ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜನತೆಯ ಸಹಕಾರ ಕೋರಿದ ಗೃಹಸಚಿವ ಚಿದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನತೆಯ ಸಹಕಾರ ಕೋರಿದ ಗೃಹಸಚಿವ ಚಿದು
ಉಗ್ರವಾದದ ವಿರುದ್ಧ ಹೋರಾಡಲು ಗೃಹ ಸಚಿವ ಪಿ.ಚಿದಂಬರಂ ಅವರು ಪ್ರಜೆಗಳ ಸಹಕಾರ ಕೋರಿದ್ದಾರೆ. ಪ್ರಜೆಗಳು ಅಧಿಕಾರಿಗಳೊಂದಿಗೆ ವಿಪರೀತ 'ಅಡೆತಡೆಗಳಿಲ್ಲದಂತೆ' ಮಾಹಿತಿಗಳನ್ನು ಹಂಚಿಕೊಳ್ಳುವಂತಹ ವ್ಯವಸ್ಛೆಯೊಂದನ್ನು ಕಾರ್ಯಗತವಾಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಸಿಟಿಜನ್ ಚಾರ್ಟರ್ (ಪ್ರಜೆಗಳ ಸನ್ನದ್ದು) ಎಂಬ ಸಿಎನ್ಎನ್-ಐಬಿಎನ್ ಮತ್ತು ಹಿಂದೂಸ್ಥಾನ್ ಟೈಮ್ಸ್ ಕಾರ್ಯಕ್ರಮವನ್ನು ಸ್ವಾಗತಿಸಿದ ಅವರು ಜತೆಯಾಗಿ ಕೆಲಸ ಮಾಡುವ ಮೂಲಕ ಭಯೋತ್ಪಾದನೆಯ ವಿರುದ್ಧ ಹೋರಾಡಲು ರಾಷ್ಟ್ರದ ಸಿದ್ಧತೆಯನ್ನು ಹೆಚ್ಚಿಸಬಹುದು ಎಂದು ನುಡಿದರು.

ಜತೆಯಾಗಿ ಕಾರ್ಯನಿರ್ವಹಣೆ, ಕಾನೂನು ಪಾಲನೆ, ಜಾಗೃತಿ ಮತ್ತು ಮಾಹಿತಿಗಳ ಹಂಚಿಕೊಳ್ಳುವಿಕೆಯಿಂದ ರಾಷ್ಟ್ರದ ಸನ್ನದ್ಧತೆಯನ್ನು ಹೆಚ್ಚಿಸಲು ಸಾಧ್ಯ. ಪ್ರಜೆಗಳು ಕಾನೂನು ಪಾಲನೆ ಮಾಡುವ ಮೂಲಕ ಉಗ್ರವಾದದ ವಿರುದ್ಧ ಹೋರಾಡ ಬಹುದು ಎಂದು ನುಡಿದರು.

ನಮ್ಮದು ಕಾನೂನು ಪಾಲನಾ ಸಮಾಜವಾಗಬೇಕು. ಕಾನೂನು ಕೆಟ್ಟದಾಗಿದ್ದರೆ, ನಾವು ಕಾನೂನನ್ನು ಬದಲಿಸಬಹುದು. ಆದರೆ ಕಾನೂನು ಎಲ್ಲಿಯ ತನಕ ಇರುತ್ತದೆಯೋ ನಾವು ಅವುಗಳನ್ನು ಪಾಲಿಸಬೇಕು ಎಂದ ಅವರು ಸಮಾಜದಲ್ಲಿ ಜಾಗೃತಿಯನ್ನು ಕಾಪಾಡಲೂ ಸಹ ಪ್ರಜೆಗಳು ಸಹಕರಿಸಬಹುದು ಎಂದು ಅವರು ನುಡಿದರು.

ದಾಳಿಯ ಒಂದು ತಿಂಗಳ ಬಳಿಕ 'ಭಯೋತ್ಪಾದನೆಯ ವಿರುದ್ಧ ಪ್ರಜೆಗಳು' ಚಳುವಳಿಯಲ್ಲಿ ಸಾರ್ವಜನಿಕರು ವ್ಯಕ್ತಪಡಿಸಿದ ವ್ಯಗ್ರತೆ ಮತ್ತು ಉಗ್ರವಾದದ ವಿರುದ್ಧ ಪರಿಣಾಮಕಾರಿ ಹೋರಾಟಕ್ಕಾಗಿ ಶಿಫಾರಸ್ಸುಗಳನ್ನು ನೀಡಿರುವ ಸನ್ನದನ್ನು ಗೃಹಸಚಿವರಿಗೆ ಒಪ್ಪಿಸಲಾಯಿತು.

ಕಿರಣ್ ಬೇಡಿ, ಮೇಜರ್ ಜನರಲ್ ಅಫ್ಸಿರ್ ಕರಿಮ್ ಮತ್ತು ಜಮ್ಮು ಕಾಶ್ಮೀರ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಅಮಿತಾಭ್ ಮಟ್ಟೂ ಅವರನ್ನೊಳಗೊಂಡ ಪರಿಣತರ ತಂಡವು ಸಾರ್ವಜನಿಕರು ನೀಡಿರುವ ಸಲಹೆಗಳಿಂದ ಆಯ್ದ ಶ್ರೇಷ್ಠ ಮತ್ತು ಪ್ರಾಯೋಗಿಕ ಶಿಫಾರಸ್ಸುಗಳನ್ನು ಗೃಹಸಚಿವರಿಗೆ ಒಪ್ಪಿಸಲಾಯಿತು.

ಬಿಕ್ಕಟ್ಟು ನಿರ್ವಹಣೆ, ತುರ್ತು ಪ್ರತಿಸ್ಪಂದನೆ ವ್ಯವಸ್ಥೆಗಳು ಹಾಗೂ ಏಕರೀತಿಯ ಗುರುತು ಚೀಟಿಗಳ ನೀಡುವಿಕೆ, ತಾಂತ್ರಿಕತೆಯ ಸೂಕ್ತ ಬಳಕೆ ಮತ್ತು ಹಿಂದಿನ ಲೋಪದೋಷಗಳ ನಿವಾರಣೆ ಮತ್ತು ಪೊಲೀಸ್ ವ್ಯವಸ್ಥೆಯ ತುರ್ತು ಆಧುನಿಕತೆ ಮುಂತಾದ ಶಿಫಾರಸ್ಸುಗಳು ಪ್ರಜೆಗಳ ಸನ್ನದಿನಲ್ಲಿ ಸೇರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೌದಿಗೆ ಪಾಕ್ ಕೈವಾಡದ ಬಗ್ಗೆ ಪುರಾವೆ ನೀಡಿದ ಭಾರತ
ಪ್ರಧಾನಿ - ಸೇನಾಮುಖ್ಯಸ್ಥರ ಉನ್ನತ ಸಭೆ
ಔರಯ್ಯಾಗೆ ಎಸ್ಪಿ ಸತ್ಯ ಶೋಧನಾ ತಂಡ
ನಂಬಿದರೆ ನಂಬಿ, ಬಿಟ್ಟರೆ ಬಿಡಿ: ತೈಲ ನೀರಿಗಿಂತ ಅಗ್ಗ!
ಸನ್ನದ್ಧರಾಗಿರಲು ಬಿಎಸ್‌ಎಫ್ ಜವಾನರಿಗೆ ಸೂಚನೆ
ವಿಐಪಿ ಭದ್ರತೆಗೆ ಹೊಸ ಸಂಸ್ಥೆ ರಚಿಸಿ: ಎನ್‌ಎಸ್‌ಜಿ