ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾ(ತ)ಕಿಗಳ ಪುರಾವೆ ಒಪ್ಪಿಸಲು ಯುಎಸ್‌ಗೆ ಚಿದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾ(ತ)ಕಿಗಳ ಪುರಾವೆ ಒಪ್ಪಿಸಲು ಯುಎಸ್‌ಗೆ ಚಿದು
PTI
ಮುಂಬೈ ದಾಳಿ ಕುರಿತ ಪುರಾವೆಯನ್ನು ಅಮೆರಿಕದೊಂದಿಗೆ ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ. ಮುಂಬೈ ದಾಳಿ ಕುರಿತಾದ ಪುರಾವೆಗಳನ್ನು ಗೃಹಸಚಿವ ಪಿ.ಚಿದಂಬರಂ ಅವರು ವಾಶಿಂಗ್ಟನ್‌ಗೆ ಒಯ್ಯಲಿದ್ದಾರೆ. ಇದರಲ್ಲಿ ಬಂಧಿತರ ತಪ್ಪೊಪ್ಪಿಗೆಗಳು ಹಾಗೂ ಉಪಗ್ರಹ ಫೋನ್ ಸಂವಹನಗಳ ದಾಖಲೆ ಪತ್ರಗಳು ಒಳಗೊಂಡಿವೆ ಎನ್ನಲಾಗಿದೆ.

ಶನಿವಾರ ಚಿದಂಬರಂ ಅವರು ಭಾರತದಲ್ಲಿ ಅಮೆರಿಕ ರಾಯಭಾರಿ ಡೇವಿಡ್ ಮುಲ್ಫೋರ್ಡ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ಲಷ್ಕರೆಯಂತಹ ರಾಷ್ಟ್ರರಹಿತರ ಕುರಿತ ವಿವರಗಳು ಹಾಗೂ ಕೆಲವು ಪಾಕಿಸ್ತಾನಿ ಅಧಿಕಾರಿಗಳ ಕೈವಾಡದ ಸಂಕೀರ್ಣತೆಯ ಕುರಿತಾದ ದಾಖಲೆಗಳು ಈ ಪುರಾವೆಯಲ್ಲಿ ಇದೆ ಎನ್ನಲಾಗಿದೆ.

26/11ರ ರೂವಾರಿಗಳನ್ನು ಕಾನೂನಿನ ಕಟಕಟೆಗೆ ತರುವ ನಿಟ್ಟಿನಲ್ಲಿ ಭಾರತವು ಉದ್ದೇಶಿಸಿರುವ ಚಳುವಳಿಯಲ್ಲಿ ಇದೊಂದು ಅತಿದೊಡ್ಡ ಆರಂಭಿಕ ಹೆಜ್ಜೆಯಾಗಿದೆ. ಭಾರತವು ಪುರಾವೆಗಳನ್ನು ಪಾಕಿಸ್ತಾನದೊಂದಿಗೂ ಹಂಚಿಕೊಳ್ಳಲಿದೆಯಾದರೂ ಇದರಲ್ಲಿ ಆಯ್ದ ದಾಖಲೆಗಳು ಮಾತ್ರ ಒಳಗೊಂಡಿದೆ.

ಈ ಹಿಂದೆ ನೀಡಿದ್ದ ಪುರಾವೆಗಳನ್ನು ಒಂದೋ ತನ್ನನ್ನು ಮರೆಮಾಚಿಕೊಳ್ಳಲು ಇಲ್ಲವೇ ಎಲ್ಲಾ ಹಾದಿಗಳನ್ನು ಮುಚ್ಚಲು ಅಥವಾ ಪುರಾವೆಗಳನ್ನೇ ತಟಸ್ಥವಾಗಿಸಲು ಪಾಕಿಸ್ತಾನ ಬಳಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಹಾಗಾಗಿ ಈ ಬಾರಿ ಪಾಕಿಸ್ತಾನಕ್ಕೆ ಯಾವುದನ್ನು ನೀಡಬೇಕು ಎಂಬ ವಿಚಾರದಲ್ಲಿ ಎಚ್ಚರ ವಹಿಸಿರುವ ಭಾರತ ಕೇವಲ ಆಯ್ದವುಗಳನ್ನು ಮಾತ್ರ ನೀಡಲಿದೆಯಾದರೂ, ಉಗ್ರರ ಸಂಪರ್ಕಗಳ ಕುರಿತು ಒತ್ತಡ ಹೇರಲು ಈ ಪುರಾವೆಗಳು ಸಾಕೆನ್ನಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಎಸ್ಪಿ ಶಾಸಕನ ವಿರುದ್ಧ ಆರೋಪಪಟ್ಟಿ
ಉಗ್ರ ನಿಗ್ರಹಕ್ಕೆ ನಾವು ಯಾವುದಕ್ಕೂ ಸಿದ್ಧ: ಪ್ರಧಾನಿ
ಪೂಂಛ್: ಎಸ್‌ಪಿಒ, ಜೈಷೆ ಕಮಾಂಡರ್ ಗುಂಡಿಗೆ ಬಲಿ
ನಿಷೇಧಿತ ಸಂಘಟನೆಗೆ ತಡೆ ಹೇರುವುದು ಪಾಕ್ ಜವಾಬ್ದಾರಿ: ಪ್ರಣಬ್
ಬಿಎಸ್‌ಎಫ್‌ನಿಂದ ಇನ್ನಷ್ಟು ಬೆಟಾಲಿಯನ್‌ಗಳ ಬೇಡಿಕೆ
ಮಮತಾ ಆಹೋರಾತ್ರಿ ಧರಣಿ ಹಿಂತೆಗೆತ