ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್ ಪ್ರಮಾಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರ ಮುಖ್ಯಮಂತ್ರಿಯಾಗಿ ಒಮರ್ ಪ್ರಮಾಣ
PTI
ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ನ್ಯಾಶನಲ್ ಕಾನ್ಫರೆನ್ಸ್(ಎನ್‌ಸಿ) ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ಎನ್‌ಸಿ ಮತ್ತು ಕಾಂಗ್ರೆಸ್‌ ಮೈತ್ರಿಯ ಸಂಯುಕ್ತ ಸರ್ಕಾರದ ನೇತೃತ್ವ ವಹಿಸಿರುವ 38ರ ಹರೆಯದ ಒಮರ್, ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾಗಿದ್ದಾರೆ.

ಮಾಜಿ ಸ್ಪೀಕರ್ ಆಗಿದ್ದ ಕಾಂಗ್ರೆಸ್‌ನ ತಾರಾ ಚಂದ್ ಅವರು ಉಪಮುಖ್ಯಮಂತ್ರಿಯಾಗಿ ನೇಮಕವಾಗಿದ್ದಾರೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಬ್ದುಲ್ ರಹೀಮ್ ರಾಥರ್ ಅವರು ರಾಜ್ಯಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕಾಂಗ್ರೆಸ್‌‍ನ ಪೀರ್ಜಾದಾಸ್ ಮೊಹಮ್ಮದ್ ಸಯೀದ್(ಪ್ರದೇಶ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ), ತಾಜ್ ಮೊಯ್ದೀನ್, ನವಂಗ್ ರಿಗ್‌ಜಿನ್ ಜೋರಾ, ಶ್ಯಾಮ್ ಲಾಲ್ ಶರ್ಮಾ ಹಾಗೂ ನ್ಯಾಶನಲ್ ಕಾನ್ಫರೆನ್ಸ್‌ನ ಅಲಿ ಮೊಹಮ್ಮದ್ ಸಾಗರ್, ಮಿಯಾನ್ ಅಲ್ತಾಫ್, ಸುರ್ಜೀತ್ ಸಾಲತಿಯಾ ಅವರುಗಳು ಸಚಿವರಾಗಲಿದ್ದಾರೆ.

ಮುಖ್ಯಮಂತ್ರಿಸ್ಥಾನಕ್ಕೆ ಒಮರ್ ಅವರ ಹೆಸರನ್ನು ಅವರ ತಂದೆ ಫಾರೂಕ್ ಅಬ್ದುಲ್ಲಾ ಪ್ರಸ್ತಾಪಿಸಿದರೆ, ಇತರ 25 ಶಾಸಕರು ಅನುಮೋದಿಸಿದ್ದರು. ಫಾರೂಕ್ ಅವರು ಪಕ್ಷದ ರಾಷ್ಟ್ರಾಧ್ಯಕ್ಷರಾಗಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ಜಮ್ಮು ವಿಶ್ವವಿದ್ಯಾನಿಲಯದ ಜನರಲ್ ಜೋರ್ವಾರ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಮೋತಿಲಾಲ್ ವೋರಾ ಪ್ರಮಾಣ ವಚನ ಬೋಧಿಸಿದರು.

ತನ್ನ ಆಶುಭಾಷಣಗಳಿಂದ ಪ್ರಸಿದ್ಧಿ ಪಡೆದಿರುವ ಒಮರ್, 1998ರಲ್ಲಿ 12 ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದರು. ತನ್ನ 29ನೆ ಹರೆಯದಲ್ಲಿ ಒಮರ್ ಕೇಂದ್ರ ಸಚಿವರಾಗಿದ್ದು, ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಸಚಿವ ಎಂದು ಕರೆಸಿಕೊಂಡಿದ್ದರು. ಎನ್‌ಡಿಎ ಅಧಿಕಾರಾವಧಿಯಲ್ಲಿ ವಾಜಪೇಯಿ ಮಂತ್ರಿಮಂಡಲದಲ್ಲಿ ಮೊದಲಿಗೆ ವಾಣಿಜ್ಯ ಖಾತೆ ಹಾಗೂ ನಂತರದಲ್ಲಿ ವಿದೇಶಾಂಗ ವ್ಯವಹಾರ ಖಾತೆಯ ರಾಜ್ಯಸಚಿವರಾಗಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಧಿಕ ತೂಕದ 10 ಗಗನಸಖಿಯರಿಗೆ ಪಿಂಕ್‌ಸ್ಲಿಪ್
ಭಯಂಕರ ಚಳಿಗೆ ನಡುಗುತ್ತಿರುವ ಉತ್ತರ ಭಾರತ
ಪೂಂಛ್‌: 5ನೆ ದಿನಕ್ಕೆ ಮುಂದುವರಿದ ಗುಂಡಿನ ಕಾಳಗ
ಭಾರತದಿಂದ ಪಾಕ್ ಹೈಕಮಿಷನರ್‌ಗೆ ಪುರಾವೆ ಹಸ್ತಾಂತರ
ಇನ್‌ಫೋಸಿಸ್, ವಿಪ್ರೊಗೆ ಉಗ್ರರ ಬೆದರಿಕೆ
ಜಮ್ಮು: ಮುಂದುವರಿದ ಉಗ್ರರ ದಮನ ಕಾರ್ಯ