ನೆರೆ ರಾಷ್ಟ್ರ ಪಾಕಿಸ್ತಾನದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಅವರು ಮಂಗಳವಾರ ಸಿಯಾಚಿನ್ ಗ್ಲೇಶಿಯರ್ ಮತ್ತು ಜಮ್ಮು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಸೇನಾಪಡೆಗಳ ಸಿದ್ಧತೆಯ ಪರೀಕ್ಷೆ ನಡೆಸಲು ತುರ್ತು ಭೇಟಿ ನೀಡಿದ್ದಾರೆ.
ಸಿಯಾಚಿನ್ ಗ್ಲೇಶಿಯರ್‌ಗೆ ಮಂಗಳವಾರ ಮುಂಜಾನೆ ತೆರಳಿರುವ ಕಪೂರ್ ಅವರು ಒಂದು ದಿನ ಅಲ್ಲಿ ಇದ್ದು, ಘಟಕಗಳ ಕಮಾಂಡರ್‌ಗಳು, ಹಿರಿಯ ಅಧಿಕಾರಿಗಳೊಂದಿಗೆ ಮಾತಕತೆ ನಡೆಸಲಿದ್ದು ಪರಿಸ್ಥಿತಿಯ ಪೂರ್ಣ ಮಾಹಿತಿ ಪಡೆಯಲಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಗಡಿಯಾದ್ಯಂತವಿರುವ ದುರ್ಗಮ ಪ್ರದೇಶಗಳಿಗೂ ಅವರು ಭೇಟಿ ನೀಡಲಿದ್ದು ಅಲ್ಲಿರುವ ಪಡೆಗಳೊಂದಿಗೂ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. |