ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ್‌ನಲ್ಲಿ ಭಾರಿ ಹಿಮಪಾತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಭಾರತದಲ್ಲಿ ಶೀತಗಾಳಿ ಬೀಸುತ್ತಿದ್ದು, ಅಸಾಧ್ಯಚಳಿಯಿಂದಾಗಿ ಭಾನುವಾರ 15 ಮಂದಿ ಸಾವನ್ನಪ್ಪಿದ್ದು ಇದುವರೆಗೆ ಸುಮಾರು 46 ಮಂದಿ ಚಳಿಗೆ ಆಹುತಿಯಾದಂತಾಗಿದೆ. ಇದಲ್ಲದೆ, ಎಲ್ಲೆಡೆ ದಟ್ಟ ಮಂಜು ಕವಿದಿದ್ದು, ರಸ್ತೆ, ರೈಲು ಮತ್ತು ವಾಯು ಸಾರಿಗೆಗೆ ಅಡ್ಡಿಯುಂಟಾಗಿದ್ದು ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಶಾಲಾಕಾಲೇಜುಗಳಿಗೆ ರಜೆ ಸಾರಲಾಗಿದೆ.ದಟ್ಟವಾಗಿ ಕವಿದಿರುವ ಮಂಜಿನಿಂದಾಗಿ ಕಾನ್ಪುರದಲ್ಲಿ ಗೂಡ್ಸ್ ರೈಲುಗಳ ಡಿಕ್ಕಿಯಾಗಿದ್ದು, ಚಾಲಕರುಗಳಲ್ಲೊಬ್ಬನ