ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮತ್ತೊಮ್ಮೆ ಪಾಕ್ ಸಹಾಯ ಕೋರಿದ ಉಗ್ರ ಕಸಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೊಮ್ಮೆ ಪಾಕ್ ಸಹಾಯ ಕೋರಿದ ಉಗ್ರ ಕಸಬ್
ND
ಮುಂಬೈದಾಳಿ ನಡೆಸಿದ ಉಗ್ರರರಲ್ಲಿ ಬದುಕುಳಿದ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಮತ್ತೊಮ್ಮೆ ಪಾಕಿಸ್ತಾನ ಹೈಮಿಶನ್‌ನಿಂದ ಸಹಾಯ ಯಾಚಿಸಿದ್ದಾನೆ. ಆದರೆ ಪಾಕಿಸ್ತಾನ ಮಾತ್ರ ಆತ ತನ್ನ ರಾಷ್ಟ್ರದವನೆಂದು ಒಪ್ಪಿಕೊಳ್ಳಲು ಹಿಂದೇಟು ಹಾಕಿದೆ.

ಬುಧವಾರ ಈತನನ್ನು ಕಸ್ಟಡಿಯಲ್ಲೇ ವಿಚಾರಣೆ ನಡೆಸಿರುವ ವೇಳೆಗೆ ಕಾನೂನು ಸಹಾಯಕ್ಕಾಗಿ ತಾನು ಪಾಕಿಸ್ತಾನ ಹೈ ಕಮಿಷನ್ ಸಂಪರ್ಕ ಬಯಸಲು ಇಚ್ಚಿಸುವುದಾಗಿ ಮ್ಯಾಜೆಸ್ಟ್ರೀಟ್ ಬಳಿ ಹೇಳಿದ್ದಾನೆ.

ಕಾನೂನು ಸಹಾಯ ಒದಗಿಸಲು ಪಾಕಿಸ್ತಾನವನ್ನು ಕೋರುತ್ತಿರುವುದು ಆತ ಇದು ಎರಡನೆ ಬಾರಿಯಾಗಿದೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನ ಹೈ ಕಮಿಷನ್‌ಗೆ ಪತ್ರಬರೆಯುವ ಮೂಲಕ ಆತ ಈ ವಿನಂತಿ ಮಾಡಿದ್ದ. ಆದರೆ 'ಆತ ನಮ್ಮವನಲ್ಲ' ಎಂಬ ಹೇಳಿಕೆಯನ್ನೇ ಮುಂದುವರಿಸಿದ ಪಾಕ್ ಆತನ ಪತ್ರಕ್ಕೆ ಸ್ಪಂದಿಸಿರಲಿಲ್ಲ.

ಆತ ತನ್ನ ಪತ್ರದಲ್ಲಿ ತನ್ನ ಸಹಚರ ಇಸ್ಮಾಯಿಲ್ ಖಾನ್‌ನ ಶವವನ್ನು ಕೊಂಡೊಯ್ದು ಇಸ್ಲಾಮಿ ಶಾಸ್ತ್ರಗಳ ಪ್ರಕಾರ ಅಂತಿಮ ಸಂಸ್ಕಾರ ಮಾಡುವಂತೆ ಕೇಳಿಕೊಂಡಿದ್ದ. ಆ ಪತ್ರದಲ್ಲಿ ಆತ ಆತನನ್ನು ಭಯೋತ್ಪಾದನಾ ಕಣಕ್ಕೆ ಇಳಿಸಿರುವ ಝಾಕಿರ್ ಉರ್ ರೆಹ್ಮಾನ್ ಲಕ್ವಿ, ಹಾಗೂ ತನ್ನ ತರಬೇತುದಾರರಾದ ಲಷ್ಕರೆ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಸದಸ್ಯ ಕಹಾಫ ಇವರುಗಳ ಹೆಸರುಗಳನ್ನು ನಮೂದಿಸಿದ್ದ.

ಪಾಕಿಸ್ತಾನವು ಕಸಬ್ ಪತ್ರದ ಪರಿಶೀಲನೆ ನಡೆಸುತ್ತಿದ್ದು, ತನ್ನ ನಿಲುವಿನ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ಏತನ್ಮಧ್ಯೆ, ಇಂದಿನ ವಿಚಾರಣೆ ವೇಳೆಗೆ ಆತನ ಪೊಲೀಸ್ ಕಸ್ಟಡಿಯನ್ನು ಜನವರಿ 6ರ ತನಕ ಮುಂದುವರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
17 ನಿಮಿಷಗಳಲ್ಲಿ 8 ಮಸೂದೆಗಳ ಅಂಗೀಕಾರ
ಮಾಯಾ ನಿಧಿಗೆ ದೇಣಿಗೆ ನೀಡದ ಎಂಜೀನಿಯರ್ ಹತ್ಯೆ?
ನಾಲ್ವರು ಲಷ್ಕರೆಗಳ ಬಂಧನದಿಂದ ಮುಂಬೈ ದಾಳಿ ವಿಳಂಬ
ಕಸಬ್ ತಪ್ಪೊಪ್ಪಿಗೆ ಟಿವಿಯಲ್ಲಿ ನೇರ ಪ್ರಸಾರ?
ಕಾಶ್ಮೀರ: ಕೊನೆಯ ಹಂತದಲ್ಲಿ ಮಂದಗತಿ ಮತದಾನ
ರಾಜೀನಾಮೆ ಬೇಕಿದ್ರೆ ಕಾಲು ಹಿಡೀಲಿ: ಅಂತುಳೆ