ಇಲ್ಲಿ ನಡೆದ ಡಿಎಂಕೆ ಪಕ್ಷದ ಮಹಾಮಂಡಳ ಸಭೆಯಲ್ಲಿ ತಮಿಳ್ನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಪಕ್ಷಾಧ್ಯಕ್ಷರಾಗಿ ಸತತ ಹತ್ತನೇ ಬಾರಿಗೆ ಅವಿರೋಧ ಆಯ್ಕೆಯಾಗಿದ್ದಾರೆ.ಪಕ್ಷದ ಅನುಭವಿ ನಾಯಕರಾಗಿರುವ ಜಿ.ಎಂ. ಶಾ ಅವರು ಚುನಾವಣಾಧಿಕಾರಿಯ ಕರ್ತವ್ಯ ನಿರ್ವಹಿಸಿದ್ದು, ಕರುಣಾನಿಧಿಯವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಜಿಲ್ಲಾಕಾರ್ಯದರ್ಶಿಗಳು ಸಲ್ಲಿಸಿರುವ 41 ಸೆಟ್ ನಾಮನಿರ್ದೇಶನಗಳು ಕರುಣಾನಿಧಿಯವರ ಪರವಾಗಿ ಸಲ್ಲಿಸಲ್ಪಟ್ಟಿತ್ತು ಎಂದು ಶಾ ತಿಳಿಸಿದರು.ಇದೇ ವೇಳೆ ಕೆ.ಅಂಬಜಗನ್ ಅವರು ಎಂಟನೆ ಬಾರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.ಕರುಣಾನಿಧಿಯವರ ಪತ್ರ ಸಚಿವ ಎಂ.ಕೆ.ಸ್ಟಾಲಿನ್ ಅವರು ಪಕ್ಷದ ಖಜಾಂಜಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.ಸ್ಟಾಲಿನ್ ಅವರು ಪಕ್ಷದ ಉಪಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರಿಗೆ ಖಜಾಂಜಿ ಹುದ್ದೆಗೆ ಭಡ್ತಿ ಲಭಿಸಿರುವುದು ಪಕ್ಷದ ಹಿರಿತನದ ಏಣಿಯಲ್ಲಿ ಒಂದು ಹೆಜ್ಜೆ ಮೇಲೇರಿದಂತಾಗಿದೆ. ಸ್ಟಾಲಿನ್ ಅವರ ಹೆಸರು ಘೋಷಣೆಯಾಗುತ್ತಲೇ ಪಕ್ಷದ ಮಹಾಮಂಡಳಿಯ ಸದಸ್ಯರು ಎದ್ದುನಿಂತು ಸ್ವಾಗತ ಕೋರಿದರು. |