ರಾಜಸ್ಥಾನ ಪ್ರದೇಶದಲ್ಲಿರುವ ಪಾಕಿಸ್ತಾನ ಗಡಿಯಲ್ಲಿ ನಿಯೋಜಿತರಾಗಿರುವ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಎಂತಹುದೇ ಪರಿಸ್ಥಿತಿಗಳಿಗೂ ಮಾನಸಿಕ ಮತ್ತು ದೈಹಿಕವಾಗಿ ಸನ್ನದ್ಧರಾಗಿರಿ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ಸೂಚಿಸಿದ್ದಾರೆ.ರಾಜಸ್ಥಾನ ಗಡಿ ಪ್ರದೇಶದಲ್ಲಿರುವ ಜವಾನರನ್ನುದ್ದೇಶಿಸಿ ಮಾತನಾಡಿರುವ ಬಿಎಸ್ಎಫ್ ಎಡಿಜಿ ಯು.ಕೆ.ಬನ್ಸಾಲ್ ಅವರು, ಯುದ್ಧದಂತಹ ಪರಿಸ್ಥಿತಿ ಇಲ್ಲದಿದ್ದರೂ, ಯಾವುದೇ ಸವಾಲನ್ನು ಎದುರಿಸಲು ಅವರು ಸನ್ನದ್ಧರಾಗಿಬೇಕು ಎಂದು ಹೇಳಿದ್ದಾರೆ.ರಾಜಸ್ಥಾನದ ಗಡಿಪ್ರದೇಶಗಳಲ್ಲಿನ ಭದ್ರತೆಯ ಪರಾಮರ್ಷೆಗಾಗಿ ಮೂರು ದಿನಗಳ ಭೇಟಿ ನೀಡಿರುವ ಅವರು ಜೈಸಲ್ಮೇರ್‌ನ ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಭೇಟಿ ನೀಡಿದರು.ಗಡಿ ಪ್ರದೇಶದಲ್ಲಿರುವ ಹಳ್ಳಿಗಳವರಿಗೆ ಸ್ಥಳತೊರೆಯುವಂತೆ ಹೇಳಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ವದಂತಿಗಳು ಎಂದು ಅವರು ತಳ್ಳಿಹಾಕಿದ್ದು, ಅಂತಹ ಕಾರ್ಯಗಳು ನಡೆಯುತ್ತಿಲ್ಲ ಎಂದು ನುಡಿದರು. |