ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್ ತಪ್ಪೊಪ್ಪಿಗೆ ಟಿವಿಯಲ್ಲಿ ನೇರ ಪ್ರಸಾರ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ತಪ್ಪೊಪ್ಪಿಗೆ ಟಿವಿಯಲ್ಲಿ ನೇರ ಪ್ರಸಾರ?
ND
ಪಾಕಿಸ್ತಾನದ ವಂಚನೆಯನ್ನು ಅಂತಾರಾಷ್ಟ್ರೀಯವಾಗಿ ಬಟಾಬಯಲು ಮಾಡಲು ಮುಂದಾಗಿರುವ ಭಾರತ ಬಂಧಿತ ಉಗ್ರ ಅಜ್ಮಲ್ ಅಮೀರ್ ಕಸಬ್‌ನ ತಪ್ಪೊಪ್ಪಿಗೆಯನ್ನುದೂರದರ್ಶನದಲ್ಲಿ ವಿಶ್ವಾದ್ಯಂತ ನೇರ ಪ್ರಸಾರ ಮಾಡಲು ಮುಂದಾಗಿದೆ ಎಂದು ವರದಿಗಳು ಹೇಳುತ್ತವೆ.

ತನಿಖಾಗಾರರು ವಿಶ್ವಾದ್ಯಂತ ನೇರ ಪ್ರಸಾರದ ಸಾಧ್ಯತೆಯನ್ನು ಪರಿಶೀಲಿಸುತ್ತಿವೆ ಎಂದು ಹೇಳಲಾಗಿದೆ. ಮುಂಬೈ ದಾಳಿಯಲ್ಲಿ ಅಜ್ಮಲ್‌ನ ಪಾತ್ರ ಹಾಗೂ ಆತನ ಪೂರ್ವಾಪರಗಳ ವಿವರಣೆಯನ್ನು ಬಿತ್ತರಿಸುವ ಮೂಲಕ ಅಂತಾರಾಷ್ಟ್ರೀಯವಾಗಿ ಪಾಕಿಸ್ತಾನದ ಮುಖಕ್ಕೆ ತಿವಿಯುವುದು ಭಾರತದ ಉದ್ದೇಶ ಎನ್ನಲಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳು ಇತ್ತೀಚಿನ ಭಯೋತ್ಪಾದನಾ ದಾಳಿಯಲ್ಲಿ ಪಾಲ್ಗೊಂಡಿರುವುದನ್ನು ಸಾಬೀತು ಪಡಿಸುವ ಪುರಾವೆಗಳನ್ನೆಲ್ಲ ಅಲ್ಲಗಳೆಯುತ್ತಲೇ ಬಂದಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಈ ನಿರ್ಭಿಡೆಯ ಹೆಜ್ಜೆಯನ್ನಿಡಲಾಗುತ್ತದೆ ಎನ್ನಲಾಗಿದೆ.

ಇದಲ್ಲದೆ ಮುಂಬೈ ದಾಳಿ ನಡೆಸಿರುವ ಎಲ್ಲಾ 10 ಉಗ್ರರ ಹೆಸರನ್ನೂ ಭಾರತವು ಬಿಡುಗಡೆ ಮಾಡಿತ್ತು.

ನವದೆಹಲಿಯಲ್ಲಿ ಮಂಗಳವಾರ ನಡೆಸಲಾಗಿರುವ ಉನ್ನತ ಮಟ್ಟದ ಸಭೆಯಲ್ಲಿ ಹಿರಿಯ ಗುಪ್ತಚರ ಅಧಿಕಾರಿಗಳು ಮತ್ತು ಗೃಹಸಚಿವಾಲಯದ ಅಧಿಕಾರಿಗಳು ಕಸಬ್‌ನ ತಪ್ಪೊಪ್ಪಿಗೆಯ ನೇರಪ್ರಸಾರದ ಒಳಿತುಕೆಡುಕುಗಳ ಕುರಿತು ಚರ್ಚಿಸಿದ್ದು ಈ ಬೃಹತ್ ಹೆಜ್ಜೆಯ ಕುರಿತು ಸಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಹೇಳಲಾಗಿದೆ.

