ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಔರಯ್ಯಾಗೆ ಎಸ್ಪಿ ಸತ್ಯ ಶೋಧನಾ ತಂಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಔರಯ್ಯಾಗೆ ಎಸ್ಪಿ ಸತ್ಯ ಶೋಧನಾ ತಂಡ
ಲಕ್ನೋ: ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎಂ.ಕೆ. ಗುಪ್ತಾ ಕೊಲೆ ಪ್ರಕರಣದ ಮಾಹಿತಿ ಸಂಗ್ರಹಿಸಲು ಸಮಾಜವಾದಿ ಪಕ್ಷವು ಶುಕ್ರವಾರ ಆರು ಸದಸ್ಯರ ಸತ್ಯಶೋಧನಾ ತಂಡವನ್ನು ಕಳುಹಿಸಿದೆ. ಗುಪ್ತಾ ಅವರನ್ನು ಬಿಎಸ್ಪಿ ಶಾಸಕ ಶೇಖರ್ ತಿವಾರಿ ಹಾಗೂ ಅವರ ಸಹಚರರು ಕೊಂದು ಹಾಕಿದ್ದರು.

ಸತ್ಯ ಶೋಧನಾ ತಂಡದ ನೇತೃತ್ವವನ್ನು ಮಾಜಿ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ ಅವರು ವಹಿಸಿದ್ದಾರೆ. ವಿಧಾನ ಮಂಡಲದಲ್ಲಿ ಪಕ್ಷದ ನಾಯಕ ಅಹಮದ್ ಹಸನ್ಸ ಅಶೋಖ್ ವಾಜಪೇಯಿಸ ಬಲರಾಮ್ ಯಾದವ್, ರಾಮ್‌ನರೇಶ್ ಯಾದವರ್ ಮತ್ತು ಸಂಸದ ರಘುರಾಜ್ ಸಿಂಗ್ ಸಕಯಾ ಅವರು ತಂಡದ ಇತರ ಸದಸ್ಯರಾಗಿದ್ದಾರೆ.

ತಂಡವು ತನ್ನ ವರದಿಯನ್ನು ಡಿಸೆಂಬರ್ 28ರೊಳಗಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರಿಗೆ ಸಲ್ಲಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ತಿಳಿಸಿದ್ದಾರೆ. ಡಿಸೆಂಬರ್ 28ರಂದು ಮುಲಾಯಂ ಸಿಂಗ್ ಯಾದವ್ ಅವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಮರ್ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ದುಡ್ಡು ಸಂಗ್ರಹಕ್ಕಾಗಿ ಬಿಎಸ್‌ಪಿಯ ಪೀಡನೆಗೊಳಗಾಗುವ ಎಂಜೀನಿಯರ್‌ಗಳಿಗೆ ರಕ್ಷಣೆ ನೀಡಲು ಪಕ್ಷವು ಸಿದ್ಧವಾಗಿದೆ ಎಂದು ಅವರು ಶಿವಪಾಲ್ ಅವರು ಹೇಳಿದ್ದಾರೆ.

ಪ್ರಸಕ್ತ ಬಜೆಟ್‌ನಲ್ಲಿ ಶೇ.50 ರಷ್ಟು ದುಡ್ಡು ಸಚಿವರು ಮತ್ತು ಅಧಿಕಾರಿಗಳಲ್ಲಿ ಸೋರಿ ಹೋಗುತ್ತಿದೆ ಎಂದು ಅವರು ದೂರಿದರು.
ಪ್ರಸಕ್ತ ಬಿಎಸ್‌ಪಿ ಸರ್ಕಾರದ ಸಚಿವರ ಆಸ್ತಿಗಳ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಲು ಉತ್ತರ ಪ್ರದೇಶ ರಾಜ್ಯಪಾಲ ಟಿ.ವಿ.ರಾಜೇಶ್ವರ್ ಅವರನ್ನು ಭೇಟಿಯಾಗುವುದಾಗಿ ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಂಬಿದರೆ ನಂಬಿ, ಬಿಟ್ಟರೆ ಬಿಡಿ: ತೈಲ ನೀರಿಗಿಂತ ಅಗ್ಗ!
ಸನ್ನದ್ಧರಾಗಿರಲು ಬಿಎಸ್‌ಎಫ್ ಜವಾನರಿಗೆ ಸೂಚನೆ
ವಿಐಪಿ ಭದ್ರತೆಗೆ ಹೊಸ ಸಂಸ್ಥೆ ರಚಿಸಿ: ಎನ್‌ಎಸ್‌ಜಿ
ಸಿಬಿಐ ತನಿಖೆ ಅಗತ್ಯವಿಲ್ಲ-ಮಾಯಾ
ಕ್ರಿಸ್‌ಮಸ್: ಗೋವಾದಲ್ಲಿ ಬಿಗಿಭಧ್ರತೆ, ಕಟ್ಟೆಚ್ಚರ
ಉ.ಪ್ರ. ಬಂದ್‌ ಕರೆ: ಪೊಲೀಸರಿಂದ ಗೋಲಿಬಾರ್