ಮುಂಬೈ ದಾಳಿಯ ರೂವಾರಿ ಎನ್ನಲಾಗಿರುವ ಲಷ್ಕರೆ ಸಂಘಟನೆಯ ನಾಲ್ವರು ಕಾರ್ಯಕರ್ತರು ಫೆಬ್ರವರಿಯಲ್ಲಿ ಪೊಲೀಸರ ಬಂಧನಕ್ಕೆ ಈಡಾಗದೇ ಇರುತ್ತಿದ್ದರೆ, ಮಾರಣಾಂತಿಕ ಮುಂಬೈ ದಾಳಿಯು ಈ ಹಿಂದೆಯೇ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.ಫಾಹಿಮ್ ಅನ್ಸಾರಿ, ಸಬಾವುದ್ದೀನ್ ಮತ್ತು ಇವರ ಇಬ್ಬರು ಸಹಚರರನ್ನು ಉತ್ತರ ಪ್ರದೇಶ ಎಟಿಎಸ್ ಬಂಧಿಸಿದ್ದ ಕಾರಣ, ಉಗ್ರರ ಪೂರ್ವ ಯೋಜನೆಗಿಂತ ವಿಳಂಬವಾಗಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ." ಫಾಹಿಮ್, ಸಬಾವುದ್ದೀನ್ ಹಾಗೂ ಅವರ ಸಹಚರರಾಗಿರುವ ಮೊಹಮ್ಮದ್ ಫಾರೂಕ್ ಮತ್ತು ಇಮ್ರಾನ್ ಶೆಹಜಾದ್ ಅವರುಗಳನ್ನು ನಾವು ತನಿಖೆ ನಡೆಸಿದ ವೇಳೆ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ ಈ ದಾಳಿಯನ್ನು ಈ ಹಿಂದೆಯೇ ನಡೆಸಲು ಯೋಜಿಸಲಾಗಿತ್ತು" ಎಂದು ಉತ್ತರ ಪ್ರದೇಶ ಎಟಿಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.ದಾಳಿಯ ವಿಳಂಬದ ಕಾರಣ ದಾಳಿಯ ಭೀಕರ ಪರಿಣಾಮವೂ ಹೆಚ್ಚಾಗಿತ್ತು. "ದಾಳಿಯ ಮಟ್ಟವನ್ನು ವಿಸ್ತರಿಸಲಾಗಿತ್ತು ಮತ್ತು ಸಮುದ್ರ ಮಾರ್ಗವಾಗಿ ದೇಶಕ್ಕೆ ನುಗ್ಗುವ ಯೋಜನೆಯನ್ನು ಬಳಸಿಕೊಳ್ಳಲಾಗಿದೆ" ಎಂದು ಅವರು ತಿಳಿಸಿದ್ದಾರೆ.ಅನ್ಸಾರಿ ಹಾಗೂ ಅಹ್ಮದ್‌ನ ತನಿಖೆಯ ಮಾಹಿತಿಗಳ ಪ್ರಕಾರ ಈ ಯೋಜನೆಯನ್ನು ಪಾಕಿಸ್ತಾನದಲ್ಲಿ ಲಷ್ಕರೆಯ ಉನ್ನತ ನಾಯಕರಾದ ಮುಝಾಮ್ಮಿಲ್ ಅಲಿಯಾಸ್ ಅಬು ಯೂಸುಫ್, ಕಾಫಾ ಮತ್ತು ಝಕಿರ್ ಉರ್ ರೆಹ್ಮಾನ್ ಅಲಿಯಾಸ್ ಅವರುಗಳು ಯೋಜಿಸಿ ನಿರ್ದೇಶಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. |