ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಿಷೇಧಿತ ಸಂಘಟನೆಗೆ ತಡೆ ಹೇರುವುದು ಪಾಕ್ ಜವಾಬ್ದಾರಿ: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಷೇಧಿತ ಸಂಘಟನೆಗೆ ತಡೆ ಹೇರುವುದು ಪಾಕ್ ಜವಾಬ್ದಾರಿ: ಪ್ರಣಬ್
ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ, ವಿಶ್ವಸಂಸ್ಥೆಯ ನಿಷೇಧ ಭೀತಿಯಲ್ಲಿರುವ ಉಗ್ರಗಾಮಿ ಸಂಘಟನೆ ಜಮಾದ್-ಉದ್-ದಾವಾ ಹೊಸ ಹೆಸರಿನಿಂದ ಕಾರ್ಯಾಚರಿಸಲು ಮುಂದಾಗುತ್ತಿರುವುದರ ಹಿನ್ನೆಲೆಯಲ್ಲಿ, ಅದು ಯಾವುದೇ ಹೆಸರಿನಲ್ಲೇ ಕಾರ್ಯಾಚರಿಸಿದರೂ ಅದರ ವಿರುದ್ಧ ಕ್ರಮಕೈಗೊಳ್ಳುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿ ಎಂದು ಭಾರತ ಶುಕ್ರವಾರ ಹೇಳಿದೆ.

ಜಮಾತ್ ಉದ್ ದಾವಾ ಸಂಘಟನೆಯನ್ನು ವಿಶ್ವಸಂಸ್ಥೆ ನಿಷೇಧಿಸಿದೆ ಎಂಬುದನ್ನು ಒತ್ತಿಹೇಳಿದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಅಂತಾರಾಷ್ಟ್ರೀಯ ಬದ್ಥತೆ ಮತ್ತು ಸಮನ್ವಯತೆಗಳಿಗೆ ಅನುವರ್ತಿಸಲು ಪಾಕಿಸ್ತಾನ ವಿಫಲವಾದಲ್ಲಿ ವಿಶ್ವ ಸಮುದಾಯವು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

"ಲಷ್ಕರೆ-ಇ-ತೋಯ್ಬಾವನ್ನು ನಿಷೇಧಿಸಿದಾಗ ಅದು ಜಮಾತ್ ಉದ್ ದಾವಾ ಎಂದಬ ಹೆಸರು ಇರಿಸಿಕೊಂಡಿತು. ಇದೀಗ ಈ ಸಂಘಟನೆಯನ್ನೂ ನಿಷೇಧಿಸಲಾಗಿದೆ. ಅದೀಗ ಇನ್ನೊಂದು ಹೆಸರಿನಲ್ಲಿ ಕಾರ್ಯಾಚರಿಸಬಹುದಾಗಿದೆ. ಇದು ನಾವು ಗಮನಿಸಿದಂತೆ ಪಾಕಿಸ್ತಾನದಲ್ಲಿ ನಡೆಯುವ ಶೈಲಿಯಾಗಿದೆ" ಎಂದು ಪ್ರಣಬ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಈ ನಿಷೇಧಿತ ಸಂಘಟನೆಗಳು ಯಾವುದೇ ರೀತಿಯಲ್ಲಿ, ಯೂವುದೇ ರೂಪದಲ್ಲಿ, ಯಾವುದೇ ಹೆಸರಿನಲ್ಲಿ ಚಟುವಟಿಕೆ ನಡೆಸದಂತೆ ತಡೆಯುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿಯಾಗಿ ಎಂದವರು ಹೇಳಿದರು.

ಜಮಾತ್ ಉದ್ ದಾವಾ ತನ್ನ ಹೆಸರನ್ನು 'ತೆಹ್ರೀಕ್-ಇ-ಹರ್ಮತ್-ಇ-ರಸೂಲ್'(ದೇವ ಮರ್ಯಾದೆಯ ರಕ್ಷಣೆಗಾಗಿ ಚಳುವಳಿ) ಎಂದು ಬದಲಿಸಿಕೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ದಿಗ್ಬಂಧನ ಹೇರಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ನಿಯಂತ್ರಣಗಳನ್ನು ಹೇರಬಹುದು ಎಂಬ ಕಾರಣದ ಹಿನ್ನೆಲೆಯಲ್ಲಿ ಜಮಾತ್ ಈ ಕ್ರಮಕ್ಕೆ ಮುಂದಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಎಸ್‌ಎಫ್‌ನಿಂದ ಇನ್ನಷ್ಟು ಬೆಟಾಲಿಯನ್‌ಗಳ ಬೇಡಿಕೆ
ಮಮತಾ ಆಹೋರಾತ್ರಿ ಧರಣಿ ಹಿಂತೆಗೆತ
ದೆಹಲಿಯಲ್ಲಿ ಮಂಜು: ವಿಮಾನ ಹಾರಾಟದಲ್ಲಿ ವ್ಯತ್ಯಯ
ಅರುಷಿ ಹಂತಕ ಆರೋಪಿಗಳಿಗೆ ಬುಲಾವ್
ಎಫ್‌ಬಿಐನಿಂದ ಉತ್ತಮ ಸುದ್ದಿ ನಿರೀಕ್ಷಿಸಿ: ರೈಸ್
ಯುಎಸ್, ಪಾಕ್‌ನೊಂದಿಗೆ ಸಾಕ್ಷ್ಯಧಾರ ಹಂಚಿಕೆ