುವ ಪಾಕಿಸ್ತಾನ ಮತ್ತೆಮತ್ತೆ 'ಬಲವಾದ ಪುರಾವೆ' ಬಯಸುತ್ತಿದೆ.

ಪಾಕಿಸ್ತಾನ ಸರ್ಕಾರಕ್ಕೆ ಆಜ್ಮಲ್ ಬರೆದ ಪತ್ರವನ್ನು ಹೈಕಮಿಷನರ್ ಅಫ್ರಾಸಿಯಾಬ್ ಅವರಿಗೆ ಹಸ್ತಾಂತರಿಸಿದ ಬಳಿಕ ಪಾಕಿಸ್ತಾನದ ಆಘಾತಕಾರಿ ಪ್ರತಿಕ್ರಿಯೆ ಹೊರಬಿದ್ದಿದೆ.

ಕಸಬ್‌ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೀದ್‌ಕೋಟ್ ಗ್ರಾಮದವನೆಂದು ಹೇಳಿಕೊಂಡಿದ್ದಾನೆ. ಅಲ್ಲದೆ ಪಾಕ್ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ನೀಡಿರುವ ತನಿಖಾ ವರದಿಗಳೂ ಇವನ್ನು ಸ್ಪಷ್ಟಪಡಿಸಿವೆ.

ಬಂಧನದಲ್ಲಿರುವ ಕಸಬ್ ಕಳೆದವಾರ ಬರೆದಿರುವ ಪತ್ರವನ್ನು ಪಾಕಿಸ್ತಾನ ಹೈಕಮಿಷನ್‌ಗೆ ರವಾನಿಸಲು ವಿದೇಶಾಂಗ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿತ್ತು. ಹೈ ಕಮಿಷನ್‌‌ಗೆ ಬರೆದಿರುವ ಪತ್ರದಲ್ಲಿ ಕಸಬ್, ತಾನು ಹಾಗೂ ದಾಳಿಯ ವೇಳೆಗೆ ಮೃತರಾಗಿರುವ ತನ್ನ ಇತರ ಸಹಚರ ಉಗ್ರರೆಲ್ಲರೂ ಪಾಕಿಸ್ತಾನ ಪ್ರಜೆಗಳು ಎಂದು ಹೇಳಿದ್ದಾನೆ.

ಅಜ್ಮಲ್‌ನ ತಂದೆ, ಈತ ತನ್ನ ಮಗನೆಂದು ಒಪ್ಪಿಕೊಂಡಿದ್ದರೂ, ಪಾಕಿಸ್ತಾನ ಮಾತ್ರ ನಿರಾಕರಿಸುತ್ತಲೇ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್ ಪತ್ರ ಪಾಕಿಸ್ತಾನ ಹೈಕಮಿಷನ್‌ಗೆ ಹಸ್ತಾಂತರ
ಪಾಕಿಸ್ತಾನ ಬದ್ಧತೆಯಿಂದ ಜಾರಿಕೊಳ್ಳುವಂತಿಲ್ಲ: ಪ್ರಣಬ್
ಜಿಂಕೆ ಮರೀನಾ. ಅದು ತಾಯಿ ಪ್ರೀತಿನಾ?
ಶೀಘ್ರ ಕಾರ್ಯವೆಸಗಿ, ಇಲ್ಲ ದಿಗ್ಬಂಧನ ಎದುರಿಸಿ
ಮುಂಬೈದಾಳಿಯಲ್ಲಿ ಪಾತ್ರವಿದೆ: ಲಷ್ಕರೆ ಕಾರ್ಯಕರ್ತ
ಉಭಯ ಸದನಗಳನ್ನು ಮುಂದೂಡಿದ 'ಅಂತುಳೆ'