ಲೋಕೋಪಯೋಗಿ ಇಲಾಖೆಯ ಎಂಜೀನಿಯರನೊಬ್ಬನನ್ನು ಶಾಸಕರೊಬ್ಬರ ಸ್ಥಳೀಯ ಬಿಎಸ್ಪಿ ಬೆಂಬಲಿಗರು ಎಂದು ಹೇಳಲಾಗಿರುವ ಅಪರಿಚಿತರು ಮಾರಣಾಂತಿಕವಾಗಿ ಥಳಿಸಿದ ಘಟನೆ ಇಲ್ಲಿಗೆ ನೂರು ಕಿಮೀ ದೂರದ ಔರಾಯಿಯ ಎಂಬಲ್ಲಿ ಸಂಭವಿಸಿದೆ.ದುಷ್ಕರ್ಮಿಗಳ ದಾಳಿಯಿಂದ ಸಾವನ್ನಪ್ಪಿರುವ ಎಂಜೀನಿಯರ್ ಎಂ.ಕೆ.ಗುಪ್ತಾ ಪತ್ನಿ ಶಶಿ ಗುಪ್ತಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. "ಇಬ್ಬರು ಅಪರಿಚಿತರು ದಿಬಿಯಾಪುರದ ಗೈಲ್ ವಿಹಾರ್ ಎಂಬಲ್ಲಿರುವ ತಮ್ಮ ಮನೆಯೊಳಕ್ಕೆ ಬಲವಂತದಿಂದ ಪ್ರವೇಶಿಸಿದ್ದು ತನ್ನ ಪತಿಯನ್ನು ಹಿಗ್ಗಾಮುಗ್ಗಾ ಥಳಿಸಿದರು. ಈ ವೇಳೆಗೆ ಅವರು ನನ್ನನ್ನು ಬಚ್ಚಲು ಮನೆಯಲ್ಲಿ ಕೂಡಿಹಾಕಿದ್ದರು. ಇದಾದ ಬಳಿಕ ಇಲ್ಲಿನ ಶಾಸಕ ಶೇಖರ್ ತಿವಾರಿ ಅವರು ಸ್ಥಳಕ್ಕೆ ತಲುಪಿದ್ದು, ಗಂಭೀರ ಗಾಯಗೊಂಡಿದ್ದ ಗುಪ್ತಾರನ್ನು ಪಕ್ಕದ ಪೊಲೀಸ್ ಠಾಣೆಯ ಪಕ್ಕ ಎಸೆದು ಹೋಗಿದ್ದರು. ಇಲ್ಲಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು" ಎಂಬುದಾಗಿ ದೂರಿನಲ್ಲಿ ಶಶಿ ಗುಪ್ತಾ ಹೇಳಿದ್ದಾರೆ.ಶಾಸಕ ತಿವಾರಿ ತಲೆತಪ್ಪಿಸಿಕೊಂಡಿದ್ದು ಆತನ ಹುಡುಕಾಟ ನಡೆಸಲಾಗಿದೆ ಎಂದು ಎಡಿಜಿಪಿ ಬ್ರಿಜ್ ಲಾಲ್ ಹೇಳಿದ್ದಾರೆ.ಬಿಎಸ್ಪಿ ನಾಯಕಿ ಮಾಯಾವತಿ ಹುಟ್ಟುಹಬ್ಬಾಚರಣೆ ನಿಧಿಗಾಗಿ ತಿವಾರಿ ಮೃತ ಮೆಹ್ತಾರಲ್ಲಿ ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದು, ಇದಕ್ಕೆ ಗುಪ್ತಾ ನಿರಾಕರಣೆ ವ್ಯಕ್ತಪಡಿಸಿರುವುದು ಈ ಹೇಯ ಕೃತ್ಯಕ್ಕೆ ಕಾರಣ ಎಂದು ಹೇಳಲಾಗಿದೆ.ದಾಳಿ ನಡೆಸಿದ ವ್ಯಕ್ತಿಗಳು ಪರಸ್ಪರ ತ್ಯಾಗಿ ಮತ್ತು ಭಾಟಿಯಾ ಎಂದು ಕರೆದುಕೊಳ್ಳುತ್ತಿದ್ದರು ಎಂದು ಶಶಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.ಈ ಕುರಿತು ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದ್ದು ಸಂಪೂರ್ಣ ವಿಚಾರದ ಕುರಿತು ತನಿಖೆ ನಡೆಸುವುದಾಗಿ ಹೆಚ್ಚುವರಿ ಎಸ್ಪಿ ಸುರೇಶ್ವರ್ ಮಿಶ್ರಾ ತಿಳಿಸಿದ್ದಾರೆ.ತನಿಖೆಗೆ ಆದೇಶ ಆದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಬಿಎಸ್ಪಿ ವರಿಷ್ಠೆ ಮಾಯಾವತಿ ಅವರು ಈ ವಿವಾದದಿಂದ ದೂರ ಉಳಿಯಲು ಬಯಸಿದ್ದು ತನಿಖೆಗೆ ಆದೇಶ ನೀಡಿದ್ದಾರೆ. ಪಕ್ಷದ ಶಾಸಕ ಶೇಖರ್ ತಿವಾರಿ ಅವರು ತನ್ನ ಒತ್ತಡದ ಮೇಲೆ ಹುಟ್ಟುಹಬ್ಬಾಚರಣೆಗೆ ನಿಧಿ ಸಂಗ್ರಹಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.ಈ ಮಧ್ಯೆ, ಪ್ರಕರಣವನ್ನು ಬಲವಾಗಿ ಖಂಡಿಸಿರುವ ಭಾರತೀಯ ಜನತಾಪಕ್ಷ ಮೃತನಿಗೆ ನ್ಯಾಯ ಒದಸಬೇಕು ಎಂದು ಒತ್ತಾಯಿಸಿದೆ. |