ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರತದ್ದು ಏಕಾಂಗಿ ಹೋರಾಟವೇ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ್ದು ಏಕಾಂಗಿ ಹೋರಾಟವೇ?
ಮುಂಬೈಯಲ್ಲಿ ಉಗ್ರರು ನಡೆಸಿರುವ ಹೇಯಕೃತ್ಯದ ಕುರಿತಂತೆ ಅಂತಾರಾಷ್ಟ್ರೀಯ ಸಮುದಾಯದ ಸ್ಪಂದನ ಸಾಕಷ್ಟಿಲ್ಲ ಎಂದು ದಾಳಿಯ ಬಳಿಕ ಮೊತ್ತ ಮೊದಲಬಾರಿಗೆ ಭಾರತವು, ಹೇಳಿದೆ.

ದಾಳಿಯ ಬಳಿಕ ವಿಶ್ವ ನಾಯಕರು ಭಾರತಕ್ಕೆ ಸಂತಾಪ ಸೂಚಿಸಿದ್ದು, ಪಾಕಿಸ್ತಾನಕ್ಕೆ ತನ್ನ ರಾಷ್ಟ್ರದಲ್ಲಿರುವ ಭಯೋತ್ಪಾದನಾ ನೆಲೆಗಳನ್ನು ಹುಡಿಮಾಡುವಂತೆ ಕರೆ ನೀಡಿದ್ದವು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಭಾರತಕ್ಕೆ ಬಂದು, ಅಮರಿಕದ ಸಹಾಯ ಮತ್ತು ಸಹಕಾರ ವ್ಯಕ್ತಪಡಿಸಿದ್ದರು. ವಿಶ್ವಸಂಸ್ಥೆಯು ಜಮಾತ್ ಉದ್ ದಾವವನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿ ನಿಷೇಧ ಹೇರಿತು. ಆದರೆ ಯಾರೂ ಈ ಸಮಸ್ಯೆಯನ್ನು ಬೇರು ಸಹಿತ ಕಿತ್ತೊಗೆಯಲು ರಚನಾತ್ಮಕ ಕ್ರಮಕ್ಕೆ ಮುಂದಾಗಿಲ್ಲ.

ಇಸ್ಲಾಮಾಬಾದ್ ಕಣ್ಣ ಮುಚ್ಚಾಲೆಯಾಡುತ್ತಿದೆ. ಒಂದು ಹೆಜ್ಜೆ ಮುಂದಿರಿಸಿದರೆ, ಎರಡು ಹೆಜ್ಜೆ ಹಿಂದಿರಿಸುತ್ತದೆ. ಇದರಿಂದ ಭಾರತ ಸರ್ಕಾರ ಕೋಪಗೊಂಡಿದೆ. ಇಸ್ಲಾಮಾಬಾದ್ ತನ್ನ ಎಂದಿನ ಆಟವನ್ನೇ ಆಡುತ್ತಿದೆ. ಮುಂಬೈದಾಳಿಯಲ್ಲಿ ಪಾಕಿಸ್ತಾನದ ಕೈ ಇರುವ ಕುರಿತು ಭಾರತ ಬಲವಾದ ಪುರಾವೆ ನೀಡುತ್ತಿಲ್ಲ ಎಂಬುದು ಪಾಕಿಸ್ತಾನದ ಒಂದೇ ರಾಗ.

ಆದರೆ, ಇದೀಗ ಈ ಕುರಿತು ದನಿ ಎತ್ತಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, "ಇದುವರೆಗೆ ಅಂತಾರಾಷ್ಟ್ರೀಯ ಸಮುದಾಯದಿಂದ ಸ್ವಲ್ಪಮಟ್ಟಿಗಿನ ಪ್ರಯತ್ನ ನಡೆದಿದೆಯಾದರೂ ಇದು ಸಾಲದು. ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ" ಎಂದು ಹೇಳಿದ್ದಾರೆ. ಮುಂಬೈ ದಾಳಿ ನಡೆಸಿವರನ್ನು ನ್ಯಾಯಾಲಯದ ಕಟಕಟೆಗೆ ತರಲು ಮತ್ತು ಇಂತಹ ಭಯೋತ್ಪಾದನಾ ಕೃತ್ಯಗಳು ಮರುಕಳಿಸದಂತಹ ಪರಿಣಾಮಕಾರಿ ಪ್ರಯತ್ನಗಳನ್ನು ನಾವು ಕೈಗೊಳ್ಳಬೇಕಿದೆ ಎಂದು ಮುಖರ್ಜಿ ಹೇಳಿದ್ದಾರೆ.

ಇಂತಹುದೇ ಭಾವನೆ ಸೌತ್ ಬ್ಲಾಕಿನಿಂದಲೂ ವ್ಯಕ್ತವಾಗುತ್ತಿದೆ. "ನಮ್ಮ ಕಾರ್ಯವನ್ನು ಕೈಗೊಳ್ಳಲು ನಾವು ಅಮೆರಿಕ ಇಲ್ಲವೇ ಇತರ ಯಾವುದೇ ಶಕ್ತಿಗಳನ್ನು ಅವಲಂಭಿಸಿಲ್ಲ. ಆಂತರ್ಯದಲ್ಲಿ ಪ್ರತಿ ರಾಷ್ಟ್ರವು ತನ್ನದೇ ಆತ ಹಿತಾಸಕ್ತಿಯನ್ನು ಹೊಂದಿರುತ್ತದೆ. ಆದರೆ ಪಾಕಿಸ್ತಾನವು ಸಹಕರಿಸುವಂತೆ ಮಾಡಬೇಕೆಂದಿರುವ ಸಮಾನಾಸಕ್ತ ರಾಷ್ಟ್ರಗಳೊಂದಿಗೆ ಹೇಗೆ ಕಾರ್ಯಕೈಗೊಳ್ಳಬಹುದು ಎಂಬುದನ್ನು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಮೂಲಸೌಕರ್ಯವು ಎಲ್ಲಾ ನಾಗರಿಕ ವಿಶ್ವದ ಶಾಂತಿ ಮತ್ತು ಭದ್ರತೆಗೆ ಅತಿದೊಡ್ಡ ಅಪಾಯವಾಗಿದೆ ಎಂದು ಪ್ರಣಬ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪದವೀಧರ ಭಿಕ್ಷುಕರ ಸಂಪಾದನೆ ದಿನಕ್ಕೆ 500 ರೂ.!
ಕಸಬ್ ಪತ್ರದ ಪುರಾವೆ ಸಾಲದು: ಪಾಕಿಸ್ತಾನ
ಕಸಬ್ ಪತ್ರ ಪಾಕಿಸ್ತಾನ ಹೈಕಮಿಷನ್‌ಗೆ ಹಸ್ತಾಂತರ
ಪಾಕಿಸ್ತಾನ ಬದ್ಧತೆಯಿಂದ ಜಾರಿಕೊಳ್ಳುವಂತಿಲ್ಲ: ಪ್ರಣಬ್
ಜಿಂಕೆ ಮರೀನಾ. ಅದು ತಾಯಿ ಪ್ರೀತಿನಾ?
ಶೀಘ್ರ ಕಾರ್ಯವೆಸಗಿ, ಇಲ್ಲ ದಿಗ್ಬಂಧನ ಎದುರಿಸಿ