ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕರ್ಕರೆ ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕರ್ಕರೆ ಮರಣೋತ್ತರ ಪರೀಕ್ಷೆ ವರದಿ ಬಿಡುಗಡೆ
ಉಗ್ರರ ದಾಳಿಗೆ ಬಲಿಯಾಗಿರುವ ಧೀರೋದಾತ್ತ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರ ಮರಣೋತ್ತರ ಪರೀಕ್ಷೆ ವರದಿಯನ್ನು ಮುಂಬೈ ಕ್ರೈಂಬ್ರಾಂಚ್ ಬಿಡುಗಡೆ ಮಾಡಿದೆ.

ಉಗ್ರರು ಹಾರಿಸಿರುವ ಗುಂಡಿನಿಂದಲೇ ಕರ್ಕರೆ ಅವರು ಹತರಾಗಿರುವುದಾಗಿ ವರದಿ ಸ್ಪಷ್ಟವಾಗಿ ಹೇಳಿದೆ.

ಕರ್ಕರೆಯವರ ದೇಹವನ್ನು ಹೊಕ್ಕಿರುವ ಎಲ್ಲಾ ನಾಲ್ಕುಗುಂಡುಗಳೂ ಉಗ್ರರ ಬಂಧೂಕಿನಿಂದ ಸಿಡಿದವುಗಳಾಗಿವೆ ಎಂದು ವರದಿ ಹೇಳಿದೆ. ಇದಲ್ಲದೆ, ಕರ್ಕರೆ ಅವರು ಸಾವಿಗೆ ಮುಂಚಿತವಾಗಿ ಕಳುಹಿಸಿರುವ ಪ್ರತಿ ವೈರ್‌ಲೆಸ್ ಸಂದೇಶಗಳ ವಿವರಣೆಯನ್ನೂ ಪೊಲೀಸರು ಹೊಂದಿದ್ದಾರೆ.

ತನಿಖೆಗಳು ಹೇಳುವ ಪ್ರಕಾರ ಭಯೋತ್ಪಾದಕರು ಅಚಾತುರ್ಯದಿಂದಾಗಿ ಕಾಮಾ ಆಸ್ಪತ್ರೆಗೆ ತೆರಳಿದ್ದಾರೆ. ಅದು ಅವರ ಯೋಜಿತ ಉದ್ದೇಶವಾಗಿರಲಿಲ್ಲ. ಅವರು ಆ ಕಟ್ಟಡಕ್ಕೆ ತೆರಳಿ ಕಾವಲುಗಾರರನ್ನು ಕೊಂದು ಹಾಕಿ, ಕಟ್ಟಡದೊಳಕ್ಕೆ ತೆರಳುವುದು ಹೇಗೆಂದು ಇನ್ನೊಬ್ಬನನ್ನು ಕೇಳಿದ್ದಾರೆ.

ಸುಮಾರು 20 ನಿಮಿಷಗಳನ್ನು ಆಸ್ಪತ್ರೆಯಲ್ಲಿ ಕಳೆದಿರುವ ಉಗ್ರರು ತಾವೆಲ್ಲಿದ್ದೇವೆಂದು ತಿಳಿಯದೆ, ಬಳಿಕ ಆಸ್ಪತ್ರೆಯ ಮುಖ್ಯದ್ವಾರಕ್ಕೆ ಬಂದಿದ್ದಾರೆ.

ಇಲ್ಲಿ ಉಗ್ರರು ಅವಿತಿದ್ದಾರೆಂಬ ವಿಚಾರ ತಿಳಿದ ಕರ್ಕರೆ, ಹೆಚ್ಚುವರಿ ಆಯುಕ್ತ ಆಶೋಕ್ ಕಾಮ್ಟೆ ಮತ್ತು ಇನ್ಸ್‌ಪೆಕ್ಟರ್ ವಿಜಯ್ ಸಾಲಸ್ಕರ್ ಅವರು ವಾಹನದಲ್ಲಿ ಅತ್ಯಂತ ಕಡಿಮೆ ವೇಗದಲ್ಲಿ ಕಾಮಾ ಆಸ್ಪತ್ರೆಯತ್ತ ತೆರಳಿದ್ದಾರೆ.

ಅಷ್ಟರಲ್ಲಿ ಗಿಡಗಳ ಮರೆಯಲ್ಲಿದ್ದ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಮತ್ತು ಆತ ಮೃತ ಸಹಚರ ಪೊಲೀಸ್ ವ್ಯಾನಿನತ್ತ ಗುಂಡು ಹಾರಿಸಿದ್ದಾರೆ. ವಾಹನದಲ್ಲಿ ಇದ್ದವರು ಯಾರೆಂಬುದು ಉಗ್ರರಿಗೆ ತಿಳಿದಿಲ್ಲ. ಅವರು ಇದು ಪೊಲೀಸ್ ವಾಹನ ಎಂದಷ್ಟೆ ತಿಳಿದ ಉಗ್ರರು ಈ ವಾಹನದಮೇಲೆ ಗುಂಡು ಹಾರಿಸಿ ಮೂವರ ಜೀವ ತೆಗೆದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕರ್ಕರೆ ಸಾವಿನ ಕುರಿತು ಅಲ್ಪಸಂಖ್ಯಾತ ಸಚಿವ ಎ.ಆರ್.ಅಂತುಳೆ ಅವರು ಕಣ್ಣಿಗೆ ಕಾಣುವುದಕ್ಕಿಂತ ಮಿಗಿಲಾದುದು ಏನೋ ಇದೆ ಎಂಬುದಾಗಿ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದರು.

ಅಂತುಳೆ ಹೇಳಿಕೆಗೆ ಲೋಕಸಭೆಯಲ್ಲಿ ಮಂಗಳವಾರ ಸ್ಪಷ್ಟನೆ ನೀಡಿರುವ ಗೃಹಸಚಿವ ಪಿ.ಚಿದಂಬರಂ ಅವರು ಕರ್ಕರೆ ಅವರು ಉಗ್ರರ ಗುಂಡಿನಿಂದಲೇ ಸಾವನ್ನಪ್ಪಿತ್ತು, ಈ ಕುರಿತು ವ್ಯಕ್ತವಾಗಿರುವ ಶಂಕೆಗಳ ಕುರಿತು ವಿಶಾದ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಶ್ಮೀರದ ಅರ್ಧ ಭಾಗ ಪಾಕಿನಿಂದ ಕಿತ್ತುಕೊಳ್ಳಿ: ಠಾಕ್ರೆ
ಉಲ್ಟಾ ಹೊಡೆದ ಅಂತುಳೆ, 'ಕರ್ಕರೆ' ತನಿಖೆ ಬೇಕಿಲ್ಲ
ಭಾರತದ್ದು ಏಕಾಂಗಿ ಹೋರಾಟವೇ?
ಪದವೀಧರ ಭಿಕ್ಷುಕರ ಸಂಪಾದನೆ ದಿನಕ್ಕೆ 500 ರೂ.!
ಕಸಬ್ ಪತ್ರದ ಪುರಾವೆ ಸಾಲದು: ಪಾಕಿಸ್ತಾನ
ಕಸಬ್ ಪತ್ರ ಪಾಕಿಸ್ತಾನ ಹೈಕಮಿಷನ್‌ಗೆ ಹಸ್ತಾಂತರ