ಅದೇನೆ ಇದ್ದರೂ, ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕಿದೆ. ವರದಿಗಳು ಹೇಳುವ ಪ್ರಕಾರ ಕಸಬ್ ಎಂದು ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾನೆ ಎಂಬ ದಿನಾಂಕವನ್ನು ಸದ್ಯವೇ ಘೋಷಿಸಲಾಗುವುದು ಎಂದು ಹೇಳಲಾಗಿದೆ.

ಒಂದೊಮ್ಮೆ ಕಸಬ್ ತಪ್ಪೊಪ್ಪಿಗೆ ದೃಶ್ಯದ ನೇರ ಪ್ರಸಾರವಾದರೆ, ಇದು ವಿಶ್ವದಲ್ಲೇ ಮೊದಲ ಬಾರಿಗೆ ಉಗ್ರನೊಬ್ಬನ ತಪ್ಪೊಪ್ಪಿಗೆಯ ನೇರ ಪ್ರಸಾರದ ಘಟನೆಯಾಗಲಿದೆ. ಈತನ ಹೇಳಿಕೆಯು ಸರಳವಾಗಿ ಅರ್ಥವಾಗುವಂತೆ ಇಂಗ್ಲೀಷ್ ಭಾಷಾಂತರವನ್ನೂ ಪ್ರಸಾರ ಮಾಡಲಾಗುವುದು.

ಪಾಕಿಸ್ತಾನದ ನಿರಂತರ ಹಠಮಾರಿ ಧೋರಣೆಯ ಉದ್ಧಟತನದಿಂದ ರೋಸಿ ಹೋಗಿರುವ ಭಾರತ ಈ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಯೂಸುಫ್ ರಾಜಾ ಗಿಲಾನಿ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಲು ಮತ್ತು ಭಯೋತ್ಪಾದನೆ ವಿರುದ್ಧ ತನ್ನ ಬದ್ಧತೆಗಳ ವಿಚಾರದಲ್ಲಿ ಪಾಕಿಸ್ತಾನವು ಮತ್ತೆಮತ್ತೆ ವಿಫಲವಾಗುತ್ತದೆ ಎಂಬುದನ್ನು ವಿಶ್ವಕ್ಕೇ ತೋರಿಸಲು ಭಾರತ ಈ ಹೆಜ್ಜೆ ಇರಿಸಲಿದೆ.

ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಿದವರಿಗೆ ಪಾಕಿಸ್ತಾನ ನೆಲದಿಂದ ಕಾರ್ಯಾಚರಿಸುತ್ತಿರುವವರು ಕಾರಣ ಎಂಬುದಾಗಿ ಭಾರತವು ನೀಡಿರುವ ಪುರಾವೆಯನ್ನೆಲ್ಲ ಅಲ್ಲಗಳೆಯುತ್ತಲೇ ಬಂದಿರುವ ಪಾಕಿಸ್ತಾನ 'ದೃಢವಾದ' ಪುರಾವೆ ನೀಡಿದರೆ ಭಾರತಕ್ಕೆ ಸಹಕರಿಸಲು ಸಿದ್ಧ ಎಂಬ ರಾಗವನ್ನು ಹಾಡುತ್ತಲೇ ಕಾಲಕಳೆಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಶ್ಮೀರ: ಕೊನೆಯ ಹಂತದಲ್ಲಿ ಮಂದಗತಿ ಮತದಾನ
ರಾಜೀನಾಮೆ ಬೇಕಿದ್ರೆ ಕಾಲು ಹಿಡೀಲಿ: ಅಂತುಳೆ
ಯುದ್ದೋನ್ಮಾದ ಸೃಷ್ಟಿಸಬೇಡಿ: ಪಾಕ್‌ಗೆ ಭಾರತ
ಸಿಯಾಚಿನ್‌ಗೆ ಸೇನಾಮುಖ್ಯಸ್ಥ ಕಪೂರ್ ಭೇಟಿ
ಎಂಪಿ ಬಸ್ ಅಪಘಾತದಲ್ಲಿ 20 ಮಂದಿ ಸುಟ್ಟು ಕರಕಲು
ಕಾಶ್ಮೀರ: ಬಂಧನಕ್ಕೀಡಾದ ಉಗ್ರರಲ್ಲೊಬ್ಬ ಪಾಕ್ ಸೈನಿಕ