ಜಮ್ಮು ಕಾಶ್ಮೀರದಲ್ಲಿ ಬುಧವಾರ ನಡೆದ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನದಲ್ಲಿ ಕ್ಷೀಣಗತಿಯ ಮತದಾನವಾಗಿದೆ. ಪೊಲೀಸರು ಮತ್ತು ಚುನಾವಣಾ ಪ್ರತಿಭಟನಾಕಾರರ ನಡುವೆ ಸಣ್ಣಪುಟ್ಟ ಘರ್ಷಣೆಗಳನ್ನು ಹೊರತು ಪಡಿಸಿದರೆ, ಬಹುತೇಕ ಶಾಂತಿಯುತ ಮತದಾನವಾಗಿದೆ.
ಎಂಟು ಕ್ಷೇತ್ರಗಳಿಗೆ ನಡೆದ ಇಂದಿನ ಚುನಾವಣೆಯಲ್ಲಿ 16.91 ಲಕ್ಷ ಮಂದಿ ಮತದಾನಕ್ಕೆ ಅರ್ಹರಾಗಿದ್ದು, ಶೇ.34ರಷ್ಟು ಮಂದಿ ಮಾತ್ರ ಮತಗಟ್ಟೆಯತ್ತ ಮುಖಮಾಡಿದ್ದರು.
ಬೀದಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಭವಿಸಿರುವ ಘರ್ಷಣೆಯಲ್ಲಿ ಪತ್ರಿಕಾ ಛಾಯಾಗ್ರಾಹಕನೊಬ್ಬ ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ. ನಗರದ ಹಲವೆಡೆ ಚುನಾವಣಾ ವಿರೋಧಿಗಳು ಪ್ರತಿಭಟನೆ ನಡೆಸಿದರು. ಆದರೆ ಇವರ ಆಟ ನಡೆಯಲು ಪೊಲೀಸರು ಮತ್ತು ಅರೆಸೇನಾ ಪಡೆಗಳು ಅವಕಾಶ ನೀಡಲಿಲ್ಲ. |