ಲಕ್ನೋ : ಬಿಎಸ್‌ಪಿ ಶಾಸಕನಿಂದ ಹತ್ಯೆಗೀಡಾದ ಮುಖ್ಯ ಕಾರ್ಯನಿರ್ವಾಹಕಸ ಇಂಜೀನಿಯರ್ ಎಂ.ಕೆ.ಗುಪ್ತಾ ಅವರ ಪತ್ನಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿರುವುದನ್ನು ಮುಖ್ಯಮಂತ್ರಿ ಮಾಯಾವತಿ ತಳ್ಳಿಹಾಕಿದ್ದಾರೆ.
ಸಿಬಿಐ ತನಿಖೆಯ ಅಗತ್ಯ ನನಗೆ ಕಂಡುಬರುತ್ತಿಲ್ಲ. ನನ್ನ ಆದೇಶದ ಮೇರೆಗೆ ಪ್ರಕರಣದಲ್ಲಿ ಭಾಗಿಯಾದವರೆಲ್ಲರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಮುಖ್ಯಮಂತ್ರಿ ಮಾಯಾವತಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷ ರಾಜ್ಯದಾದ್ಯಂತ ನೀಡಿದ ಬಂದ್ ಕರೆಯನ್ನು ಖಂಡಿಸಿ, ಕಾನೂನುವಿರೋಧಿ ಚಟುವಟಿಕೆಗಳನ್ನು ತಾವು ಸಹಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡರಿಗೆ ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದಲ್ಲಿ ರಾಜಕೀಯ ಲಾಭ ಪಡೆದು ತಮ್ಮ ವಿರುದ್ಧ ಷಡ್ಯಂತ್ರ ರಚಿಸಲು ಸಮಾಜವಾದಿ ಪಕ್ಷದ ಮುಖಂಡರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಾಯಾವತಿ ಕಿಡಿಕಾರಿದ್ದಾರೆ. |